ಕಳೆದ ಬಾರಿಯೂ ಕಾಂಗ್ರೆಸ್‌ ಪರವಾಗಿತ್ತು ಚುನಾವಣೋತ್ತರ ಸಮೀಕ್ಷೆ, ಅಧಿಕಾರ ನಮಗೇ ಸಿಎಂ ಪ್ರತಿಕ್ರಿಯೆ

ಹುಬ್ಬಳ್ಳಿ: ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್‌ ಪರವಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಳೆದ ಬಾರಿಯ ಸಮೀಕ್ಷೆಗಳು ಕಾಂಗ್ರೆಸ್​ ಪರವೇ ಹೇಳಿದ್ದವು. ಕಾಂಗ್ರೆಸ್ 107ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಹೇಳಿದ್ದವು. ಆದರೆ ಚುನಾವಣಾ ಫಲಿತಾಂಶದ ದಿನ ಅದು ಉಲ್ಟಾ ಆಯಿತು. ಈಗಲೂ ಅದೇ ನಂಬಿಕೆಯಿದೆ. ನಾವು ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಶಿಗ್ಗಾವಿ ಜನತೆ ತೋರಿದ ಪ್ರೀತಿಗೆ ನಾನು ಚಿರಖುಣಿ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದರು. ನನ್ನ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಮಾಡಿದರೂ ನಿನ್ನೆಗೆ ಮುಗಿದಿದೆ. ನಾನು ದೊಡ್ಡ ಬಹುಮತದಿಂದ ಗೆಲ್ಲುತ್ತೇನೆ. ಮತದಾನೋತ್ತರ ಸಮೀಕ್ಷೆಗಳು ಕಳೆದ ಬಾರಿ ಕಾಂಗ್ರೆಸ್ 107 ಕ್ಕೂ ಅಧಿಕ ಸ್ಥಾನ ಅಂತ ಹೇಳಿದ್ದವು. ಆದರೆ ಫಲಿತಾಂಶದ ದಿನ ಅದು ಉಲ್ಟಾ ಆಯಿತು. ಈಗಲೂ ಅದೇ ನಂಬಿಕೆಯಿದೆ. ಮೋದಿಯವರ ಪ್ರಚಾರ ನಮಗೆ ಪ್ಲಸ್ ಆಗಿದೆ. ಯುವಕರು ಮತ್ತು ಮಹಿಳೆಯರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.

Sneha Gowda

Recent Posts

ತಾಪಮಾನ ಏರಿಕೆ: ದೇಹಕ್ಕೆ ಪ್ರತಿದಿನ 2-3 ಲೀಟರ್​ ನೀರು ಅತ್ಯಗತ್ಯ

ಸುಡೋ ಬಿಸಿಲಿಗೆ ಜನ ತತ್ತಿರಿಸಿ ಹೋಗಿದ್ದು, ಮನೆಯಿಂದ ಹೊರಗೆ ಕಾಲಿಡಲು ಹೆದರುವಂತಾಗಿದೆ. ಈ ಬಾರಿ ಪ್ರತಿವರ್ಷಕ್ಕಿಂತ ಹೆಚ್ಚಾಗಿ ಬಿಸಿಲಿದೆ. ಈ…

9 mins ago

ಚಿನ್ನದ ಬೆಲೆಯಲ್ಲಿ ಇಳಿಕೆ : ಇಂದಿನ ಚಿನ್ನ ಬೆಳ್ಳಿ ದರ ಪಟ್ಟಿ ಹೀಗಿದೆ!

ಚಿನ್ನ ಮತ್ತು ಬೆಳ್ಳಿ ಬೆಲೆ ಅಸ್ವಾಭಾವಿಕವಾಗಿ ಏರಿಕೆ ಕಂಡಿದ್ದು, ಇದೀಗ ಕೊಂಚ ಇಳಿಕೆಯಾಗಿದೆ. ಇಂದು ಗುರುವಾರ ಚಿನ್ನದ ಬೆಲೆ ಗ್ರಾಮ್​ಗೆ…

33 mins ago

ವಿವಾದಾತ್ಮಕ ಹೇಳಿಕೆ : ಶಾಸಕ ರಾಜು ಕಾಗೆಗೆ ಚುನಾವಣಾ ಇಲಾಖೆ ನೋಟಿಸ್‌

ವಿವಾದಾತ್ಮಕ ಹೇಳಿಕೆ ಹಿನ್ನಲೆ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆಗೆ ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಿನ್ನೆ(ಏ.30) ಪ್ರಿಯಾಂಕಾ ಜಾರಕಿಹೊಳಿ‌…

8 hours ago

ಕಾರ್ತಿಕ್​ ಜಯರಾಮ್​ ಹುಟ್ಟುಹಬ್ಬ ಪ್ರಯುಕ್ತ ‘ದಿ ವೀರ್​’​ ಪೋಸ್ಟರ್ ಔಟ್‌

ಸ್ಯಾಂಡಲ್​ವುಡ್​ನ ಖ್ಯಾತ ನಟ ಕಾರ್ತಿಕ್​ ಜಯರಾಮ್​ ಅಲಿಯಾಸ್​ ಜೆಕೆ ಅವರು ಇಂದು (ಮೇ 1) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

9 hours ago

ಕೊಳೆತ ಸ್ಥತಿಯಲ್ಲಿ ಮಹಿಳೆ ಮೃತ ದೇಹ ಪತ್ತೆ

ಮಹಿಳೆಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಮೃತದೇಹ ಗುರುತು ಪತ್ತೆಯಾಗದಂತೆ ಬೆಂಕಿ ಹಚ್ಚಿ ಅರಣ್ಯದಲ್ಲಿ ಹಾಕಿ ಹೋಗಿರುವ ಪ್ರಕರಣ ತಾಲ್ಲೂಕಿನ ತೂಬಗೆರೆ…

9 hours ago

ವಿಜಯ ಸಂಕಲ್ಪ ಸಮಾವೇಶಕ್ಕೆ ಆಗಮಿಸಿದ ಅಮೀತ್ ಶಾಗೆ ಅದ್ದೂರಿ ಸ್ವಾಗತ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪರವಾಗಿ ಪ್ರಚಾರಕ್ಕೆ ಬಂದ ಕೇಂದ್ರ ಗೃಹ ಮಂತ್ರಿ ಅಮೀತ್ ಶಾ ಅವರು ವಿಜಯ…

10 hours ago