News Karnataka Kannada
Monday, April 29 2024
ಬೆಂಗಳೂರು ನಗರ

ಬೆಂಗಳೂರಿನಲ್ಲಿ ಕಾರು ಅಡ್ಡಗಟ್ಟಿ ಸುಲಿಗೆ ಮಾಡಲು ಯತ್ನಿಸಿದ ಮೂವರು ಅರೆಸ್ಟ್: ವಿಡಿಯೋ ವೈರಲ್

ರಾಜ್ಯದಲ್ಲಿ ಸುಲಿಗೆ ಪ್ರಕರಣಗಳು ಆಗಾಗ ಸುದ್ದಿ ಮಾಡುತ್ತಿದ್ದು, ಇದೀಗ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಚರಣ್ ಪಾಲ್ ಸಿಂಗ್ ಮತ್ತು ಸಹೋದ್ಯೋಗಿಗಳು ಸರ್ಜಾಪುರ-ಅತ್ತಿಬೆಲೆ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ಬಂದ ನಾಲ್ವರು ಕಾರಿಗೆ ಅಡ್ಡ ಹಾಕಿ ಸುಲಿಗೆ ಮಾಡಲು ಯತ್ನಿಸಿದ ಘಟನೆ ಭಾನುವಾರ( ಜ.7) ಸಂಜೆ ಸಂಭವಿಸಿದೆ.
Photo Credit : News Kannada

ಬೆಂಗಳೂರು: ರಾಜ್ಯದಲ್ಲಿ ಸುಲಿಗೆ ಪ್ರಕರಣಗಳು ಆಗಾಗ ಸುದ್ದಿ ಮಾಡುತ್ತಿದ್ದು, ಇದೀಗ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಚರಣ್ ಪಾಲ್ ಸಿಂಗ್ ಮತ್ತು ಸಹೋದ್ಯೋಗಿಗಳು ಸರ್ಜಾಪುರ-ಅತ್ತಿಬೆಲೆ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ಬಂದ ನಾಲ್ವರು ಕಾರಿಗೆ ಅಡ್ಡ ಹಾಕಿ ಸುಲಿಗೆ ಮಾಡಲು ಯತ್ನಿಸಿದ ಘಟನೆ ಭಾನುವಾರ( ಜ.7) ಸಂಜೆ ಸಂಭವಿಸಿದೆ.

ಇವರು ಕಾರಿನಲ್ಲಿ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಈ ಆರೋಪಿಗಳು “ನಮ್ಮ ಬೈಕ್​ಗೆ ಡಿಕ್ಕಿ ಹೊಡೆದಿದ್ದೀರಿ ಹಣ ನೀಡಿ” ಎಂದು ಚರಣ್ ಪಾಲ್ ಸಿಂಗ್ ಅವರ ಬಳಿ ಬಂದಿದ್ದಾರೆ. ಚರಣ್​ ಪಾಲ್​ ಸಿಂಗ್​ ಅವರು ಕಾರಿನಲ್ಲೇ ಕೂತಿದ್ದು, “ನಾವು ಯಾವುದೇ ಅಪಘಾತ ಮಾಡಿಲ್ಲ” ಎಂದಿದ್ದಾರೆ. ನಂತರ ಚರಣ್ ಪಾಲ್ ಸಿಂಗ್ ಅವರು ಕಾರಿನ ಗಾಜುಗಳನ್ನು ಹಾಕಿದ್ದಾರೆ. ಅದಕ್ಕೆ ದುಷ್ಕರ್ಮಿಗಳು ಗಾಜು ಇಳಿಸುವಂತೆ ಹೇಳಿದ್ದಾರೆ. ಆದರೆ ಚರಣ್ ಪಾಲ್ ಸಿಂಗ್ ಗಾಜು ಇಳಿಸಿಲ್ಲ.

ಆಗ ದುಷ್ಕರ್ಮಿಗಳು ಕಾರಿನ ಗಾಜನ್ನು ಹೊಡೆದು ಬೆದರಿಕೆ ಹಾಕಲು ಮುಂದಾಗಿದ್ದಾರೆ. ಆದರೂ ಕೂಡ ಚರಣ್ ಪಾಲ್ ಸಿಂಗ್ ವಾಹನದಿಂದ ಇಳಿಯದೆ ಕಾರನ್ನು ಚಾಲು ಮಾಡಿ ವೇಗವಾಗಿ ಓಡಿಸುತ್ತಾ ಹತ್ತಿರದ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆರೋಪಿಗಳು ವಾಹನವನ್ನು ಹಿಂಬಾಲಿಸಿದ್ದಾರೆ. ಇಡೀ ಘಟನೆ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ವೈರಲ್ ಆಗಿದೆ.

ಪೊಲೀಸ್​ ಠಾಣೆಯಲ್ಲಿ ಚರಣ್ ಪಾಲ್ ಸಿಂಗ್ ದೂರು ನೀಡಿದ್ದಾರೆ. ಬಳಿಕ ಪೊಲೀಸರ ಪರಿಶೀಲಿಸಿದಾಗ ಚರಣ್ ಪಾಲ್ ಸಿಂಗ್ ಅಪಘಾತ ಮಾಡಿಲ್ಲವೆಂದು ಕಂಡುಕೊಂಡರು. ನಂತರ ಪೊಲೀಸರು ಪ್ರಕರಣದ ತನಿಖೆ ನಡೆಸಿ ಮೂವರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು