ಬೆಂಗಳೂರು: ದ್ವೇಷದ ಹಿನ್ನಲೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳಿಗೆ ಬೆಂಕಿ ಹಚ್ಚಿದ ಘಟನೆ ಚಾಮುಂಡಿನಗರ ಬಳಿ ನಡೆದಿದೆ.
ಬೆಂಕಿಗೆ ನಾಲ್ಕು ಬೈಕ್ ಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಮಧ್ಯರಾತ್ರಿ 2 ಗಂಟೆ ಸುಮಾರಿಗೆ ವಿಜಯ್ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳಿಗೆ ಬೆಂಕಿ ಹಚ್ಚಿ ಓಡಿದ್ದಾರೆ. ಬೆಂಕಿಯ ತೀವ್ರತೆಗೆ ಬೈಕ್ ಸೇರಿದಂತೆ ಮನೆಯ ಕಿಟಕಿ, ಗೋಡೆಗೂ ಸಹ ಬೆಂಕಿ ತಗುಲಿದೆ.
ಮನೆಯಲ್ಲಿ ವಿಜಯ್ ಕುಟುಂಬ ನಿದ್ರೆಗೆ ಜಾರಿತ್ತು. ಈ ವೇಳೆ ಬೆಂಕಿ ಕಂಡ ಕೂಡಲೇ ಹೊರಗಡೆ ಧಾವಿಸಿದ್ದಾರೆ. ಅಷ್ಟೊತ್ತಿಗಾಗಲೇ ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಕೂಡಲೇ ಕುಟುಂಬದವರು ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ ಹಾಗೂ ಒಂದು ಬೈಕ್ ಅನ್ನು ತೆಗೆಯಲು ಸಹಕರಿಸಿದ್ದಾರೆ. ತಡರಾತ್ರಿ ನಡೆದ ಈ ಬೆಂಕಿ ಅವಘಡಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ.
ವಿಜಯ್ ಮನೆಯ ಗೋಡೆಗೂ ಬೆಂಕಿ ತಗುಲಿದೆ. ಪರಿಣಾಮ ಮನೆಯಲ್ಲಿದ್ದ ಎರಡು ಪಕ್ಷಿಗಳು ಬೆಂಕಿಗೆ ಬಲಿಯಾಗಿವೆ.