51 ವರ್ಷದ ದೊಡ್ಡ ಗಣೇಶ್‌ ಕಳೆದ ತಿಂಗಳಷ್ಟೇ ಕೀನ್ಯಾ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆಗಿ ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಡಿಸೆಂಬರ್‌ನಲ್ಲಿ ಅವರು ಜವಾಬ್ದಾರಿ ವಹಿಸಿಕೊಳ್ಳಬೇಕಾಗಿತ್ತು. ಆದರೆ ಅದಕ್ಕೂ ಮೊದಲೇ ಕೀನ್ಯಾ ಕ್ರಿಕೆಟ್‌ ಮಂಡಳಿ, ಗಣೇಶ್‌ ಅವರನ್ನು ವಜಾಗೊಳಿಸಿದೆ.