ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಆಚರಣೆಯ ಅಂಗವಾಗಿ ಬುಧವಾರ ಸಿಎಂ ಸಿದ್ದರಾಮಯ್ಯ ನಗರದ ಗಾಂಧಿ ಭವನದಲ್ಲಿ ಧ್ವಜಾರೋಹಣ ಹಾಗೂ ಗಾಂಧಿ ಪ್ರತಿಮೆಗೆ ಪುಷ್ಪಮಾಲೆ ಹಾಕುವ ಮುನ್ನ ಸಿಎಂ ಸಿದ್ದರಾಮಯ್ಯ ಶೂ ಬಿಚ್ಚಲು ಮುಂದಾಗಿದ್ದು, ಈ ವೇಳೆ ಕಾರ್ಯಕರ್ತರೊಬ್ಬರು ಸಿಎಂ ಅವರ ಕಾಲಿನ ಶೂ ಬಿಚ್ಚಲು ಸಹಾಯ ಮಾಡಿದ್ದು ಚರ್ಚೆಗೆ ಕಾರಣವಾಗಿದೆ.
ಧ್ವಜಾರೋಹಣಕ್ಕೆಂದು ಸಿಎಂ ಸಿದ್ದರಾಮಯ್ಯ ಶೂ ಬಿಚ್ಚಲು ಹೋದಾಗ ಅವರು ಬಗ್ಗಿ ಲೇಸ್ ಬಿಚ್ಚಲು ಸಾಧ್ಯವಾಗಿರಲಿಲ್ಲ. ಇದನ್ನು ಕಂಡ ಕಾರ್ಯಕರ್ತರೊಬ್ಬರು ಸಿದ್ದರಾಮಯ್ಯ ಶೂ ಲೇಸ್ ಬಿಚ್ಚಲು ಸಹಾಯ ಮಾಡಲು ಮುಂದಾದರು. ಆದರೆ ಕೈಯಲ್ಲಿ ಭಾರತ ಧ್ವಜ ಇರೋದನ್ನೇ ಆತ ಮರೆತ್ತಿದ್ದರು, ಇದನ್ನು ಮನಗಂಡು ಪಕ್ಕದಲ್ಲಿದ್ದ ವ್ಯಕ್ತಿ ಕೂಡಲೇ ಕಾರ್ಯಕರ್ತನ ಕೈಯಲ್ಲಿದ್ದ ರಾಷ್ಟಧ್ವಜವನ್ನು ಕಿತ್ತುಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಶೂ ಲೇಸ್ ಬಿಚ್ಚುವ ವೇಳೆ ಧ್ವಜ ಕಾಲಿಗೆ ತಾಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಕಾರ್ಯಕರ್ತ ಶೂ ಲೇಸ್ ಬಿಚ್ಚುವ ವೇಳೆ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಶೂ ಲೇಸ್ ಬಿಚ್ಚಿರುವುದು ಸದ್ಯ ಭಾರೀ ಟೀಕೆಗೆ ಕಾರಣವಾಗಿದೆ.