ಬೆಂಗಳೂರು: ಜೀವ ರಕ್ಷಣೆಗೆ ಸೂಕ್ತ ತಿಳಿವಳಿಕೆ ಅಗತ್ಯ

ಬೆಂಗಳೂರು: ಅಪಘಾತ, ಅನಾರೋಗ್ಯಕರ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿದ್ದು, ಜೀವ ರಕ್ಷಣೆಗೆ ಸೂಕ್ತ ತಿಳಿವಳಿಕೆ ಅಗತ್ಯ. ಇಲ್ಲವಾದಲ್ಲಿ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಯನಗರದ ಯುನೈಟೆಡ್ ಆಸ್ಪತ್ರೆ ಹಾಗೂ ಸುರಕ್ಷಿತ ಲಿಫ್ಟ್ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿರುವ ಕ್ರಿಯೇಟಿವ್ ಡಿವೈಸೆಸ್ ಸಂಸ್ಥೆಗಳಿಂದ ಬೆಂಗಳೂರಿನಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಜೀವರಕ್ಷಣೆ ಮಾಡುವ ಕುರಿತು ತರಬೇತಿ ಕಾರ್ಯಾಗಾರದಲ್ಲಿ ತಜ್ಞರು ಸೂಕ್ತ ಸಲಹೆಗಳನ್ನು ನೀಡಿದ್ದಾರೆ.

ಕ್ರಿಯೇಟಿವ್ ಡಿವೈಸಸ್ ಚೇರ್ಮನ್ ಡಾ.ಬಿ.ಎಂ.ಉಮೇಶ್ ಕುಮಾರ್ ಮಾತನಾಡಿ, ಜೀವಮಾನದಲ್ಲಿ ಎಂದಾದರೊಮ್ಮೆ ಅನಾರೋಗ್ಯಕರ ಪರಿಸ್ಥಿತಿ, ಅಘಾತ, ಅಪಘಾತಗಳು ಸಂಭವಿಸಬಹುದು. ಕೆಲವೊಮ್ಮೆ ಪ್ರಕೃತಿ ವಿಕೋಪ ಹಾಗೂ ಮಾನವ ನಿರ್ಮಿತ ತೊಂದರೆಗಳೂ ಅನಾರೋಗ್ಯಕ್ಕೆ ಕಾರಣವಾಗಬಹುದು, ಅಪಘಾತ ಸಂಭವಿಸಿದಾಗ ತಕ್ಷಣವೇ ನೆರವು ಸಿಗದಿದ್ದರೆ ಅನೇಕ ವೇಳೆ ಮರಣವೂ ಸಂಭವಿಸಬಹುದು. ಅಂತಹ ಸಂದರ್ಭಗಳಲ್ಲಿ ಕ್ಷಣವೂ ಅತ್ಯಮೂಲ್ಯವಾಗಿದ್ದು, ಸೂಕ್ತ ಮತ್ತು ವೈಜ್ಞಾನಿಕ ವಿಧಾನದಲ್ಲಿ ಜೀವ ರಕ್ಷಣೆಗೆ ಮುಂದಾಗಬೇಕು ಎಂದರು.

ಯುನೈಟೆಡ್ ಆಸ್ಪತ್ರೆಯ ಕಾರ್ಯಕಾರಿ ನಿರ್ದೇಶಕ ಡಾ, ಶಿವಕುಮಾರ್ ಮಾತನಾಡಿ, ಅಪಘಾತ, ಅಗ್ನಿಅವಘಡ, ವಿಷಪೂರಿತ ಪ್ರಾಣಿಗಳು ಕಚ್ಚಿದ ಸಂದರ್ಭ, ಹೃದಯಘಾತ ಹಾಗೂ ಹಠಾತ್ತನೇ ಪಾರ್ಶ್ವವಾಯು ಪೀಡಿತರಾದ ಸಂದರ್ಭದಲ್ಲಿ ಅತ್ಯಂತ ಕಾಳಜಿ ಮತ್ತು ಪ್ರಥಮ ಚಿಕಿತ್ಸೆ ನೀಡಬೇಕಾಗುತ್ತದೆ. ಅಂತೆಯೇ ವಯಸ್ಕರ ಮತ್ತು ಮಕ್ಕಳಲ್ಲಿ ಕಾರ್ಡಿಯೋಪಲ್ಮನರಿ ರೆಸಿಸ್ಟೇಶನ್(ಸಿಪಿಆರ್) ಪತ್ತೆ ಹಚ್ಚುವ ವಿಧಾನಗಳ ಬಗ್ಗೆಯೂ ತಿಳಿವಳಿಕೆ ಹೊಂದಿರಬೇಕು. ಹೀಗಾಗಿ ಆಸ್ಪತ್ರೆಯಿಂದ ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಆರೋಗ್ಯ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.

Ashika S

Recent Posts

ಮೊಬೈಲ್‌ಗಾಗಿ ತಮ್ಮನನ್ನೆ ಕೊಂದ ಪಾಪಿ ಅಣ್ಣ

ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದ್ದ 15 ವರ್ಷದ ಬಾಲಕನ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಬಾಲಕ…

4 mins ago

ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್​ನಿಂದ ಹೊರಬರುತ್ತೇನೆ: ಕಂಗನಾ ರಣಾವತ್

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯದ ಮೊದಲ ಇನ್ನಿಂಗ್ಸ್​ ಆರಂಭಿಸಿದ ಕಂಗನಾ ರಣಾವತ್ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ…

6 mins ago

ವೀಕ್ಷಕರ ಗಮನ ಸೆಳೆದ ನಾಣ್ಯ ಮತ್ತು ನೋಟುಗಳ ಪ್ರದರ್ಶನ

ನಗರದ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು  ಪರಂಪರೆ ಇಲಾಖೆಯಲ್ಲಿ  ಆಯೋಜಿಸಿರುವ ಅಪೂರ್ವ ನಾಣ್ಯ ಮತ್ತು ನೋಟುಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

30 mins ago

ಬೀದಿಗಳಲ್ಲಿ ಹಸುಗಳ ಕಾದಾಟ: ಬಾಲಕಿಯರ ಮೇಲೆ ಬಿದ್ದ ಹಸು, ವಿಡಿಯೋ ವೈರಲ್

ಸಿಸಿಟಿವಿಯಲ್ಲಿ ಆಘಾತಕಾರಿ ಘಟನೆಯೊಂದು ಸೆರೆಯಾಗಿದ್ದು ಬೀದಿಯಲ್ಲಿ ಬಾಲಕಿಯರ ಗುಂಪಿನ ಮೇಲೆ ಎರಡು ಹಸುಗಳು ಬಿದ್ದು ಉರುಳಾಡುವುದು ವೀಕ್ಷಕರನ್ನು ಬೆಚ್ಚಿ ಬೀಳಿಸಿದೆ,…

31 mins ago

ಅಂಜಲಿ ಹತ್ಯೆ ಪ್ರಕರಣ : ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ ಚೇತರಿಕೆ

ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಸಹೋದರಿಯ ಹತ್ಯೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಯಶೋದಾ…

54 mins ago

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ : ಬಿಜೆಪಿ ಮಾಜಿ ಸರಪಂಚ್ ಸಾವು

ಜಮ್ಮು-ಕಾಶ್ಮೀರದಲ್ಲಿ ಇನ್ನು ಎರಡು ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ನಿನ್ನೆ ಶನಿವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ…

1 hour ago