Ad

ರೇಣುಕಾಸ್ವಾಮಿ ಮೇಲೆ ಕ್ರೂರ ಹಲ್ಲೆ : ಇಲ್ಲಿದೆ ಪೋಸ್ಟ್‌ಮಾರ್ಟಂ ರಿಪೋರ್ಟ್‌

ನಟ ದರ್ಶನ್‌ ಮತ್ತು ಆತನ ಗ್ಯಾಂಗ್‌ ಸೇರಿ ರೇಣುಕಾಸ್ವಾಮಿ ಮೇಲೆ ಕ್ರೂರ ಹಲ್ಲೆ ನಡೆಸಿರುವ ಬಗ್ಗೆ ಪೋಸ್ಟ್‌ಮಾರ್ಟಂ ರಿಪೋರ್ಟ್‌ನಿಂದ ಸಂಪೂರ್ಣ ಮಾಹಿತಿ ದೊರೆತಿದೆ. ಕೈ ಸಿಕ್ಕ ವಸ್ತುಗಳಿಂದ ರೇಣುಕಾಸ್ವಾಮಿ ದೇಹದ ಎಲ್ಲಾ ಭಾಗಗಳಿಗೂ ಹಲ್ಲೆಮಾಡಿರುವದಾಗಿ ತಿಳಿದುಬಂದಿದೆ.

ಬೆಂಗಳೂರು: ನಟ ದರ್ಶನ್‌ ಮತ್ತು ಆತನ ಗ್ಯಾಂಗ್‌ ಸೇರಿ ರೇಣುಕಾಸ್ವಾಮಿ ಮೇಲೆ ಕ್ರೂರ ಹಲ್ಲೆ ನಡೆಸಿರುವ ಬಗ್ಗೆ ಪೋಸ್ಟ್‌ಮಾರ್ಟಂ ರಿಪೋರ್ಟ್‌ನಿಂದ ಸಂಪೂರ್ಣ ಮಾಹಿತಿ ದೊರೆತಿದೆ. ಕೈ ಸಿಕ್ಕ ವಸ್ತುಗಳಿಂದ ರೇಣುಕಾಸ್ವಾಮಿ ದೇಹದ ಎಲ್ಲಾ ಭಾಗಗಳಿಗೂ ಹಲ್ಲೆಮಾಡಿರುವದಾಗಿ ತಿಳಿದುಬಂದಿದೆ.

Ad
300x250 2

ರೇಣುಕಾಸ್ವಾಮಿ ದೇಹದ ಎಲ್ಲೆಲ್ಲಿ ಗಾಯವಾಗಿತ್ತು?
ಮರಣೋತ್ತರ ಪರಿಕ್ಷೆ ವರದಿಯ ಆಧಾರದಲ್ಲಿ ರೇಣುಕಾ ಸ್ವಾಮಿಯ ಮರ್ಮಾಂಗದ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಇದು ಮನುಷ್ಯನಿಗೆ ಅತೀವವಾದ ನೋವು ತರುವ ಆಘಾತವಾಗಿದೆ. ಕೊಲೆಗಾರರ ಹೊಡೆತಕ್ಕೆ ರೇಣುಕಾ ಅವರ ಮರ್ಮಾಂಗದಲ್ಲಿ ಆಂತರಿಕ ಹಾಗೂ ಬಾಹ್ಯ ರಕ್ತ ಸ್ರಾವ ಉಂಟಾಗಿದೆ.

ರೇಣುಕಾ ಅವರ ಹೊಟ್ಟೆಯ ಮೇಲೂ ಗಂಭಿರವಾಗಿ ಗಾಯವಾಗಿದ್ದು ರಕ್ತ ಹೆಪ್ಪುಗಟ್ಟಿದೆ,ಅಂದರೆ ಮರದ ದೊಣ್ಣೆಗಳಿಂದ ಅವರ ಮುಖ, ಮೂತಿ ನೋಡದೆ ಹಲ್ಲೆ ಮಾಡಿರುವುದು ಖಾತರಿಯಾಗಿದೆ.

ತಲೆಯ ಭಾಗದಲ್ಲಿ ರಕ್ತ ಸೋರಿಕೆ ಅಥಾವಾ ಹೆಪ್ಪುಗಟ್ಟಿಲ್ಲ ಆದರೆ ಆದರೆ, ಯಾವುದೋ ವಸ್ತುವಿನಿಂದ ಅಪ್ಪಳಿಸಿರುವ ಆಘಾತ ತಲೆಗೆ ಆಗಿದೆ. ಇನ್ನೂ, ಕೈ ಮತ್ತು ಕಾಲಿನಲ್ಲಿ ಹಾಗೂ ಬೆನ್ನಿನ ಭಾಗದಲ್ಲಿ ಹೆಚ್ಚಿನ ರಕ್ತಸ್ರಾವಗೊಂಡಿದೆ. ಹಾಗೂ ಭಾರಿ ಹೊಡೆತಕ್ಕೆ ಚರ್ಮ ಕಿತ್ತು ಬಂದಿದೆ. ಎದೆಯಬ ಭಾಗಕ್ಕೂ ಪಟ್ಟು ಬಿದ್ದಿದ್ದು ಹೃದಯ ಮತ್ತು ಶ್ವಾಸಕೋಶ ಜರ್ಜರಿತವಾಗಿದೆ.

ಲಾರಿಗೆ ತಲೆ ಅಪ್ಪಳಿಸಿದ್ದನ್ನು ಒಪ್ಪಿಕೊಂಡ ಕೊಲೆಗಾರರು,
ಪೊಲೀಸರ ಲಾಠಿ ಏಟು ರುಚಿ ತಿನ್ನುತ್ತಿದ್ದಂತೆ ಆರೋಪಿಗಳು ಬಾಯಿಬಿಟ್ಟಿದ್ದು “ರೇಣುಕಾ ಅವರ ಮೇಲೆ ಮೊದಲಿಗೆ ದರ್ಶನ್‌ ಹಲ್ಲೆ ಮಾಡಿದ್ದಾರೆ . ದರ್ಶನ್‌ ಅವರು ರೇಣುಕಾ ಸ್ವಾಮಿಯನ್ನು ಜೋರಾಗಿ ತಳ್ಳಿದ್ದರು. ಇದರಿಂದಾಗಿ ಶೆಡ್‌ನಲ್ಲಿದ್ದ ಲಾರಿಗೆ ರೇಣುಕಾಸ್ವಾಮಿ ತಲೆ ತಾಗಿ ಆತ ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದ. ನಂತರ ಅಲ್ಲಿಂದ ದರ್ಶನ್‌ ಮತ್ತು ಪವಿತ್ರಾ ಮನೆಗೆ ಹೋಗಿದ್ದಾರೆ. ಬಳಿಕ ರೇಣುಕಾ ಸ್ವಾಮಿ ಕಾಲು ಹಿಡಿದು ಕಾಂಪೌಂಡ್‌ಗೆ ಬಡಿದೆವು. ಆಗ ರೇಣುಕಾಸ್ವಾಮಿ ಸ್ಥಳದಲ್ಲೇ ಮೃತಪಟ್ಟರು. ತಕ್ಷಣ ನಮ್ಮ ದರ್ಶನ್‌ ಅವರಿಗೆ ಕರೆ ಮಾಡಿದೆವು. ಬಾಡಿನ ಏನಾದ್ರು ಮಾಡಿ ಮುಚ್ಚಾಕಿ ಅಂದರು. ಭಯದಲ್ಲಿ ಏನ್ಮಾಡಬೇಕು ಅಂತಾ ಗೊತ್ತಾಗದೆ ಮೋರಿಗೆ ಬಿಸಾಕಿ ಮನೆಗೆ ಹೋಗಿದ್ವಿʼʼಎಂದು ಹೇಳಿಕೆ ನೀಡಿದ್ದಾರೆ.

Ad
Ad
Nk Channel Final 21 09 2023
Ad