ಈಶ್ವರಪ್ಪ, ಶೆಟ್ಟರ್‌, ಸವದಿಯನ್ನು ಮುಗಿಸಿದ್ದೇ ಸಂತೋಷ್‌: ರೇಣುಕಾಚಾರ್ಯ ವಾಗ್ದಾಳಿ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಖಾಸಗಿ ಟಿವಿ ವಾಹಿನಿಗೆ ಸಂದರ್ಶನ ನೀಡಿರುವ ರೇಣುಕಾಚಾರ್ಯ, ತಾನೇ ಮುಖ್ಯಮಂತ್ರಿ ಆಗಬೇಕೆಂದು ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡಿದರು. ಸಿಎಂ ಪಟ್ಟದ ಮೇಲೆ ಕಣ್ಣಿಟ್ಟು ಒಟ್ಟು 72 ಹೊಸ ಮುಖಗಳಿಗೆ ಟಿಕೆಟ್‌ ಕೊಟ್ಟಿದ್ದರು. ಎಲ್ಲ ಹಿರಿಯ ನಾಯಕರನ್ನು ಟಿಕೆಟ್ ಕೊಡದೆ ಬದಿಗೆ ಸರಿಸಿದರು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಸಭೆ ನಡೆಸಿರುವ ಬಿ.ಎಲ್ ಸಂತೋಷ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, ಬಿ.ಎಸ್. ಯಡಿಯೂರಪ್ಪನವರನ್ನು ಕಡೆಗಣಿಸಿ ಇಡೀ ರಾಜ್ಯದಲ್ಲಿ ಪಕ್ಷವನ್ನು ತಲೆಯೆತ್ತದ ರೀತಿ ಮಾಡಿದರು. ಪಕ್ಷದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದೇ ಸಂತೋಷ್ ಎಂದು ಕಿಡಿಕಾರಿದರು. ಜಗದೀಶ್‌ ಶೆಟ್ಟರ್ ಪಕ್ಷಕ್ಕಾಗಿ ಜೀವ ತೇಯ್ದುವರು. ಅವರ ತಂದೆ ಶಿವಪ್ಪ ಜನಸಂಘದ ಕಾಲದಿಂದಲೂ ಪಕ್ಷವನ್ನು ಕಟ್ಟಿ ಬೆಳಿಸಿದವರು. ಶೆಟ್ಟರ್ ಶಾಸಕನಾಗಿ, ಸಚಿವನಾಗಿ ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು, ಅಂಥವರಿಗೆ ಟಿಕೆಟ್ ನೀಡಲಿಲ್ಲ ಕುರುಬ ಜನಾಂಗದಿಂದ ಪಕ್ಷದ ಪ್ರತಿನಿಧಿಯಾಗಿದ್ದ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಅವರನ್ನು ಟಿಕೆಟ್ ಕೊಡದೆ ಬದಿಗೆ ಸರಿಸಿದರು. ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಅವರಿಗೂ ಸಂತೋಷ್ ಟಿಕೆಟ್ ಸಿಗದಂತೆ ಮಾಡಿದರು. ಯಡಿಯೂರಪ್ಪನವರನ್ನು ದ್ವೇಷಿಸುತ್ತಿದ್ದವರಿಗೆ ಮಾತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಮತ್ತು ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡುವ ಅವಕಾಶ ಕಲ್ಪಿಸಲಾಗುತಿತ್ತು.

ತಾನು ಮುಖ್ಯಮಂತ್ರಿ ಆಗಬೇಕೆನ್ನುವ ಏಕೈಕ ಉದ್ದೇಶದಿಂದ ಸಂತೋಷ್‌ ಗುಂಪುಗಾರಿಕೆ ನಡೆಸಿದ್ದರು. ರಾಜ್ಯದಲ್ಲಿ ತನ್ನದೇ ಪಟಾಲಂ ಕಟ್ಟಿಕೊಂಡು ಹೊಸಮುಖಗಳಿಗೆ ಟಿಕೆಟ್‌ ಕೊಡಿಸಿದ್ದರು. ಇದು ಯಾಕೆ ಕೊಡಬೇಕಿತ್ತು. ತನ್ನದೇ ನಡೆಯಬೇಕೆಂದು ಹೀಗೆಲ್ಲ ಮಾಡಿದ್ದು, ನೇಮಿರಾಜ ನಾಯ್ಕ ಜೆಡಿಎಸ್ಗೆ ಹೋಗಿ ಗೆಲ್ತಾರೆ. ಬೊಮ್ಮಾಯಿ ಸಿಎಂ ಆದ್ರೂ ಅವರಿಗೆ ಸರಿಯಾಗಿ ಆಡಳಿತ ಮಾಡಲು ಬಿಡಲಿಲ್ಲ. ಕೈಕಟ್ಟಿಹಾಕಿದರು ಎಂದರು.

ನಾನು ಜಾತಿವಾದಿ ಅಲ್ಲ. ಯಡಿಯೂರಪ್ಪ ಅವರನ್ನು ಜಾತಿಯ ಕಾರಣಕ್ಕೆ ಬೆಂಬಲಿಸೋದಲ್ಲ. ನಾನೊಬ್ಬ ಜಾತ್ಯತೀತ ವ್ಯಕ್ತಿ. ಹೋರಾಟ ಮಾಡಿಕೊಂಡು ಮೇಲೆ ಬಂದವನು ಹೊನ್ನಾಳಿ ಕ್ಷೇತ್ರದಲ್ಲಿ ಎರಡು ಸಾವಿರದಷ್ಟು ಲಿಂಗಾಯತ ವೋಟ್ ಇರೋದು ವಿಶ್ವ ಹಿಂದು ಪರಿಷತ್ತಿನೊಂದಿಗೆ ಹೋರಾಟ ಮಾಡಿ ಮೇಲೆ ಬಂದಿದ್ದೀನಿ. ಯಡಿಯೂರಪ್ಪ ನನಗೆ ಗಾಡ್‌ ಫಾದರ್‌, ಬಿಜೆಪಿ ತಾಯಿ ಇದ್ದಂತೆ. ಈಗಲೂ ಹೇಳ್ತೆನೆ. ಯಡಿಯೂರಪ್ಪ ಅವರಿಗೆ ನಾಯಕತ್ವ ಕೊಟ್ಟರೆ ಲೋಕಸಭೆ ಗೆಲ್ತೇವೆ. ಈ ಮಾತನ್ನು ಅಮಿತ್‌ ಷಾ ಅವರಿಗೂ ಹೇಳುತ್ತೇವೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಅವರು ಜನರನ್ನು ಎದುರಿಸಿ ಬಂದವರಲ್ಲ. ಅವರೊಂದು ಗ್ಯಾಂಗ್‌ ಕಟ್ಟಿಕೊಂಡಿದ್ದಾರೆ. ಯಾರು ಕೂಡ ಜನರಿಂದ ಆಯ್ಕೆಯಾದವರಲ್ಲ. ಪಾರ್ಟಿ ಕಟ್ಟಿದವರಲ್ಲ ಎಂದು ಸಂತೋಷ್‌ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ.

Gayathri SG

Recent Posts

ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಹೆಚ್ಚು ಮಳೆಯಾಗುವ ನಿರೀಕ್ಷೆ: ಯೆಲ್ಲೋ ಅಲರ್ಟ್

ಇಂದು ರಾಜ್ಯದ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ದಕ್ಷಿಣ ಕನ್ನಡ, ಉಡುಪಿ,…

4 mins ago

ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಆರ್.ಪ್ರಜ್ಞಾನಂದಗೆ ಮತ್ತೊಂದು ಗೆಲುವು

ಸೂಪರ್‌ಬಿಟ್‌ ರ್‍ಯಾಪಿಡ್ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಭಾರತದ ಗ್ರ್ಯಾಂಡ್…

21 mins ago

ನಟ ಚೇತನ್​ ಚಂದ್ರ ಮೇಲೆ 20 ಜನರಿಂದ ಹಲ್ಲೆ : ದೂರು ದಾಖಲು

ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಯುವ ನಟ ಚೇತನ್ ಚಂದ್ರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆದಿದೆ. ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ…

33 mins ago

ಪೆನ್​ಡ್ರೈವ್ ಹಂಚಿಕೆ ಪ್ರಕರಣ : ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಹರಿಬಿಟ್ಟ ಆರೋಪದಲ್ಲಿ ಬಂಧನವಾಗಿರುವ ಆರೋಪಿಗಳಾದ ಚೇತನ್ ಹಾಗೂ ಲಿಖಿತ್‌ಗೆ 14…

47 mins ago

ಇಂದಿನ ರಾಶಿ ಭವಿಷ್ಯ : ಈ ರಾಶಿಗೆ ಹಣಕಾಸಿನ ಸಮಸ್ಯೆ

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 13 ಮೇ​​ 2024ರ…

60 mins ago

96 ಲೋಕಸಭಾ ಕ್ಷೇತ್ರಗಳಲ್ಲಿ ಇಂದು 4ನೇ ಹಂತದ ಮತದಾನ

ಲೋಕಸಭೆ ಚುನಾವಣೆಯ (4ನೇ ಹಂತವು ಇಂದು (ಮೇ 13) 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. ಇಂದು 96…

1 hour ago