ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕುಗ್ರಾಮದಲ್ಲಿ ಗುಣಮಟ್ಟದ ಶಿಕ್ಷಣ ಸಿಗಲಿದೆ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯು ಕುಗ್ರಾಮದಲ್ಲೂ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲಿದೆ. ವಿದ್ಯಾರ್ಥಿಗಳು ಏನನ್ನು ಕಲಿಯುತ್ತಾರೋ ಅದನ್ನು ಸಂತೋಷದಿಂದ ಕಲಿಯಬೇಕು. ಉತ್ತಮ ಅಂಕವಷ್ಟೇ ಗುರಿಯಾಗಬಾರದು. ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ರಾಜಮಹಲ್ ಗುಟ್ಟಹಳ್ಳಿಯ ವಿದ್ಯಾಜ್ಯೋತಿ ಚಾರಿಟಬಲ್ ಟ್ರಸ್ಟ್ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ‌ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.

‘ಗುಣಕ್ಕೆ ಮತ್ಸರ ಇರಬಾರದು. ನಾವೆಲ್ಲರೂ ಒಳ್ಳೆಯತನ ಬೆಳೆಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ಒಳ್ಳೆಯ ಸಮಾಜ ಕಟ್ಟಬೇಕು ಎಂಬುದೇ ಇಂತಹ ಕಾರ್ಯಕ್ರಮಗಳ ಸಂದೇಶವಾಗಿರುತ್ತದೆ’ ಎಂದು ಅಶ್ವತ್ಥ ನಾರಾಯಣ ಅವರು ಹೇಳಿದರು.

ಟ್ರಸ್ಟ್‌ನ ರಾಜೇಶ್, ನಾಗೇಂದ್ರ, ರಘುನಂದನ್, ನಾಗೇಶ್ ಬಾಬು ಇದ್ದರು.

Gayathri SG

Recent Posts

ಪತ್ರಿಕಾ ವಿತರಕ ರೈಲಿಗೆ ಸಿಲುಕಿ ಆತ್ಮಹತ್ಯೆ

ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಬಳಿ ನಡೆದಿದೆ.

1 min ago

ಮಲೆ ಮಾದಪ್ಪನಿಗೆ ಬೆಳ್ಳಿ ಆರತಿ ತಟ್ಟೆ ನೀಡಿದ ದಾನಿ : ಹೇಗಿದೆ ಗೊತ್ತಾ?

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಶ್ರೀ ಮಲೆ ಮಹದೇಶ್ವರನಿಗೆ ಬೆಂಗಳೂರಿನ ನಾಗಮಣಿ.ಎಂ ಮತ್ತು ಕುಟುಂಬ 01 ಕೆಜಿ…

10 mins ago

ಭಯಾನಕ ದೃಶ್ಯ : ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಬೆಂಕಿ ತಗುಲಿ 10 ಮಂದಿಗೆ ಗಾಯ

  ಬೈಕ್ ಸ್ಫೋಟಗೊಂಡು ಸುಮಾರು ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ಭಯಾನಕ ಘಟನೆ…

26 mins ago

ಗುಂಡ್ಲುಪೇಟೆ ಪೊಲೀಸರಿಂದ ಕಾರ್ಯಾಚರಣೆ : ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ವೇಳೆ ಗುಂಡ್ಲುಪೇಟೆ ಪೊಲೀಸರು ದಾಳಿ 2 ಕೆ.ಜಿ‌ ಗಾಂಜಾ ಸಮೇತ ಇಬ್ಬರು ಆರೋಪಿಗಳನ್ನು…

46 mins ago

13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ : ಪೊಲೀಸ್‌ ಅಲರ್ಟ್‌

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ಭಾನುವಾರ ಇ-ಮೇಲ್‌ ಮೂಲಕ ಬೆದರಿಕಯೊಂದು ಬಂದಿದ್ದು ಅದರಂತೆ ದೇಶಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ…

53 mins ago

ಮೂರು ಕೊಲೆ ಕೇಸ್‌ : ಬೆಳ್ಳಂ ಬೆಳಗೆ ಆರೋಪಿ ಕಾಲಿಗೆ ಪೊಲೀಸ್‌ ಗುಂಡೇಟು

ಶಿವಮೊಗ್ಗದಲ್ಲಿ ನಡೆದಿದ್ದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಮೂವರನ್ನು ನಡುಬೀದಿಯಲ್ಲಿ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗಳಲ್ಲಿ ಒಬ್ಬ ರೌಡಿ ಶೀಟರ್‌ ಕಾಲಿಗೆ…

1 hour ago