Bengaluru 23°C
Ad

ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್​ ಅಯ್ಯರ್​

ಟೀಮ್​ ಇಂಡಿಯಾದ ಕ್ರಿಕೆಟಿಗ, ಕೆಕೆಆರ್​ ತಂಡದ ಸೂಪರ್​ ಸ್ಟಾರ್​ ವೆಂಕಟೇಶ್​ ಅಯ್ಯರ್​ ಅವರು ತಮ್ಮ ಬಹುಕಾಲದ ಗೆಳತಿ ಶೃತಿ ರಘುನಾಥನ್ ಅವರೊಂದಿಗೆ ದಾಂಪತ್ಯ ಬದುಕಿಗೆ ಅಡಿಯಿರಿಸಿದರು.

ಬೆಂಗಳೂರು​: ಟೀಮ್​ ಇಂಡಿಯಾದ ಕ್ರಿಕೆಟಿಗ, ಕೆಕೆಆರ್​ ತಂಡದ ಸೂಪರ್​ ಸ್ಟಾರ್​ ವೆಂಕಟೇಶ್​ ಅಯ್ಯರ್​ ಅವರು ತಮ್ಮ ಬಹುಕಾಲದ ಗೆಳತಿ ಶೃತಿ ರಘುನಾಥನ್ ಅವರೊಂದಿಗೆ ದಾಂಪತ್ಯ ಬದುಕಿಗೆ ಅಡಿಯಿರಿಸಿದರು.

ಭಾನುವಾರ ಈ ಜೋಡಿಯ ವಿವಾಹ ಸಂಪ್ರದಾಯಬದ್ಧವಾಗಿ ನೆರವೇರಿತು. ಮದುವೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಕೆಕೆಆರ್​ ಫ್ರಾಂಚೈಸಿ ಮತ್ತು ತಂಡದ ಸಹ ಆಟಗಾರರು ಸೇರು ಅನೇಕ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಈ ಜೋಡಿಗೆ ಶುಭ ಹಾರೈಸಿದ್ದಾರೆ.

ಕಳೆದ ವರ್ಷ ನವೆಂಬರ್ 21, 2023ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಸಪ್ತಪದಿ ತುಳಿದಿದ್ದಾರೆ. ವೆಂಕಟೇಶ್​ ಅಯ್ಯರ್ ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ ಕೆಕೆಆರ್ ತಂಡದ ಸದ್ಯನಾಗಿದ್ದಾರೆ. ಈ ಬಾರಿ 14 ಪಂದ್ಯಗಳನ್ನಾಡಿ 370 ರನ್​ ಬಾರಿಸಿದ್ದಾರೆ. ಫೈನಲ್​ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ತಮ್ಮ ಗೆಳತಿ ಜೊತೆ ದಾಂಪತ್ಯ

 

Ad
Ad
Nk Channel Final 21 09 2023
Ad