ಮಂಗಳೂರು: ಅಕ್ರಮ ಸಂಬಂಧ ಸಂಶಯ, ಯುವಕನ ಕೊಲೆ

 ಮಂಗಳೂರು: ತನ್ನ ಪತ್ನಿಯ ಜತೆ ಅಕ್ರಮ ಸಂಬಂಧವಿರಿಸಿಕೊಂಡಿರುವ ಸಂಶಯದಲ್ಲಿ ವ್ಯಕ್ತಿಯೊಬ್ಬ ಯುವಕನ ಎದೆಗೆ ರಾಡ್‌ನಿಂದ ಹೊಡೆದು ಕೊಲೆಗೈದ ಘಟನೆ ಕೂಳೂರಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಪಶ್ಚಿಮ ಬಂಗಾಳದ ವಾಸುದೇವ ಗುನಿಯಾ (34) ಕೊಲೆಗೈದ ಆರೋಪಿ ಎಂದು ‌ಪೊಲೀಸರು ತಿಳಿಸಿದ್ದು, ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಪಶ್ಚಿಮ ಬಂಗಾಳದ ಪ್ರಸ್ತುತ ಕುಳೂರಿನಲ್ಲಿ ವಾಸವಾಗಿರುವ ಬಿಕಾಸ್ ಗುನಿಯಾ (22) ಕೊಲೆಯಾದ ಯುವಕ.

ಪ್ರಕರಣದ ವಿವರ: ಕೊಲೆಯಾದ ಬಿಕಾಸ್ ಗುನಿಯಾ ಮತ್ತು ಆರೋಪಿ ವಾಸುದೇವ ಗುನಿಯಾ ಪಶ್ಚಿಮ ಬಂಗಳಾದವರಾಗಿದ್ದು, ಕುಳೂರಿನಲ್ಲಿ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ವಾಸುದೇವ ಗುನಿಯಾನಿಗೆ ಬಿಕಾಸ್ ಗುನಿಯಾ ಊರಿನ ಯುವತಿಯ ಜತೆ ಹಲವು ವರ್ಷದ ಹಿಂದೆ ಮದುವೆಯಾಗಿತ್ತು. ಆತನ ಪತ್ನಿ ಪಶ್ಚಿಮ ಬಂಗಳಾದಲ್ಲೇ ವಾಸ್ತವ್ಯವಿದ್ದಳು. ಆಕೆಯ ಜತೆ ಬಿಕಾಸ್ ಗುನಿಯಾನಿಗೆ ಅಕ್ರಮ ಸಂಬಂಧವಿದೆ, ಮೊಬೈಲ್ ಮೂಲಕ ಮಾತನಾಡುತ್ತಾನೆ ಎಂಬ ಸಂಶಯ ವ್ಯಕ್ತಪಡಿಸಿದ ಆರೋಪಿಯು ಈ ವಿಚಾರದಲ್ಲಿ ಹಲವು ಬಾರಿ ಗಲಾಟೆ ಮಾಡಿದ್ದ ಎನ್ನಲಾಗಿದೆ.

ರವಿವಾರ ಮಧ್ಯಾಹ್ನ ವಾಸುದೇವ ಗುನಿಯಾ ಪಾನಮತ್ತನಾಗಿ ಅಕ್ರಮ ಸಂಬಂಧದ ನೆಪದಲ್ಲಿ ಬಿಕಾಸ್ ಜತೆ ತಗಾದೆ ತೆಗೆದಿದ್ದು, ಮಾತಿಗೆ ಮಾತು ಬೆಳೆದು ಆರೋಪಿ ವಾಸುದೇವ ರಾಡ್‌ನಿಂದ ಬಿಕಾಸ್‌ನ ಎದೆಗೆ ಗುದ್ದಿದ್ದಾನೆ ಎನ್ನಲಾಗಿದೆ.‌ ಇದರಿಂದ ಗಂಭೀರ ಗಾಯಗೊಂಡ ಬಿಕಾಸ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Sneha Gowda

Recent Posts

ಇಂದು 49 ಕ್ಷೇತ್ರಗಳಲ್ಲಿ 5ನೇ ಹಂತದ ಮತದಾನ

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನವು ಸೋಮವಾರ (ಮೇ 20) ನಡೆಯಲಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ…

13 mins ago

ಇಂದಿನ ರಾಶಿ ಭವಿಷ್ಯ : ಈ ರಾಶಿಯವರಿಗೆ ಹೊಸ ಉದ್ಯೋಗ ಆಫರ್ ಬರಲಿದೆ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ…

23 mins ago

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

8 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

8 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

9 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

9 hours ago