ಬ್ಯಾಂಕಿನ ಸ್ವೀಕೃತಿ ಚಲನ್​ ತಿದ್ದಿ 1.57 ಕೋಟಿ ರೂ. ವಂಚನೆ: ಆರೋಪಿ ನಾಪತ್ತೆ

ಚಿಕ್ಕಬಳ್ಳಾಪುರ/ಚಿಂತಾಮಣಿ : ಅಲ್ಪ ಪ್ರಮಾಣದಲ್ಲಿ ಪಾವತಿಯಾದ ಬ್ಯಾಂಕಿನ ಸ್ವೀಕೃತಿ ಚಲನ್​ಗಳನ್ನು ತಿದ್ದಿರುವ ಗುಮಾಸ್ತನೊಬ್ಬ 1.57 ಕೋಟಿ ರೂ. ವಂಚಿಸಿರುವ ಪ್ರಕರಣ ಚಿಂತಾಮಣಿ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಚಿಂತಾಮಣಿ ತಾಲೂಕಿನ ಕರಿಯಪಲ್ಲಿಯ ಖಾದಿ ಗ್ರಾಮೋದ್ಯಮ ಸಂಘದ ಕಾತಿರ್ಕ್​(38) ಆರೋಪಿ. ವಂಚನೆ ಬಗ್ಗೆ ಸಂಘದ ಮುಖ್ಯಸ್ಥ ಎನ್​.ಶ್ರೀರಾಮರೆಡ್ಡಿ ಅವರು ನಗರ ಠಾಣೆಗೆ ದೂರು ನೀಡಿದ್ದಾರೆ. 7 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಖಾದಿ ಗ್ರಾಮೋದ್ಯಮ ಸಂಘದ ನೇತೃತ್ವದಲ್ಲಿ ರೇಷ್ಮೆ ಉತ್ಪತ್ತಿ ಮತ್ತು ಬಟ್ಟೆ ತಯಾರು ಘಟಕದ ಗುಮಾಸ್ತ ಕಾರ್ತಿಕ್​,​ ನಿಗದಿತ ದಿನದಂದು ಬ್ಯಾಂಕಿನಲ್ಲಿ ಹಣ ಪಾವತಿ ಮತ್ತು ಸ್ವೀಕೃತಿ ಜವಾಬ್ದಾರಿ ವಹಿಸಿಕೊಂಡಿದ್ದ. ಇದರ ನಡುವೆ ಇತ್ತೀಚೆಗೆ ಘಟಕದಲ್ಲಿನ ನೌಕರರಿಗೆ ವೇತನ ನೀಡಲು ಸಂಘದ ಮುಖ್ಯಸ್ಥರು, ಖಾತೆ ಹೊಂದಿರುವ ಕೆನರಾ ಬ್ಯಾಂಕಿಗೆ ಚೆಕ್​ ಕಳುಹಿಸಿದ್ದಾರೆ. ಆದರೆ, ಬ್ಯಾಂಕಿನ ವ್ಯವಸ್ಥಾಪಕರು ಖಾತೆಯಲ್ಲಿ ಹಣ ಇಲ್ಲದಿರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ 1,57,16,000 ರೂ. ವಂಚನೆ ಆಗಿರುವುದು ಬೆಳಕಿಗೆ ಬಂದಿದೆ. ಇದರ ಬಗ್ಗೆ ತಿಳಿಯುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದಾನೆ. ಅಂದಹಾಗೇ ಹಣ ಲಪಟಾಯಿಸಲು ಈತ ರಸೀದಿಯನ್ನ ಹೇಗೆ ತಿದ್ದುಪಡಿ ಮಾಡುತ್ತಿದ್ದ ಗೊತ್ತಾ? ಇದನ್ನು ನೋಡಿ ಸಂಘದ ಪದಾಧಿಕಾರಿಗಳು ಮತ್ತು ಪೊಲೀಸರೇ ಶಾಕ್​ ಆಗಿದ್ದಾರೆ.

ಕೋಟ್ಯಂತರ ರೂ. ಹಣ ಲಪಟಾಯಿಸಿದ ವಂಚಕನ ಖತರ್ನಾಕ್​ ಕೌಶಲಕ್ಕೆ ಸಂಘದ ಪದಾಧಿಕಾರಿಗಳು ಮತ್ತು ಪೊಲೀಸರೇ ಶಾಕ್​ ಆಗಿದ್ದಾರೆ. ಖಾತೆಗೆ ಕೇವಲ 1 ಸಾವಿರದಿಂದ 10 ಸಾವಿರ ರೂ. ಕಟ್ಟುವುದು, ಬಳಿಕ ಯಾರಿಗೂ ಅನುಮಾನ ಬಾರದಂತೆ ಸಾವಿರ ಲೆಕ್ಕದಲ್ಲಿನ ಅಂಕಿ-ಅಂಶಗಳಲ್ಲಿ ಸೊನ್ನೆಗಳನ್ನು, ಲಕ್ಷ ರೂ. ಪಾವತಿಯ ಪದಗಳನ್ನು ತಾನೇ ಬರೆದಿರುವ ಬ್ಯಾಂಕಿನ ಸ್ವೀಕೃತಿಯ ಚಲನ್​ಗಳನ್ನು ತೋರಿಸುವ ಮೂಲಕ ವಂಚಿಸುತ್ತಿದ್ದ. ಬ್ಯಾಂಕಿನ ಸೀಲು ಮತ್ತು ಮುದ್ರೆ ಸರಿಯಾಗಿ ಇರುತ್ತಿದ್ದ ಹಿನ್ನೆಲೆಯಲ್ಲಿ ಯಾರೂ ಅನುಮಾನ ಪಡುತ್ತಿರಲಿಲ್ಲ. ಇದರಿಂದ ನಿರಂತರವಾಗಿ ನಕಲಿ ಚಲನ್​ಗಳಲ್ಲಿ ಸಂಘದ ಹಣ ಲಪಟಾಯಿಸಿ, ವೈಯಕ್ತಿಕ ಖಾತೆಗೆ ಜಮಾ ಮಾಡಿಕೊಂಡಿದ್ದಾನೆ. ಸಂಘದ ಖಾತೆಯಲ್ಲಿ ಹಣವಿಲ್ಲ. ಆದರೂ ಬ್ಯಾಂಕ್​ಗೆ ಚೆಕ್​ ಕಳುಹಿಸಿದ್ದೀರಲ್ಲಾ ಎಂದು ಬ್ಯಾಂಕಿನ ವ್ಯವಸ್ಥಾಪಕರು ಮೊಬೈಲ್​ ಕರೆ ಮಾಡಿ ತಿಳಿಸಿದಾಗಲೇ ವಂಚನೆ ಆಗಿರುವುದು ಗೊತ್ತಾಗಿದೆ.

Gayathri SG

Recent Posts

ಕುಡಿಯುವ ನೀರಿನ ಸಮಸ್ಯೆ: ಕಲುಷಿತ ನೀರು ಸೇವಿಸಿ 114 ಮಂದಿಗೆ ಕಾಲರಾ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಧಾನಸಭೆ ಕ್ಷೇತ್ರವಾದ ವರುಣದ ತಗಡೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಅಲ್ಲಿನ ಜನ…

7 seconds ago

ಆರ್‌ಸಿಬಿ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡದೇ ಮೈದಾನದಿಂದ ತೆರಳಿದ ಧೋನಿ..!

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 27 ರನ್​ಗಳಿಂದ…

11 mins ago

ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ಬಂದಿದೆ ಹಸಿರು ಕಳೆ

ಬೇಸಿಗೆಯ ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ವರುಣನ ಕೃಪೆಯಿಂದ ಹಸಿರು ಕಳೆ ಬಂದಿದೆ.  ಜನವರಿಯಿಂದ ಏಪ್ರಿಲ್ ತನಕವೂ ಮಳೆ ಸುರಿಯದ…

21 mins ago

ಆರ್​ಸಿಬಿಗೆ ಟ್ವೀಟ್​ ಮೂಲಕ ವಿಜಯ್​ ಮಲ್ಯ ಅಭಿನಂದನೆ

ಶನಿವಾರ ತಡರಾತ್ರಿ ನಡೆದ ಐಪಿಎಲ್​ನ ರೋಚಕ ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಹಾಲಿ ಚಾಂಪಿಯನ್​…

31 mins ago

ತಾಯಿಯ ಶವದ ಜೊತೆಗೆ ನಾಲ್ಕು ದಿನ ಕಳೆದಿದ್ದ ಬುದ್ಧಿಮಾಂದ್ಯ ಪುತ್ರಿಯೂ ಮೃತ್ಯು

ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ ತನ್ನ ತಾಯಿಯ ಮೃತದೇಹದ ಮುಂದೆ ಅನ್ನ ನೀರು ಇಲ್ಲದೆ ಇದ್ದ ವಿಶೇಷಚೇತನ ಮಗಳು ಕೂಡ…

37 mins ago

ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡ ಜೀವಕ್ಕೆ ಗಂಡಾಂತರ

ಇಂದಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹೀಗೆ ರಕ್ತದೊತ್ತಡ ಸಮಸ್ಯೆ ಕಾಡುವುದಕ್ಕೆ ಕಾರಣಗಳು ಹಲವು. ಅದರಲ್ಲಿಯೂ ಮುಖ್ಯವಾಗಿ ನಮ್ಮ ಜೀವನ…

42 mins ago