ಬೆಂಗಳೂರು : ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬನ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿ, ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆ ವ್ಯಕ್ತಿಯು ಘಟನೆಯ ವೀಡಿಯೊವನ್ನು ರೆಕಾರ್ಡ್ ಮಾಡಿ ನ್ಯಾಯಕ್ಕೆ ಆಗ್ರಹಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ.ಮಂಗಳವಾರ ರಾತ್ರಿ ಮಾರತ್ತಹಳ್ಳಿಯ ರೇನ್ಬೋ ಆಸ್ಪತ್ರೆಯ ಬಳಿ ಈ ಹಲ್ಲೆ ನಡೆದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ‘ಬೆಂಗಳೂರಿನ ಮಾರತ್ತಹಳ್ಳಿಯ ರೇನ್ಬೋ ಆಸ್ಪತ್ರೆ ಬಳಿ ನಿನ್ನೆ ರಾತ್ರಿ ಬಿಎಂಟಿಸಿ ಬಸ್ನಲ್ಲಿ ನನ್ನ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.
ವೀಡಿಯೊದಲ್ಲಿ, ಬಸ್ ಕಂಡಕ್ಟರ್ ವ್ಯಕ್ತಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವುದನ್ನು ಕಾಣಬಹುದು. ಕಂಡಕ್ಟರ್ ಆ ವ್ಯಕ್ತಿಗೆ ಹಿಂದಿಯ ಬದಲು ಕನ್ನಡದಲ್ಲಿ ಮಾತನಾಡಲು ಹೇಳಿದರು. ಕಂಡಕ್ಟರ್ ಹಾಗೂ ಪ್ರಯಾಣಿಕನ ನಡುವಿನ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋಗೆ ತರಹೇವಾರಿ ಕಮೆಂಟ್ ಗಳು ಬರುತ್ತಿದೆ.
I was assaulted on a BMTC bus near Rainbow Hospital, Marathahalli, Bengaluru last night by the conductor.
After refusing to give me change or taking payment by UPI, the BMTC conductor assaulted me and verbally abused me. Attaching the video here.@bmtc_bengaluru (1/5) pic.twitter.com/FAF1e5SdFn
— abhinav raj (@abhinavraj46674) August 7, 2024