News Karnataka Kannada
Monday, April 22 2024
Cricket
ಬೆಂಗಳೂರು ನಗರ

ವಿಧಾನಸೌಧದ ಕಾರಿಡಾರ್‌ನಲ್ಲೇ ಕುಸಿದು ಬಿದ್ದ ಯತ್ನಾಳ್‌

Yatnal collapses in vidhana soudha corridor
Photo Credit : News Kannada

ಬೆಂಗಳೂರು: ಸದನದಲ್ಲಿ ಅಶಿಸ್ತಿನ ವರ್ತನೆ ತೋರಿದ ಬಿಜೆಪಿ ಶಾಸಕರನ್ನು ಸ್ಪೀಕರ್ ಯುಟಿ ಖಾದರ್ ಅವರು ಅಮಾನತುಗೊಳಿಸಿದ ನಂತರ ಹಲವು ನಾಟಕೀಯ ಬೆಳವಣಿಗೆಗಳು ನಡೆಯಿತು.

ಅಮಾನತುಗೊಂಡವರನ್ನು ಸದನದಿಂದ ಹೊರ ಹಾಕಲು ಮಾರ್ಷಲ್​ಗಳು ಒಳಬಂದರೆ, ಅಮಾನತಾಗಿರುವ ಶಾಸಕರ ರಕ್ಷಣೆಗೆ ಬಿಜೆಪಿಯ ಇತರ ಶಾಸಕರು ಮುಂದಾದರು. ಈ ವೇಳೆ ಭಾರಿ ಗದ್ದಲ ಸೃಷ್ಟಿಯಾಯಿತು.

ಈ ಎಲ್ಲ ಬೆಳವಣಿಗೆಗಳ ಸಂದರ್ಭ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥಗೊಂಡು ವಿಧಾನಸೌಧದ ಕಾರಿಡಾರ್‌ನಲ್ಲೇ ಸುಸ್ತಾಗಿ ಕುಸಿದುಬಿದ್ದರು.

ವಿಧಾನಸೌಧದ ಮೊದಲ ಮಹಡಿಯ ಕಾರಿಡಾರ್‌ನಲ್ಲೇ ಯತ್ನಾಳ್ ಕುಸಿದುಬಿದ್ದರು. ಬಿಪಿ ಹೆಚ್ಚಾಗಿ ಅವರು ಅಸ್ವಸ್ಥಗೊಂಡರು ಎನ್ನಲಾಗಿದೆ. ಬಿಜೆಪಿಯ ಇತರ ಶಾಸಕರು ಗಾಳಿ ಬೀಸಿ ಯತ್ನಾಳ್​ ಅವರನ್ನು ಚೇತರಿಸುವಂತೆ ಮಾಡಲು ಯತ್ನಿಸಿದರು.

ನಂತರ ವಿಧಾನಸೌಧದಲ್ಲೇ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಅವರನ್ನು ಆಂಬುಲೆನ್ಸ್​ನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಯತ್ನಾಳ್ ಅವರನ್ನು ಸದ್ಯ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯತ್ನಾಳ್ ಪತ್ನಿ ಶೈಲಜಮ್ಮ ಹಾಗೂ ಮಗ ಹರ್ಷ ಫೋರ್ಟಿಸ್ ಆಸ್ಪತ್ರೆಗೆ ತೆರಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು