ಬೆಂಗಳೂರು: ತನ್ನ ಅನುಮತಿ ಇಲ್ಲದೇ ಓಣಂ ಹೂವಿನ ರಂಗೋಲಿ ಹಾಕಿದ್ದಕ್ಕೆ ಮಹಿಳೆಯೊಬ್ಬಳು ಕಾಲಿನಿಂದ ಒದ್ದು ವಿಕೃತಿ ಮೆರೆದ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ.
ಬೆಂಗಳೂರು ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಥಣಿಸಂದ್ರದ ಮೊನಾರ್ಕ್ ಸೆರೆನಿಟಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ನನ್ನ ಅಪ್ಪಣೆ ಇಲ್ಲದೆ ಅಪಾರ್ಟ್‌ಮೆಂಟ್‌ನಲ್ಲಿ ಏನು ಮಾಡುವಂತಿಲ್ಲ ಎಂದು ಕಿರಿಕ್ ಮಾಡಿದ ಮಹಿಳೆ ಕಾಲಿನಿಂದ ಅಳಿಸಿ, ಅದರ ಮೇಲೆ ನೃತ್ಯ ಮಾಡಿದ್ದಾಳೆ. ಈ ಸಂದರ್ಭದಲ್ಲಿ ನಿವಾಸಿಗಳು ಆಕೆಯ ಜೊತೆ ಮಕ್ಕಳು ರಚಿಸಿರುವ ರಂಗೋಲಿಯನ್ನು ದಯವಿಟ್ಟು ಹಾಳುಮಾಡಬೇಡಿ ಎಂದು ಪರಿ ಪರಿಯಾಗಿ ಮನವಿ ಮಾಡಿದರೂ ಆಕೆ ತಲೆ ಕೆಡಿಸಿಕೊಳ್ಳದೇ ಸಂವಿಧಾನ ಹಾಗೇ ಹೀಗೆ ಎಂದು ಹೇಳಿ ಕಾಲಿನಿಂದ ರಂಗೋಲಿಯನ್ನು ಹಾಳು ಮಾಡಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕಿರಿಕ್ ಮಾಡಿದ ಮಹಿಳೆಯೂ ಮಲೆಯಾಳಿ ಅಗಿದ್ದರೂ ಆಕೆಗೆ ಕೇರಳ ಸಂಸ್ಕೃತಿ ಬಗ್ಗೆ ಅವಮಾನ ಮಾಡುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
Shameless Shameless Woman!! She is Simi Nair, resident of Monarch Serenity Apartment Complex in Bengaluru. She Deliberately destroyed a Pookalam created by children in the common area of their building on occasion of Onam 😡 pic.twitter.com/TqPW8o04w8
— Rosy (@rose_k01) September 22, 2024