News Karnataka Kannada
Thursday, April 18 2024
Cricket
ಬೆಂಗಳೂರು ನಗರ

ಮರಳು ಮಾಫಿಯಾದಿಂದ ನಮ್ಮ ಕುಟುಂಬ ಅಪಾಯದಲ್ಲಿದೆ: ಸಿಎಂಗೆ ಕೆನಡಾದಿಂದ ಪತ್ರ

People have rejected bjp, RSS ideology: CM
Photo Credit : News Kannada

ಬೆಂಗಳೂರು: ಮರಳು ಮಾಫಿಯಾದಿಂದ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಅನಿವಾಸಿ ಭಾರತೀಯರೊಬ್ಬರು ಮನವಿ ಮಾಡಿದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಸದ್ಯ ಕೆನಡಾದಲ್ಲಿ ನೆಲೆಸಿರುವ ಮಂಜು ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವಿ ಮಾಡಿದ್ದರು.

“ನ್ಯಾಯಕ್ಕಾಗಿ ತುರ್ತು ಮನವಿ! ನಮ್ಮ ಕುಟುಂಬವು ಮರಳು ಮಾಫಿಯಾ ಹಿಂಸೆ ಎದುರಿಸುತ್ತಿದೆ. ವಯಸ್ಸಾದ ತಾಯಿಯ ಮೇಲೆ ಹಲ್ಲೆ ನಡೆಸಲಾಗಿದೆ. ನಾನು ಕೆನಡಾದಲ್ಲಿದ್ದು, ಸಿಎಂ ನಮಗೆ ಸಹಾಯ ಮಾಡಬೇಕಿದೆ ಎಂದು ಕೆನಡಾದಲ್ಲಿರುವ ಮಂಜು ಎಂಬವರು ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳ ಕಚೇರಿ, ”ಮಂಜು ಅವರು ಮಾಡಿರುವ ಮನವಿಯನ್ನು ಸಿಎಂ ಸಿದ್ದರಾಮಯ್ಯ ಮನ್ನಣೆಗೆ ತೆಗೆದುಕೊಂಡಿದ್ದಾರೆ. ದೂರಿನ ಆಧಾರದ ಮೇಲೆ ತಕ್ಷಣವೇ ತನಿಖೆ ನಡೆಸಿ ನ್ಯಾಯ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ ಎಂದು ಮರು ಟ್ವೀಟ್‌ ಮಾಡಿತ್ತು.

ಮಂಜು ಅವರು ತಮ್ಮ ಟ್ವೀಟ್‌ನಲ್ಲಿ ಪತ್ರವೊಂದನ್ನು ಆಟಾಚ್‌ ಮಾಡಿದ್ದು, ಪ್ರೀತಿಯ ಸಿದ್ದರಾಮಯ್ಯ ಸರ್, ಸಚಿವ ಮಧು ಬಂಗಾರಪ್ಪ ಅವರ ತವರು ಕುಬಟೂರು ಬಳಿಯ ಲಕ್ಕವಳ್ಳಿ ಗ್ರಾಮದಲ್ಲಿ ನನ್ನ ಕುಟುಂಬದ ಮೇಲೆ ಉಂಟಾಗಿರುವ ನೋವಿನ ಘಟನೆಗೆ ಸಂಬಂಧಿಸಿದಂತೆ ನಿಮ್ಮ ತುರ್ತು ಸಹಾಯವನ್ನು ಕೋರಿ ಕಳವಳದಿಂದ ಪತ್ರ ಬರೆಯುತ್ತಿದ್ದೇನೆ.

ನಾನು ದೂರದೂರಿನಲ್ಲಿರುವ ಕಾರಣ ಕುಟುಂಬಕ್ಕೆ ರಕ್ಷಣೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಿಮ್ಮ ಬೆಂಬಲ ಈಗ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಹಿರಿಯ ನಾಗರಿಕರನ್ನು ಒಳಗೊಂಡ ನಮ್ಮ ಕುಟುಂಬಕ್ಕೆ ಅಕ್ಕಪಕ್ಕದ ಮನೆಯವರು ಮತ್ತು ಮರಳು ಮಾಫಿಯಾದ ತಂಡದಿಂದ ಅಪಾಯ ಎದುರಾಗಿದೆ. ದೈಹಿಕ ವಿಕಲಚೇತನರಾದ ನನ್ನ ತಂದೆ, ನನ್ನ ತಾಯಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಮ್ಮ ಮನೆಯ ಸುತ್ತಮುತ್ತ ಮರಳು ಮಾಫಿಯಾ ನಿರಂತರವಾಗಿ ಅವಾಂತರ ಸೃಷ್ಟಿಸಿದ್ದು, ತೊಂದರೆಯಾಗಿದೆ. ನೆರೆಯ ಕುಟುಂಬವು 2018 ರಲ್ಲಿ ಕುಬಟೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ. ಅಂದಿನಿಂದ ಅವರ ಭ್ರಷ್ಟಾಚಾರ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಮಂಜು ಪತ್ರದಲ್ಲಿ ವಿವರಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು