News Karnataka Kannada
Sunday, April 14 2024
Cricket
ಚಿತ್ರದುರ್ಗ

ಚಿತ್ರದುರ್ಗ: ವ್ಯಕ್ತಿಯ ತಲೆ ಕಡಿದು ಜಮೀನಿನಲ್ಲಿ ಹೂತಿಟ್ಟ ಕಿರುತೆರೆ ಕಲಾವಿದ ಬಂಧನ

Photo Credit :

ಧರ್ಮಪುರ (ಚಿತ್ರದುರ್ಗ) : ಇಲ್ಲಿಗೆ ಸಮೀಪದ ಶ್ರಾವಣಗೆರೆಯಲ್ಲಿ ನೆರೆ ಮನೆಯ ನಿವಾಸಿಯ ತಲೆ ಕಡಿದು ಜಮೀನಿನಲ್ಲಿ ಹೂತಿಟ್ಟ ಆರೋಪದ ಮೇರೆಗೆ ಕಿರುತೆರೆಯ ಸಹಕಲಾವಿದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಿರಿಯೂರು ತಾಲ್ಲೂಕಿನ ಶ್ರಾವಣಗೆರೆಯ ನಿವಾಸಿ ರಮೇಶ (45) ಕೊಲೆಯಾದ ವ್ಯಕ್ತಿ.

ಕೊಲೆ ಆರೋಪದ ಮೇರೆಗೆ ಶ್ರೀನಿವಾಸ (40) ಎಂಬಾತನನ್ನು ಅಬ್ಬಿನಹೊಳೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ ಹಲವು ಧಾರಾವಾಹಿಗಳಲ್ಲಿ ಸಹಕಲಾವಿದನಾಗಿ ನಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಮೇಶ ಮತ್ತು ಶ್ರೀನಿವಾಸ ನೆರೆ ಮನೆಯ ನಿವಾಸಿಗಳು. ಹಲವು ವರ್ಷಗಳಿಂದ ಇಬ್ಬರೂ ಬೆಂಗಳೂರಿನಲ್ಲಿ ವಾಸವಾಗಿದ್ದರು. ಯುಗಾದಿ ಹಬ್ಬಕ್ಕೆ ಹಳ್ಳಿಗೆ ಮರಳಿದ್ದರು. ಕೊಲೆಗೆ ಹಳೆ ವೈಷಮ್ಯ, ವಾಮಾಚಾರ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೇಸಿಗೆ ಸೆಕೆಯ ಕಾರಣಕ್ಕೆ ರಮೇಶ ಮನೆ ಬಾಗಿಲು ತೆರೆದು ಮಲಗಿದ್ದರು. ಮನೆ ಹೊರಗೆ ರಮೇಶ ಅವರ ತಂದೆಯೂ ನಿದ್ದೆಗೆ ಜಾರಿದ್ದರು. ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ಆರೋಪಿಯು ರಮೇಶ ಅವರ ತಲೆಯನ್ನು ಮಚ್ಚಿನಿಂದ ಕಡಿದಿದ್ದಾನೆ. ಯಾರಿಗೂ ಗೊತ್ತಾಗದಂತೆ ಜಮೀನಿಗೆ ಕೊಂಡೊದ್ದು ಹೂತು ಹಾಕಿದ್ದಾನೆ. ರಮೇಶ ಅವರ ತಂದೆಗೆ ನಸುಕಿನಲ್ಲಿ ಎಚ್ಚರವಾದಾಗ ಪ್ರಕರಣ ಬೆಳಕಿಗೆ ಬಂದಿದೆ.

ಡಿವೈಎಸ್ ಪಿ ರೋಷನ್ ಜಮೀರ್, ಸಿಪಿಐ ರಾಘವೇಂದ್ರ, ಪಿಎಸ್‌ಐ.ಪರಶುರಾಮ್ ಎಸ್.ಲಮಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು