ಬೆಂಗಳೂರು:  ಸಂಗೀತದ ರಸದೌತಣ ಉಣಬಡಿಸಿದ ಸುರಾನ  ‘ನೈಟಿಂಗೇಲ್ ಸೀಸನ್-3

ಬೆಂಗಳೂರು: ಬೆಂಗಳೂರಿನ ನೈಟಿಂಗೇಲ್ (ಸೀಸನ್ 3), ಧ್ವನಿಗಳ ಅಂತಿಮ ಸುತ್ತಿನ  ಸ್ಪರ್ಧೆಯು ಆಗಸ್ಟ್ 6 ರಂದು ಸುರಾನ ಕಾಲೇಜಿನಲ್ಲಿ (ಸ್ವಾಯತ್ತ) ರಸಮಯ ಸಂಗೀತ ಕಛೇರಿಯೊಂದಿಗೆ ಮುಕ್ತಾಯವಾಯಿತು.

ಎಸ್ ಎಸ್ ಎಂ ಆರ್ ವಿ ಕಾಲೇಜಿನ ಶ್ರೀ ರಕ್ಷಾ ಗೆಲುವಿನ ಕಿರೀಟ ತಮ್ಮದಾಗಿಸಿಕೊಂಡುರೂ. 25,000 ಬಹುಮಾನದ ಮೊತ್ತವನ್ನು ಪಡೆದರು. ಹಾಗೇ ಡಿಎಸ್ ಟಿ ಕಾಲೇಜಿನ ರಘೋತ್ತಮ್ಮೊದಲ ರನ್ನರ್-ಅಪ್  ಪ್ರಶಸ್ತಿ ತಮ್ಮದಾಗಿಸಿಕೊಂಡರೆ,  ಎನ್ ಎಂ ಕೆಆರ್ ವಿ ಕಾಲೇಜಿನ ರಚನಾ ಎರಡನೇ ರನ್ನರ್ ಅಪ್ ಪ್ರಶಸ್ತಿ ಪಡೆದರು.

ವಿಜೇತರಿಗೆ ನಗದು ಬಹುಮಾನಗಳನ್ನು ವಿತರಿಸಿದ ಸುರಾನಾ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ಟ್ರಸ್ಟಿ ಡಾ. ಅರ್ಚನಾ ಸುರಾನ  ಅವರು “ವಿದ್ಯಾರ್ಥಿಗಳು ಓದಿನ ಜೊತೆಗೆ ಇತರೆ ಚಟುವಟಿಕೆಯಲ್ಲೂ ಭಾಗವಹಿಸಬೇಕು. ಇದು ಅವರ ಬೌದ್ಧಿಕಮಾನಸಿಕ ಬೆಳವಣಿಗೆಗೆ ಸಹಾಯಕಾರಿಯಾಗಲಿದೆ” ಎಂದು ಹೇಳಿದರು.

ಸುರಾನ  ಕಾಲೇಜಿನ ‘ನೈಟಿಂಗೇಲ್ ಆಫ್ ಬೆಂಗಳೂರು’ ವಾರ್ಷಿಕ ಪ್ರತಿಭಾ ಹುಡುಕಾಟದ ವೇದಿಕೆಯಾಗಿದ್ದುಅತ್ಯುತ್ತಮ ಸಂಗೀತಗಾರರಾಗಲು ಬಯಸುವ ಅಭ್ಯರ್ಥಿಗಳಿಗೆ ಇದು ಅವಕಾಶದ ಬಾಗಿಲನ್ನು ತೆರೆಯುತ್ತದೆ.

ಬೆಂಗಳೂರಿನ 38 ಕಾಲೇಜುಗಳಲ್ಲಿ ಸಂಸ್ಥೆವಾರು ಆಡಿಷನ್ಗಳ ನಂತರ, 12 ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲು ಅವಕಾಶ ಪಡೆದರು. ಇನ್ನು ಈ ಟ್ಯಾಲೆಂಟ್ ಹಂಟ್ ವೇದಿಕೆಯಲ್ಲಿಸಂಗೀತ ಸಂಯೋಜಕ ಮತ್ತು ಕೊನ್ನಕೋಲು ಕಲಾವಿದ ನಚಿಕೇತ ಶರ್ಮಾವೃತ್ತಿಪರ ಬೀಟ್ ಬಾಕ್ಸರ್ ಹ್ಯಾರಿ ಡಿ ಕ್ರೂಜ್ ಮತ್ತು ಹಿನ್ನೆಲೆ ಗಾಯಕ ರೋಹಿತ್ ಗೌಡ ಅವರು ನಡೆಸಿಕೊಟ್ಟ ಗಾಲಾ ಸಂಗೀತ ಕಛೇರಿ ‘ರಾಗ ತರಂಗಿಣಿ’ಯೊಂದಿಗೆ ನೆರೆದವರ ಮನಸ್ಸಿಗೆ ಸಂಗೀತದ ತಂಪು ಉಣಬಡಿಸಿದರು.

ಬೆಂಗಳೂರಿನ ನೈಟಿಂಗೇಲ್ ಅನೇಕ ಭರವಸೆಯ ಯುವ ಗಾಯಕರನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಅವರ ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶವನ್ನು ನೀಡುತ್ತದೆ” ಎಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಪೋಷಕರು ಖುಷಿಯಿಂದ ಹೇಳಿದರು. ಹಾಗೇ “ಸೀಸನ್ 1 ವಿಜೇತ ಶಿವಾನಂದ ಸಾಮ್ರಾಟ್ ಅವರು ತಮ್ಮ ಮೊದಲ ಆಲ್ಬಂ ಲಾಸ್ಟ್ ಬೆಂಚ್ ಬಾಯ್ಸ್’  ಅನ್ನು ಬಿಡುಗಡೆ ಮಾಡಿದ್ದಾರೆ. ಮತ್ತು ಸೀಸನ್ 2 ವಿಜೇತೆ ನೇಹಾ ಮಂಜುನಾಥ್ ಹಿನ್ನೆಲೆ ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ” ಎಂದು ವಿದ್ಯಾರ್ಥಿ ಪರಿಷತ್ತಿನ ಸಂಯೋಜಕಿ ಚಂದನಾ ಜೈನ್ ಹೇಳಿದರು.

ಸುರಾನ  ಕಾಲೇಜು ಅನೇಕ ಸಂಗೀತಗಾರರು ಮತ್ತು ಕಲಾವಿದರಿಗೆ ನೆಲೆಯಾಗಿದೆ -ಚಲನಚಿತ್ರ ನಿರ್ದೇಶಕ ಪನ್ನಗಾಭರಣವಾಸುಕಿ ವೈಭವ್ಸಂಗೀತ ಸಂಯೋಜಕ ಮತ್ತು ನಟಿ ಹಾಗೂ ನೃತ್ಯಗಾರ್ತಿ ಅಪೂರ್ವ ಡಿ ಸಾಗರ್ ಅವರನ್ನು ಹೆಸರಿಸಬಹುದು.

Ashika S

Recent Posts

ಪೂಜೆಗೆ ಅರಳಿ ಹೂವು ಬಳಕೆ ನಿಲ್ಲಿಸಲು ಟಿಡಿಬಿ ತೀರ್ಮಾನ

ಕೇರಳದ ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿಯು (ಟಿಡಿಬಿ) ತನ್ನ ಸುಪರ್ದಿಯಲ್ಲಿರುವ ದೇವಾಲಯಗಳಲ್ಲಿ ಪೂಜೆಗೆ ಅರಳಿ ಹೂವು (ಒಲಿಯಾಂಡರ್‌-ಕಣಗಿಲು ಜಾತಿಗೆ ಸೇರಿದ…

20 mins ago

50 ಕೋ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿಮಾಲ್‌: ಬೀಗ ಜಡಿದ ಬಿಬಿಎಂಪಿ

ಸರಿ ಸುಮಾರು 50 ಕೋಟಿಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗೆ ಬಿಬಿಎಂಪಿ ಬೆಳ್ಳಂಬೆಳಗ್ಗೆಯೇ  ಬೀಗ…

26 mins ago

ಆಟವಾಡುತ್ತಿದ್ದ ಮಗುವಿಗೆ ಕಚ್ಚಿದ ಬೀದಿ ನಾಯಿ : ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ

ಆಟವಾಡುತ್ತಿದ್ದ ಮಕ್ಕಳ ಮೇಲೆ ಎರಗಿ ಬೀದಿ ನಾಯಿಗಳು ಕಚ್ಚಿದ ಘಟನೆ ಬೆಳಗಾವಿ ನ್ಯೂ ಗಾಂಧಿನಗರದಲ್ಲಿ ನಡೆದಿದೆ.

44 mins ago

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಸುಳ್ಯದ ಮುಸ್ತಾಫ ಸೆರೆ

ದೇಶವನ್ನೇ ಬೆಚ್ಚಿಬೀಳಿಸಿದ ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ. ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ…

45 mins ago

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಸುಳ್ಯದಲ್ಲಿ ಪತ್ತೆ

ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜು ಅವರನ್ನು ಪೊಲೀಸರು ಸುಳ್ಯದ ಅರಂತೋಡಿನಲ್ಲಿ ಪತ್ತೆ ಹಚ್ಚಿದ್ದಾರೆ

49 mins ago

ಪ್ಲೇ-ಆಫ್​ ರೇಸ್​ನಿಂದ ಹೊರ ಬಿದ್ದ ಪಂಜಾಬ್ ​: ಆರ್‌ಸಿಬಿ ಪಾಯಿಂಟ್ಸ್ ಎಷ್ಟು ?

ಐಪಿಎಲ್​ ಟೂರ್ನಿಯಲ್ಲಿ ಆರ್​ಸಿಬಿ ತಂಡ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ನಿನ್ನೆ ಪಂಜಾಬ್ ಕಿಂಗ್ಸ್ ತಂಡವನ್ನು 60 ರನ್​ಗಳಿಂದ ಸೋಲಿಸುವ ಮೂಲಕ,…

59 mins ago