News Karnataka Kannada
Thursday, April 18 2024
Cricket
ಬೆಂಗಳೂರು ನಗರ

ಕರ್ನಾಟಕದಲ್ಲಿ ಐಫೋನ್‌ ಘಟಕ ಸ್ಥಾಪನೆಗೆ ಫಾಕ್ಸ್‌ಕಾನ್ ನಿಂದ 8,800 ಕೋಟಿ ರೂ. ಹೂಡಿಕೆ

Foxconn has invested Rs 8,800 crore to set up an iPhone plant in Karnataka
Photo Credit : News Kannada

ಬೆಂಗಳೂರು: ತೈವಾನ್ ದೇಶದ ಚಿಪ್ ತಯಾರಿಕಾ ದೈತ್ಯ ಫಾಕ್ಸ್‌ಕಾನ್ ಇಂಡಸ್ಟ್ರಿಯಲ್ ಇಂಟರ್‌ನೆಟ್ ಸಿಇಒ ಬ್ರ್ಯಾಂಡ್ ಚೆಂಗ್ ನೇತೃತ್ವದ ನಿಯೋಗವು ವಿಧಾನಸೌಧದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತುಮಕೂರು ಬಳಿ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಕುರಿತು ಚರ್ಚಿಸಿತು.

ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ಆರ್‌ಡಿಪಿಆರ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಇತರ ಹಿರಿಯ ಅಧಿಕಾರಿಗಳು ಇದ್ದರು. ಫಾಕ್ಸ್‌ಕಾನ್ ಇಂಡಸ್ಟ್ರಿಯಲ್ ಇಂಟರ್ನೆಟ್ ಕಂಪನಿಯು ಫಾಕ್ಸ್‌ಕಾನ್‌ನ ಅಂಗಸಂಸ್ಥೆಯಾಗಿದ್ದು, ಇದು ಆಪಲ್ ಫೋನ್‌ಗಳ ಹೊರ ಪದರವನ್ನು ತಯಾರಿಸುತ್ತದೆ. ಕಂಪನಿಯು 8,800 ಕೋಟಿ ಹೂಡಿಕೆ ಮಾಡಲು ಆಸಕ್ತಿ ತೋರಿದೆ. ತುಮಕೂರು ಬಳಿಯ ಕೈಗಾರಿಕಾ ಪ್ರದೇಶದಲ್ಲಿ 100 ಎಕರೆ ಜಮೀನು ಲಭ್ಯವಿದೆ ಎಂದು
ಸಿಎಂ ಸಿದ್ದರಾಮಯ್ಯ ನಿಯೋಗಕ್ಕೆ ಭರವಸೆ ನೀಡಿದರು. ಹೂಡಿಕೆಗೆ ನಮ್ಮ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಆಶ್ವಾಸನೆ ನೀಡಿದರು.

300 ಎಕರೆ ಭೂಮಿಯನ್ನು ತೈವಾನ್ ಚಿಪ್ ತಯಾರಿಕೆಯ ದೈತ್ಯ ಸಂಸ್ಥೆಗೆ ಹಸ್ತಾಂತರಿಸಲು ಇದ್ದ ಕಾನೂನು ತೊಡಕುಗಳನ್ನು ತೆರವುಗೊಳಿಸಲಾಗಿದೆ. ಶೀಘ್ರದಲ್ಲೇ ಭೂಮಿಯನ್ನು ಕಂಪನಿಗೆ ಹಸ್ತಾಂತರಿಸಲಾಗುವುದು ಎಂದು ಕರ್ನಾಟಕ ಸರ್ಕಾರ ಇತ್ತೀಚೆಗೆ ಘೋಷಿಸಿತ್ತು. ಮುಂದಿನ ಏಪ್ರಿಲ್ ವೇಳೆಗೆ ಕಂಪನಿ ಉತ್ಪಾದನೆ ಆರಂಭಿಸಲಿದೆ ಎಂದೂ ಸಚಿವ ಪಾಟೀಲ್ ಇತ್ತೀಚೆಗೆ ಘೋಷಿಸಿದ್ದರು.

”ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಐಟಿಐಆರ್ (ಐಟಿ ಹೂಡಿಕೆ ಪ್ರದೇಶ)ದಲ್ಲಿ ಕಂಪನಿಗೆ ಒಟ್ಟು 300 ಎಕರೆ ನೀಡಲಾಗುವುದು. 50,000 ಉದ್ಯೋಗಗಳನ್ನು ಒದಗಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸರ್ಕಾರವು ಅನುಕೂಲ ಮಾಡುತ್ತಿದೆ ಎಂದು ಅವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು