News Karnataka Kannada
Saturday, April 13 2024
Cricket
ಬೆಂಗಳೂರು ನಗರ

ಪಿಎಂ ಕಿಸಾನ್ ಸ್ಕೀಮ್‌ ಇ ಕೆವೈಸಿಯಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ

PM Kisan Scheme e-KYC
Photo Credit : News Kannada

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಪಿಎಂ ಕಿಸಾನ್ ಸ್ಕೀಮ್​ನಲ್ಲಿ ಇ ಕೆವೈಸಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಹೊಸ ತಂತ್ರಾಂಶವೊಂದನ್ನು ರೂಪಿಸಿದೆ.

ಮುಖದ ಚಹರೆಯ ಮೂಲಕ ವ್ಯಕ್ತಿಯ ಗುರುತು ಕೊಡುವ ಫೀಚರ್​ವೊಂದನ್ನು ಅನಾವರಣಗೊಳಿಸಲಾಗಿದೆ. ಅನೇಕ ರೈತರ ಕೈಬೆರಳ ಗುರುತು ಆಧಾರ್ ಡೇಟಾಗೆ ಹೊಂದಿಕೆ ಆಗುತ್ತಿಲ್ಲ ಎಂಬ ದೂರು ಕೇಳಿಬಂದ ಕಾರಣ ಸರ್ಕಾರ ಈ ಹೊಸ ಅವಕಾಶ ಕೊಟ್ಟಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಜೂನ್ 22ರಂದು ಕಾರ್ಯಕ್ರಮವೊಂದರಲ್ಲಿ ಈ ಫೀಚರ್ ಅನ್ನು ಅನಾವರಣಗೊಳಿಸಿದರು.

ಬಳಕೆ ಹೇಗೆ:
ನಾವು ಆಧಾರ್ ಕಾರ್ಡ್ ಮಾಡಿಸುವಾಗ ಬಯೋಮೆಟ್ರಿಕ್ ಮಾಹಿತಿ ಪಡೆಯಲಾಗುತ್ತದೆ. ಅದರಲ್ಲಿ ಕೈಬೆರಳ ಗುರುತು ಮತ್ತು ಕಣ್ಣಿನ ಪೊರೆ (ಐರಿಸ್) ಗುರುತನ್ನು ಪಡೆಯಲಾಗಿರುತ್ತದೆ. ವಯಸ್ಸಾದ ಮೇಲೆ ಕೈಬೆರಳುಗಳ ಚರ್ಮ ಸವೆದು ಹೋಗುವುದರಿಂದ ಬೆರಳ ಗುರುತು ಸ್ಪಷ್ಟ ಇರುವುದಿಲ್ಲ. ಆಗ ಐರಿಸ್ ಗುರುತು ಕೆಲಸಕ್ಕೆ ಬರುತ್ತದೆ. ಪಿಎಂ ಕಿಸಾನ್ ಸ್ಕೀಮ್​ನಲ್ಲಿ ಈ ಸೌಲಭ್ಯ ಒದಗಿಸಲಾಗಿದೆ. ಸ್ಕೀಮ್​ನಿಂದ ಯಾವುದೇ ಅರ್ಹ ಫಲಾನುಭವಿಗಳು ಹೊರಬೀಳಬಾರದೆಂಬ ಉದ್ದೇಶದಿಂದ ಈ ಫೀಚರ್ ಸೇರಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು