News Karnataka Kannada
Thursday, April 18 2024
Cricket
ಸಾಂಡಲ್ ವುಡ್

ನಿರ್ಮಾಪಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ ಕಿಚ್ಚ ಸುದೀಪ್

Kichcha Sudeep files criminal case against producers
Photo Credit : IANS

ಬೆಂಗಳೂರು: ನಟ ಕಿಚ್ಚ ಸುದೀಪ ವಿರುದ್ಧ ನಿರ್ಮಾಪಕ ಎನ್‌.ಎಂ ಕುಮಾರ್‌ ಹಾಗೂ ಸುರೇಶ್‌ ಮಾಡಿದ್ದ ಆರೋಪ ಹೊಸ ತಿರುವು ಪಡೆದುಕೊಂಡಿದೆ. ಎನ್​ಎಂ ಕುಮಾರ್ ಹಾಗೂ ಸುರೇಶ್ ವಿರುದ್ಧ ನಟ ಕಿಚ್ಚ ಸುದೀಪ್ ಜುಲೈ 15 ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದರು. ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯವು ಆಗಸ್ಟ್ 17ಕ್ಕೆ ಅರ್ಜಿಯ ವಿಚಾರಣೆ ಮುಂದೂಡಿತು.

ಈ ವೇಳೆ ಸುದ್ದಿಗಾರರೊಂದಿಗೆ ನಟ ಸುದೀಪ್, ” ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮೇಲೆ ನನಗೆ ಗೌರವ ಇದೆ. ಆದರೆ ನನ್ನ ವೈಯಕ್ತಿಕ ಹಿತಾಸಕ್ತಿಗೆ ಅದನ್ನು ಬಳಸುವುದಿಲ್ಲ. ಎಂದರು. ಸತ್ಯವನ್ನು ಅರಸಿ ನಾನು ನ್ಯಾಯಾಲಯಕ್ಕೆ ಬಂದಿದ್ದೇನೆ. ಯಾರು ಏನೇ ಆರೋಪ ಮಾಡಿದ್ರು ಕೋರ್ಟ್ ನಿಂದ ಸರಿ ಉತ್ತರ ಸಿಗುತ್ತದೆ ಎಂದರು.

ಬಾಯಿ ಇದೆ ಎಂದು ಏನೇನೋ ಮಾತನಾಡಬಾರದು. ಹಾಗೆಯೇ ಬಿಟ್ಟರೇ ಮಾತನಾಡುವುದು ಮುಂದುವರಿಯುತ್ತದೆ. ನನ್ನ ಮೇಲೆ ಮಾಡಿದ ಆರೋಪಕ್ಕೆ ಸ್ಪಷ್ಟನೆ ನೀಡುವಂತೆ ನೋಟಿಸ್‌ ನೀಡಿದ್ದೆ. ಆದರೆ ನೋಟಿಸ್‌ ಗೆ ಸರಿಯಾಗಿ ಸ್ಪಂದನೆ ನೀಡದ ಕಾರಣ ಕೋರ್ಟ್‌ ಗೆ ಬಂದಿದ್ದೇನೆ ಎಂದರು.

ಯಾವುದೇ ಸುಳ್ಳಿರಲಿ ಅಥವಾ ಸತ್ಯ ಇರಲಿ ಬಹಿರಂಗವಾಗಿ ಹೊರಗೆ ಬರಲೇ ಬೇಕು, ಸರಿಯಾದ ಮಾರ್ಗದಲ್ಲಿ ಹೋಗುತ್ತಿದ್ದೇನೆ ಅಂತಾ ನಾನು ಅಂದ್ಕೊಂಡಿದೀನಿ. ಅದನ್ನೇ ಪರೀಕ್ಷೆ ಮಾಡಿಕೊಳ್ಳಲು ಬಂದಿದ್ದೀನಿ, ಯಾರದ್ದು ಸರಿ ಯಾರದ್ದು ತಪ್ಪು ಎಂದು ತಿಳಿಸಲು ಇದಕ್ಕಿಂತಲೂ ಸರಿಯಾದ ಸ್ಥಳವಿಲ್ಲ. ಯಾವುದು ಎಲ್ಲಿ ಇತ್ಯರ್ಥ ಆಗಬೇಕೊ ಅಲ್ಲಿ ಇತ್ಯರ್ಥ ಆಗುತ್ತೆ” ಎಂದರು ಸುದೀಪ್.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು