ತುಮಕೂರು: ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಚೇಳೂರು ಗೊಲ್ಲರಹಟ್ಟಿಯ ಕರಿಯಮ್ಮ ಎಂಬುವರಿಗೆ ಸೇರಿದ ಹಸು ನಾಲ್ಕು ಕರುವಿಗೆ ಜನ್ಮ ನೀಡಿರುವುದು ಕಂಡುಬಂದಿದೆ.
ಹಸು 3 ಗಂಡು ಕರು, 1 ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಇದರಲ್ಲಿ ಒಂದು ಗಂಡು ಕರು ಸಾವನ್ನಪ್ಪಿದೆ. ಪಶು ವೈದ್ಯಾಧಿಕಾರಿ ಡಾ. ಶಂಕ್ರಪ್ಪ ಭೇಟಿ ನೀಡಿ ಹಸು ಮತ್ತು ಕರುಗಳ ಆರೋಗ್ಯ ಪರಿಶೀಲನೆ ನೆಡೆಸಿ ಚಿಕಿತ್ಸೆ ನೀಡಿದ್ದಾರೆ.