News Karnataka Kannada
Thursday, May 02 2024
ಬೆಂಗಳೂರು

ಬೆಂಗಳೂರು: ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ಹೇಗೆ, ಇಂಧನ ಸಚಿವರಿಂದ ಮತ್ತೊಮ್ಮೆ ಸ್ಪಷ್ಟನೆ

GrihaJyothi Scheme: Applications for GrihaJyoti Scheme can be submitted till July 27.
Photo Credit : Pixabay

ಬೆಂಗಳೂರು: ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಘೋಷಿಸಿದ ಗೃಹಜ್ಯೋತಿ ಯೋಜನೆ ಕುರಿತು ಜನರಲ್ಲಿ ಗೊಂದಲ ಜೀವಂತವಾಗಿದೆ. ಈ ಕುರಿತು ಇಂಧನ ಸಚಿವ ಕೆಜೆ ಜಾರ್ಜ್ ಕೆಲ ಅಂಶಗಳನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಯೋಜನೆ ಫಲಾನುಭವಿಗಳು ಯಾರು, ಮಾನದಂಡವೇನು ಎಂಬ ಕುರಿತು ವಿವರ ನೀಡಿದ್ದಾರೆ.

ನಮ್ಮ ಸರ್ಕಾರ ಕೊಟ್ಟ ಮಾತಿನಂತೆ 200 ಯೂನಿಟ್ ವರೆಗೆ ಪ್ರತಿಯೊಬ್ಬರಿಗೆ ಉಚಿತವಾಗಿ ವಿದ್ಯುತ್ ನೀಡಲಿದೆ. ಗೃಹ ಬಳಕೆಯ ಗ್ರಾಹಕರ ಒಂದು ವರ್ಷದ ಸರಾಸರಿ ತೆಗೆದುಕೊಂಡು 10% ಸೇರಿಸಿ ವಿದ್ಯುತ್ ಉಚಿತ ಕೊಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಅರ್ಜಿಸಲ್ಲಿಕೆ ಹೀಗೆ ಮಾಡಿ: ಗೃಹಜ್ಯೋತಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಜನರು ಆಧಾರ್ ಕಾರ್ಡ್ ಅನ್ನು ಆರ್‌ಆರ್ ನಂಬರ್‌ಗೆ ಲಿಂಕ್ ಮಾಡಬೇಕು. ವಾಸದ ಕರಾರು ಪತ್ರ ಅಥವಾ ವೋಟರ್ ಐಡಿ ನೀಡಬೇಕು. ಬಾಡಿಗೆ ಮನೆಯವರಿಗೂ, ಸ್ವಂತ ಮನೆಯವರಿಗೂ ಇದು ಅನ್ವಯಿಸುತ್ತದೆ. ಬೆಂಗಳೂರು ಒನ್ ಸೇವಾ ಕೇಂದ್ರದಲ್ಲಿ ಈ ವ್ಯವಸ್ಥೆಯನ್ನು ಪಡೆಯಬಹುದು ಎಂದು ಸಚಿವ ಕೆಜೆ ಜಾರ್ಜ್ ಮಾಹಿತಿ ನೀಡಿದರು.

ಗೃಹ ಜ್ಯೋತಿ ಜೂನ್ 15 ರಿಂದ ನೋಂದಣಿ ಆರಂಭವಾಗಲಿದ್ದು, ಆಗಸ್ಟ್ 1 ರಿಂದ ಯೋಜನೆ ಜಾರಿಗೆ ಬರಲಿದೆ. 2 ಕೋಟಿ 16 ಲಕ್ಷ ಗೃಹಬಳಕೆ ಗ್ರಾಹಕರು ಇದ್ದಾರೆ. ಅದರಲ್ಲಿ 2 ಕೋಟಿ 14 ಲಕ್ಷ ಗ್ರಾಹಕರು 200 ಯೂನಿಟ್ ಒಳಗೆ ಬಳಕೆ ಮಾಡುವವರು ಇದ್ದಾರೆ. 2 ಲಕ್ಷ ಮಾತ್ರ 200 ಯೂನಿಟ್‌ಗೂ ಹೆಚ್ಚು ವಿದ್ಯುತ್ ಬಳಕೆ ಮಾಡುವವರು ಇದ್ದಾರೆ. ಅದರಲ್ಲಿ 53 ಯೂನಿಟ್ ಅತಿ ಹೆಚ್ಚು ಬಳಕೆ ಮಾಡುವವರು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು