Bengaluru 21°C
Ad

ಬೆಂಗಳೂರು-ಮೈಸೂರು ದಶಪಥ  ಹೆದ್ದಾರಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಂಭೀರ ಗಾಯ

ಬೆಂಗಳೂರು-ಮೈಸೂರು ದಶಪಥ  ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಕಾರೊಂದು  ಹೆದ್ದಾರಿ ಪಕ್ಕದ ಕೆರೆಗೆ ಬಿದ್ದ ಘಟನೆ ನಡೆದಿದೆ. 

ರಾಮನಗರ: ಬೆಂಗಳೂರು-ಮೈಸೂರು ದಶಪಥ  ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಕಾರೊಂದು  ಹೆದ್ದಾರಿ ಪಕ್ಕದ ಕೆರೆಗೆ ಬಿದ್ದ ಘಟನೆ ನಡೆದಿದೆ.

Ad

ಈ ಘಟನೆಯಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Ad

ಬೆಂಗಳೂರಿನಿಂದ  ಸ್ಕೋಡಾ ಕಾರು ಮೈಸೂರು ಕಡೆಗೆ ಹೋಗುತ್ತಿತ್ತು. ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗೇಟ್ ಬಳಿ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಬರುವ ವೇಳೆ ಘಟನೆ ನಡೆದಿದೆ.

Ad

ಫಿಲ್ಮೀ ಸ್ಟೈಲ್‌ನಲ್ಲಿ ಕಾರು ಕೆರೆಗೆ ಬಿದ್ದಿದ್ದು, ಓವರ್ ಸ್ಪೀಡ್‌ನಿಂದಾಗಿ ಸರ್ವಿಸ್ ರಸ್ತೆಗೆ ಬರುವ ವೇಳೆ ಕಾರು ಕೆರೆಗೆ ಹಾರಿದೆ. ಘಟನೆಯಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

Ad

ಘಟನಾ ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ad
Ad
Ad
Nk Channel Final 21 09 2023