ಕರ್ನಾಟಕದಲ್ಲಿ ಕಾಂಗ್ರೆಸ್ ಬಿರುಗಾಳಿಗೆ ಕೊಚ್ಚಿ ಹೋದ ಬಿಜೆಪಿ

ಬೆಂಗಳೂರು: ಕಲ್ಯಾಣ ಕರ್ನಾಟಕ ಹೇಳಿಕೇಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ನೆಲ. ಇದೇ ನೆಲದಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳಿಸುತ್ತೇ ಅನ್ನೋ ನಿರೀಕ್ಷೆ ನಿಜವಾಗಿದೆ. ಇಲ್ಲಿರೋ 41 ಸ್ಥಾನಗಳ ಪೈಕಿ 25 ರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ರೆ, ಬಿಜೆಪಿ ಗೆದ್ದಿರೋದು 11 ಸ್ಥಾನ ಮಾತ್ರ. ಅದರಲ್ಲೂ ಬಳ್ಳಾರಿಯ ಜಿಲ್ಲೆಯ ಐದೂ ಕ್ಷೇತ್ರಗಳು ಕಾಂಗ್ರೆಸ್‌ ಮಡಿಲಿಗೆ ಬಿದ್ದಿವೆ. ಯಾದಗಿರಿ, ರಾಯಚೂರು, ಕಲಬುರಗಿಯಲ್ಲೂ ಕಾಂಗ್ರೆಸ್‌ ಪಾರಮ್ಯ ಮೆರೆದಿದೆ.

ಕಿತ್ತೂರು ಕರ್ನಾಟಕದಲ್ಲೂ ಕಾಂಗ್ರೆಸ್‌ ದಿಗ್ವಿಜಯ ಸಾಧಿಸಿದ್ದು, 44 ಕ್ಷೇತ್ರಗಳ ಪೈಕಿ ಬರೋಬ್ಬರಿ 28 ರಲ್ಲಿ ಕಾಂಗ್ರೆಸ್‌ ಸುನಾಮಿ ಎದ್ದಿದೆ. 15 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ವಿಷ್ಯ ಅಂದ್ರೆ ಬೆಳಗಾವಿಯ 18ಕ್ಷೇತ್ರಗಲ್ಲಿ 11 ಕ್ಷೇತ್ರ ಕಾಂಗ್ರೆಸ್‌ ಮಡಿಲಿಗೆ ಬಿದ್ದಿವೆ. ವಿಜಯಪುರದಲ್ಲಿ 6, ಬಾಗಲಕೋಟೆಯಲ್ಲಿ 5 ಸೀಟ್‌ಗಳು ಕಾಂಗ್ರೆಸ್‌ ತೆಕ್ಕೆಗೆ ಜಾರಿವೆ.

ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಸುಂಟರಗಾಳಿ ಎದ್ದಿದ್ದು, 19 ಕ್ಷೇತ್ರಗಲ್ಲಿ 16 ಕ್ಷೇತ್ರಗಳು ಕಾಂಗ್ರೆಸ್‌ ತೆಕ್ಕೆಗೆ ಬಿದ್ದಿವೆ. ಇಲ್ಲಿಯ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಗೆದ್ದಿದ್ದು ಮೂರೇ ಕ್ಷೇತ್ರ ಮಾತ್ರ. ಹಾವೇರಿ, ದಾವಣಗೆರೆ, ಚಿತ್ರದುರ್ಗದಲ್ಲಿ ಬಿಜೆಪಿ ಧೂಳೀಪಟವಾಗಿದ್ದು, ಜಿಲ್ಲೆಗೊಂದರಂತೆ ಮೂರು ಕ್ಷೇತ್ರ ಗೆದ್ದಿದೆ.

ಕಾಂಗ್ರೆಸ್‌ನ ಪ್ರಚಂಡ ಬಹುಮತದಲ್ಲಿ ಹಳೇ ಮೈಸೂರಿನ 9 ಜಿಲ್ಲೆಗಳ ಪಾತ್ರ ದೊಡ್ಡದಿದೆ. 57 ಕ್ಷೇತ್ರಗಳ ಪೈಕಿ 36 ರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಅದ್ರಲ್ಲೂ ಸಿದ್ದು ತವರು ಮೈಸೂರಿನಲ್ಲಿ 8, ತುಮಕೂರಲ್ಲಿ 7, ಹಾಗೂ ಮಂಡ್ಯದಲ್ಲಿ 5 ಸೀಟ್‌ ಬಾಚಿಕೊಂಡಿದೆ. ಭದ್ರಕೋಟೆಯಲ್ಲಿ ಜೆಡಿಎಸ್‌ ಗೆದ್ದಿದ್ದು 14 ಕ್ಷೇತ್ರ ಸ್ಥಾನ ಮಾತ್ರ. ಜೆಡಿಎಸ್‌ಗೆ ಹಾಸನದಲ್ಲಿ 4 ಸ್ಥಾನ ಬಂದ್ರೆ, ಕಳೆದ ಬಾರಿ ಕ್ಲೀನ್‌ ಸ್ವೀಪ್‌ ಮಾಡಿದ್ದ ಮಂಡ್ಯದಲ್ಲಿ ಜೆಡಿಎಸ್‌ಗೆ ಸಿಕ್ಕಿದ್ದು 1 ಸ್ಥಾನ ಮಾತ್ರ. ಇನ್ನು ಮೋದಿ ಕರೆಸಿ ಅಬ್ಬರದ ಪ್ರಚಾರ ನಡೆಸಿದ್ದ ಬಿಜೆಪಿಗೆ ಸಿಕ್ಕಿದ್ದು 5 ಸ್ಥಾನ ಮಾತ್ರ. ಉಳಿದಂತೆ ಮಲೆನಾಡಿನಲ್ಲೂ ಕಾಂಗ್ರೆಸ್‌ ದಿಗ್ವಿಜಯ ಸಾಧಿಸಿದ್ದು, 12 ಸ್ಥಾನಗಳ ಪೈಕಿ 8 ರಲ್ಲಿ ಗೆದ್ದಿದೆ. ಚಿಕ್ಕಮಗಳೂರಿನಲ್ಲಂತೂ ಕ್ಲೀನ್ ಸ್ವೀಪ್‌ ಮಾಡಿದೆ.

ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ ಸುನಾಮಿ ಎದ್ದಿದ್ರು, ಕರಾವಳಿಯಲ್ಲಿರೋ ಬಿಜೆಪಿ ಅಲೆಯನ್ನ ತಡೆಯಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ರಾಜ್ಯದ ಉದ್ದಗಲಕ್ಕೂ ಬಿಜೆಪಿ ಧೂಳೀಪಟವಾಗಿದ್ರೆ, ಕರಾವಳಿಯಲ್ಲಿ ನೆಲೆ ಉಳಿಸಿಕೊಂಡಿದೆ. 19 ಸ್ಥಾನಗಳ ಪೈಕಿ 13 ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, 6 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ಗೆ ಜಯಗಳಿಸಿದೆ . ಅದರಲ್ಲೂ ಉಡುಪಿಯನ್ನ ಕ್ಲೀನ್‌ ಸ್ವೀಪ್‌ ಮಾಡಿದ ಬಿಜೆಪಿ 5 ಸ್ಥಾನ ಬಾಚಿಕೊಂಡಿದೆ.

ಒಟ್ಟಿನಲ್ಲಿ ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್‌ ಹರಡಿಕೊಂಡಿದ್ದು, ಕರಾವಳಿಯಲ್ಲಿ ಮಾತ್ರ ಬಿಜೆಪಿ ಗಟ್ಟಿಯಾಗಿ ನಿಂತಿದೆ.

Sneha Gowda

Recent Posts

ಬಿ.ವೈ ರಾಘವೇಂದ್ರ ಪರ ಮತಯಾಚನೆ ನಡೆಸಿದ ವೇದವ್ಯಾಸ್ ಕಾಮತ್

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದ ಬಿಜೆಪಿಯ ಬೃಹತ್ ರೋಡ್ ಶೋ ನಲ್ಲಿ ಮಂಗಳೂರು ನಗರ ದಕ್ಷಿಣದ ಶಾಸಕರಾದ ವೇದವ್ಯಾಸ್…

7 mins ago

ಜಾತಿಗಿಂತ‌ ದೇಶದ ಹಿತ‌ ಮುಖ್ಯ: ವಿಜಯ್ ಜೋಶಿ ಮನವಿ

ಕಳೆದ 25 ವರ್ಷಗಳಿಂದ ವಿಜಯಪುರ ಜಿಲ್ಲೆಯ ಪ್ರಬುದ್ಧ ಮತದಾರರು ಯಾವುದೇ ಜಾತಿ, ಮತ, ಪಂಥ ನೋಡದೇ ಜಾತಿಗಿಂತ ದೇಶದ ಹಿತವೇ…

1 hour ago

ಪ್ರತಿ ಬೂತ್ ನಲ್ಲಿ ಬಿಜೆಪಿ ಪರ ಅಲೆ, ಕಾರ್ಯಕರ್ತರಲ್ಲಿ ಅತ್ಯುತ್ಸಾಹ : ಪ್ರಕಾಶ ಅಕ್ಕಲಕೋಟ.

ವಿಜಯಪುರ ಲೋಕಸಭಾ ಕ್ಷೇತ್ರದ ಪ್ರತಿಯೊಂದು ಬೂತ್ ಗಳಲ್ಲಿ ಬಿಜೆಪಿ‌ ಪರ ಉತ್ತಮ ವಾತಾವರಣ ಸೃಷ್ಟಿಯಾಗಿದ್ದು, ಬಿಜೆಪಿ ಪರ‌ ಅಲೆ‌ ಇದೆ…

1 hour ago

ಮೃಣಾಲ್‌ ಹೆಬ್ಬಾಳ್ಕರ್ ಪರ ಹಣ ಹಂಚಿಕೆ ಆರೋಪ: ಐವರ ಬಂಧನ

ಬೆಳಗಾವಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಪರ ಹಣ ಹಂಚಿಕೆ ಆರೋಪದಲ್ಲಿ ಹಣದ ಸಮೇತ ನಾಲ್ವರು ಸಿಕ್ಕಿಬಿದ್ದ ಘಟನೆ…

1 hour ago

ಬಿಜೆಪಿ ಸುಳ್ಳು ಇನ್ನು ನಡೆಯಲ್ಲ: ಲಕ್ಷ್ಮಣ ಸವದಿ ವಾಗ್ದಾಳಿ

ಮೋದಿ ಮತ್ತವರ ಬಳಗ ಮತ್ತು ಬಿಜೆಪಿಯವರ ಸುಳ್ಳುಗಳನ್ನು ಜನ ಅರಿತಿದ್ದು, ಈ ಸಲ ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದು ಮಾಜಿ…

2 hours ago

ಗ್ಯಾರಂಟಿಗಳು ಕಾಂಗ್ರೆಸ್ ಹಾಗು ಖಂಡ್ರೆ ಗೆಲುವಿಗೆ ಶ್ರೀರಕ್ಷೆ

ಜನಸಾಮಾನ್ಯರಿಗೆ ಆಸರೆಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್…

2 hours ago