News Karnataka Kannada
Monday, April 29 2024
ಶಿವಮೊಗ್ಗ

ಶಂಕರಘಟ್ಟ: ಸದನದಲ್ಲಿ ಕುವೆಂಪು ವಿವಿಯನ್ನು ಶ್ಲಾಘಿಸಿದ ಸಚಿವ ಅಶ್ವತ್ಥನಾರಾಯಣ್

Belagavi: Mangalore V.V. First semester results of undergraduate classes to be announced within 10 days
Photo Credit : Facebook

ಶಂಕರಘಟ್ಟ, ಸೆ. 22: ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಡಿಜಿಟಲ್ ಮೌಲ್ಯಮಾಪನವನ್ನು ಅಳವಡಿಸಿಕೊಂಡಿರುವ ಕುವೆಂಪು ವಿಶ್ವವಿದ್ಯಾಲಯವು ಸೆಮಿಸ್ಟರ್‌ವೊಂದರ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಐದು ಕೋಟಿ ಹಣವನ್ನು ಉಳಿತಾಯ ಮಾಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್ ಅಶ್ವತ್ಥನಾರಾಯಣ್ ವಿವಿಯನ್ನು ಶ್ಲಾಘಿಸಿದ್ದಾರೆ.

ಬುಧವಾರ ಬೆಂಗಳೂರಿನ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ವಿಶ್ವವಿದ್ಯಾಲಯಗಳಲ್ಲಿನ ವ್ಯವಸ್ಥೆಯ ಸುಧಾರಣೆ ಕುರಿತು ಮಾತನಾಡಿದ ಅವರು, ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಈವರೆಗೂ ಮೌಲ್ಯಮಾಪನದ ಅಂಕಗಳ ನಮೂದು, ಫಲಿತಾಂಶಗಳ ಪ್ರಕಟಣೆಯನ್ನು ಬಾಹ್ಯಮೂಲಗಳ (ಔಟ್‌ಸೋರ್ಸಿಂಗ್) ಮೂಲಕ ನಡೆಸುವ ಪ್ರಕ್ರಿಯೆರೂಢಿಯಲ್ಲಿತ್ತು ರೂಢಿಯಲ್ಲಿರಿಸಿದ್ದವು. ಶಿಕ್ಷಣ ಇಲಾಖೆಯ ವತಿಯಿಂದ ಅಭಿವೃದ್ಧಿಪಡಿಸಲಾದ ಡಿಜಿಟಲ್ ಮೌಲ್ಯಮಾಪನ ಸಾಫ್ಟ್ವೇರ್ ಅನ್ನು ಕುವೆಂಪು ವಿಶ್ವವಿದ್ಯಾಲಯವು ಶೀಘ್ರವಾಗಿ ಅಳವಡಿಸಿಕೊಂಡು ಮೌಲ್ಯಮಾಪನ ಪ್ರಕ್ರಿಯೆ ನಡೆಸಿದೆ. ಈ ಹೊಸ ವ್ಯವಸ್ಥೆ ಅನುಸರಿಸಿ ಕೈಗೊಂಡ ಒಂದು ಸೆಮಿಸ್ಟರ್‌ನ ಮೌಲ್ಯಮಾಪನದಿಂದ ವಿವಿ ಹಾಗೂ ಸರ್ಕಾರಕ್ಕೆ ಐದುವರೆ ಕೋಟಿ ಹಣ ಉಳಿತಾಯವಾಗಿದೆ. ಇದು ಅನುಕರಣೀಯ ನಡೆ ಎಂದು ಕುವೆಂಪು ವಿಶ್ವವಿದ್ಯಾಲಯವನ್ನು ಶಿಕ್ಷಣ ಸಚಿವರು ಅಧಿವೇಶನದಲ್ಲಿ ಹೊಗಳಿದ್ದಾರೆ.

ಮುಂದುವರಿದು, ಉನ್ನತ ಶಿಕ್ಷಣದ ಶೈಕ್ಷಣಿಕ, ಆಡಳಿತ, ನೇಮಕಾತಿ, ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಮಹತ್ತರ ಬದಲಾವಣೆಗಳನ್ನು ತರಲಾಗುತ್ತಿದ್ದು, ಸಂಪನ್ಮೂಲಗಳ ದಕ್ಷ ಬಳಕೆಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು