Bengaluru 27°C
Ad

ಸಂಚಾರ ನಿಯಮ ಪಾಲನೆ ಮಾಡದವರ ಲೈಸೆನ್ಸ್ ರದ್ದು : ಸಿಎಂ

ಸಂಚಾರ ನಿಯಮ ಪಾಲನೆ ಮಾಡದವರ ಲೈಸೆನ್ಸ್ ರದ್ದು ಮಾಡುವ ನಿಯಮ ರಾಜ್ಯದಲ್ಲೂ ಜಾರಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸಾರಿಗೆ ಇಲಾಖೆಗೆ ಸೂಚನೆ ನೀಡಿದರು.

ಬೆಂಗಳೂರು: ಸಂಚಾರ ನಿಯಮ ಪಾಲನೆ ಮಾಡದವರ ಲೈಸೆನ್ಸ್ ರದ್ದು ಮಾಡುವ ನಿಯಮ ರಾಜ್ಯದಲ್ಲೂ ಜಾರಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸಾರಿಗೆ ಇಲಾಖೆಗೆ ಸೂಚನೆ ನೀಡಿದರು.

ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ ಯೋಜನೆಯಡಿ ನೂತನ 65 ಅಂಬುಲೆನ್ಸ್ ಲೋಕಾರ್ಪಣೆ ಮಾಡಿ ಮಾತನಾಡಿದ ಸಿಎಂ, ನಿಯಮ ಪಾಲನೆ ಮಾಡುವಂತೆ ಜನರಿಗೆ ಕರೆ ಕೊಟ್ಟರು. ಅಪಘಾತ ಕಡಿಮೆ ಆಗಲು ಕಾರ್, ಸ್ಕೂಟರ್, ವಾಹನಗಳು ಓಡಿಸೋರು ನಿಯಮ ಪಾಲನೆ ಮಾಡಬೇಕು.

ವಿದೇಶಗಳಲ್ಲಿ ನಿಯಮ ಪಾಲನೆ ಮಾಡದೇ ಹೋದ್ರೆ ಲೈಸೆನ್ಸ್ ರದ್ದು ಮಾಡ್ತಾರೆ. ನಮ್ಮಲ್ಲೂ ಲೈಸೆನ್ಸ್ ರದ್ದು ಮಾಡೋ ನಿಯಮ ‌ಮಾಡಬೇಕು ಎಂದು ವೇದಿಕೆ ಮೇಲಿದ್ದ ಸಾರಿಗೆ ಸಚಿವರಿಗೆ ಸಿಎಂ ಸೂಚನೆ ನೀಡಿದರು. ಇನ್ಮುಂದೆ ನಿಯಮ ಪಾಲನೇ ಮಾಡದೇ ಹೋದ್ರೆ ನೋಟಿಸ್ ಕೊಡಬೇಡಿ‌, ಲೈಸೆನ್ಸ್ ಕ್ಯಾನ್ಸಲ್ ಮಾಡಿ. ಬೇಕಾದರೆ ಅವರು ಕೋರ್ಟ್‌ಗೆ ಹೋಗಲಿ.

ಕುಡಿದು ವಾಹನ ಓಡಿಸೋದು, ವೇಗವಾಗಿ ಓಡಿಸೋರು ಸೇರಿ ನಿಯಮ ಪಾಲನೆ ಮಾಡದೇ ಹೋದರೆ ಲೈಸೆನ್ಸ್ ರದ್ದು ಮಾಡಿ ಎಂದು ಸಾರಿಗೆ ಇಲಾಖೆಗೆ ಸೂಚನೆ ಕೊಟ್ಟರು. ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, MLC ನಾಗರಾಜ್ ಯಾದವ್ ಸೇರಿ ಹಲವರು ಭಾಗಿಯಾಗಿದ್ದರು.

Ad
Ad
Nk Channel Final 21 09 2023