Ad

ಬ್ಯುಸಿನೆಸ್ ಲಾಸ್‌; ಆತ್ಮಹತ್ಯೆಗೆ ಶರಣಾದ ಹೋಟೆಲ್ ಮ್ಯಾನೇಜರ್

Sannid

ಬೆಂಗಳೂರು: ನೆಲಮಂಗಲದ ಶ್ರೀನಂದಿ ವೈಭವ್ ಹೋಟೆಲ್ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸನ್ನಿಧಿ(24) ಮೃತ ವ್ಯಕ್ತಿ. ಹೋಟೆಲ್ ಪಕ್ಕದ ಜಾಗದಲ್ಲಿ ಕಬ್ಬಿಣದ ಆ್ಯಂಗಲ್​ಗೆ ಸ್ಕ್ರೀನ್ ಬಟ್ಟೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವ್ಯವಹಾರದಲ್ಲಿ ಮನಸ್ಸಿಗೆ ಬೇಜಾರು ಮಾಡಿಕೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಮೃತನ ಅಕ್ಕ ಶ್ರೀನಿಧಿಶೆಟ್ಟಿ ಎಂಬುವವರು ನೆಲಮಂಗಲ ಟೌನ್ ಠಾಣೆಗೆ ದೂರು ನೀಡಿದ್ದು, ಆತ್ಮಹತ್ಯೆ ಬಗ್ಗೆ ಯಾವುದೇ ಅನುಮಾನ ಇಲ್ಲವೆಂದು ಹೇಳಿಕೆ ಕೊಟ್ಟಿದ್ದಾರೆ. ಇನ್ನು ಹೋಟೆಲ್​ನಲ್ಲಿ ಕೆಲಸ ಮಾಡುವ ಸಮಂತ್ ಅವರಿಂದ ಪ್ರಕರಣ ಬೆಳಕಿಗೆ ಬಂದಿದೆ.

Ad
Ad
Nk Channel Final 21 09 2023