ರಾಮನಗರ : ಒಂದೇ ವೃಷಣ ಹೊಂದಿದ್ದ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಶ್ರೀದೇವಿ ಮಿಷನ್ ಆಸ್ಪತ್ರೆಯಲ್ಲಿ ನಡೆದಿದೆ.
ಆರ್ಯ (6) ಎಂಬ ಬಾಲಕ ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಗಂಭೀರವಾಗಿ ಆರೋಪಿಸುತ್ತಿದ್ದಾರೆ. ಒಂದೇ ವೃಷಣ ಹೊಂದಿದ್ದ ಆರ್ಯನನ್ನು ಫೋಷಕರು ಹಲವು ಆಸ್ಪತ್ರೆಗಳ ವೈದ್ಯರಿಗೆ ತೋರಿಸಿದ್ದರು. ಅದೇ ರೀತಿ ಮಿಷನ್ ಆಸ್ಪತ್ರೆಗೂ ಭೇಟಿ ನೀಡಿದ್ದಾಗ, ಒಂದೇ ಪೋಷಕರು ವೃಷಣ ಇದ್ದರೆ ಯಾವುದೇ ತೊಂದರೆ ಆಗಲ್ಲ. ಆದರೆ ಆಪರೇಷನ್ ಮಾಡಿಸಬೇಕಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದರಂತೆ. ಅದರಂತೆಯೇ ಆಸ್ಪತ್ರೆಗೆ ದಾಖಲಿಸಿ ಆಪರೇಷನ್ ಪೋಷಕರು ಒಪ್ಪಿಗೆ ನೀಡಿದ್ದಾರೆ.
ಬೆಳಗ್ಗೆ ಆಪರೇಷನ್ ಥಿಯೇಟರ್ಗೆ ಬಾಲಕನನ್ನು ವೈದ್ಯರು ಕರೆದೊಯ್ದಿದ್ದಾರೆ. ಆಪರೇಷನ್ ಆದ ಕೆಲವೇ ಹೊತ್ತಿನಲ್ಲೇ ಆರ್ಯ ಮೃತಪಟ್ಟಿದ್ದಾನೆ. ಆಪರೇಷನ್ಗೂ ಮುನ್ನ ಮೃತ ಆರ್ಯ ಆಗೋಗ್ಯವಾಗಿದ್ದ. ಹೀಗೆ ದಿಢೀರ್ ಸಾವಾಗಲು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದು, ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.