ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು ಮತ್ತು ದಲಿತರೇ ಟಾರ್ಗೆಟ್ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ನಾಗಮಂಗಲ ಗಲಭೆ ಕೇಸ್‌ನಲ್ಲಿ ಹಿಂದೂ ಯುವಕರ ಮೇಲೆ ಕೇಸ್ ಹಾಕಿರೋ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಇವತ್ತು ಮಾತ್ರವಲ್ಲ ಹಿಂದಿನಿಂದಲೂ ಒಂದು ಸಮುದಾಯದ ತುಷ್ಟೀಕರಣ ಮಾಡಿಕೊಂಡು ಬರುತ್ತಿದೆ. ಈ ಸರ್ಕಾರಕ್ಕೆ ಹಿಂದೂಗಳು, ದಲಿತರೇ ಟಾರ್ಗೆಟ್ ಆಗುತ್ತಿದ್ದಾರೆ. ಯಾದಗಿರಿಯಲ್ಲಿ ಊರಿನಿಂದ ದಲಿತರನ್ನ ಬಹಿಷ್ಕಾರ ಮಾಡಿದ್ದಾರೆ. ರಾಮನಗರದಲ್ಲಿ ಇಂತಹ ಘಟನೆ ಆಗಿದೆ. ಕಾಂಗ್ರೆಸ್‌ಗೆ ತುಷ್ಟೀಕರಣ ರಾಜಕೀಯದ ಭಾಗವಾಗಿದೆ ಅಂತಾ ಕಿಡಿಕಾರಿದರು.
ಜನರು ನೆಮ್ಮದಿಯಿಂದ ಇರಬೇಕು ಅಂತಾ ಕಾಂಗ್ರೆಸ್‌ಗೆ ಅನ್ನಿಸೋದಿಲ್ಲ. ಹಿಂದೂ ವಿಚಾರ ಬಂತು ಅಂದರೆ ಸಾಕು ಎತ್ತಿಕಟ್ಟಿ ಧಮನ ಮಾಡೋ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಹೀಗೆ ಕಾಂಗ್ರೆಸ್ ಮಾಡುತ್ತಾ ಹೋದರೆ ಈ ದೇಶದಲ್ಲಿ ನಿರ್ನಾಮ ಆಗುತ್ತದೆ. ಹಿಂದೂಗಳ ಪರ ಬಿಜೆಪಿ ನಿಲ್ಲುತ್ತದೆ. ಹಿಂದೂಗಳ ರಕ್ಷಣೆಗೆ ಬಿಜೆಪಿ ಇರುತ್ತದೆ. ಕಾಂಗ್ರೆಸ್ ಮಾತು ಕೇಳುವ ಮುಸ್ಲಿಮರು ಹಿಂದೂಗಳನ್ನು ವಿರೋಧ ಮಾಡೋದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.