ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ಗೂಂಡಾಗಿರಿ ತೋರಿಸಿದ್ದಾನೆ. ಕಾರು ಚಾಲಕನ ಮುಖಕ್ಕೆ ಉಗಿದು ಬಳಿಕ ಕಾರಿನ ಮಿರರ್ ಹೊಡೆದು ಹಾಕಿದ್ದಾನೆ. ಬೆಂಗಳೂರಿನ ಮಾರತಹಳ್ಳಿಯ ಯಮಲೂರು ಸಿಗ್ನಲ್ ಬಳಿ ಆಗಸ್ಟ್ 5ರಂದು ಈ ಘಟನೆ ನಡೆದಿದೆ.
ಕ್ಷುಲ್ಲಕ ವಿಚಾರಕ್ಕೆ ಕಾರು ಚಾಲಕ ಹಾಗೂ ಆಟೋ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಕಾರು ಚಾಲಕ ವಿಡಿಯೊ ರೆಕಾರ್ಡ್ ಮಾಡುತ್ತಿರುವುದನ್ನು ನೋಡಿದ ಆತ ಆಟೋದಿಂದ ಇಳಿದು ಬಂದವನೇ ಅವಾಚ್ಯ ಶಬ್ಧಗಳಿಂದ ನಿಂದಿಸಲು ಶುರು ಮಾಡಿದ್ದಾನೆ. ಬಳಿಕ ಕಾರು ಚಾಲಕ ಮುಖಕ್ಕೆ ಉಗಿದು, ಕಾರಿಗೆ ಹೊಡೆದು, ಮಿರರ್ ಕಿತ್ತು ಹಾಕಿದ್ದಾನೆ.
ಕಾರು ಚಾಲಕ ದೂರಿನ ಮೇಲೆ ಆಟೋ ಚಾಲಕನ ಪತ್ತೆ ಮಾಡಿ ಪೊಲೀಸರು ಬಂಧಿಸಿದ್ದಾರೆ. ಚಾಲಕನ ವಿರುದ್ಧ ಬಿ.ಎನ್.ಎಸ್ ಸೆಕ್ಷನ್ 126(2), 324(4), 351(2), 352 ಅಡಿ ಎಫ್.ಐ.ಆರ್ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
Ad