News Karnataka Kannada
Monday, April 29 2024
ಬೆಂಗಳೂರು ನಗರ

ಬೆಂಗಳೂರು: ಭಾರತ ಜೋಡೊ ಯಾತ್ರೆಗೆ ರಾಜ್ಯ ಸಮಿತಿ ಅಧ್ಯಕ್ಷರ ಪಟ್ಟಿ ಪ್ರಕಟ

Bengaluru: The Congress is likely to release its list of candidates on March 17.
Photo Credit : News Kannada

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೊ ಯಾತ್ರೆ ನಡೆಯುತ್ತಿದ್ದು, ಅಕ್ಟೋಬರ್​ 3ಕ್ಕೆ ಕರ್ನಾಟಕಕ್ಕೆ ಪ್ರವೇಶಿಸಲಿದೆ.

ಈ ಸಂಬಂಧ ರಾಜ್ಯನಾಯಕರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಯಾತ್ರೆಗೆ ರಾಜ್ಯ ಸಮಿತಿ ಅಧ್ಯಕ್ಷರನ್ನು ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಪಟ್ಟಿ ಬಿಡುಗಡೆ ಮಾಡಿದ್ದಾರೆ.

1. ವಸತಿ ಸಮಿತಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ನೇಮಕ

2. ರಾಜ್ಯದ 7 ಲೋಕಸಭಾ ಕ್ಷೇತ್ರಗಳಿಗೆ ಸಮಿತಿ ಅಧ್ಯಕ್ಷರ ನೇಮಕ

3. ಚಾಮರಾಜನಗರ ಕ್ಷೇತ್ರದ ಅಧ್ಯಕ್ಷರಾಗಿ ಧ್ರುವನಾರಾಯಣ

4. ಮೈಸೂರು ಕ್ಷೇತ್ರದ ಅಧ್ಯಕ್ಷರಾಗಿ ಡಾ.ಹೆಚ್.ಸಿ.ಮಹದೇವಪ್ಪ

5. ಮಂಡ್ಯ ಕ್ಷೇತ್ರದ ಅಧ್ಯಕ್ಷರಾಗಿ ಎನ್.ಚಲುವರಾಯಸ್ವಾಮಿ

6. ತುಮಕೂರು ಕ್ಷೇತ್ರದ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್​​

7. ಚಿತ್ರದುರ್ಗ-ದಾವಣಗೆರೆ ಕ್ಷೇತ್ರದ ಅಧ್ಯಕ್ಷರಾಗಿ ಸಲೀಂ ಅಹ್ಮದ್​

8. ರಾಯಚೂರು ಲೋಕಸಭಾ ಕ್ಷೇತ್ರದ ಅಧ್ಯಕ್ಷರಾಗಿ ಈಶ್ವರ ಖಂಡ್ರೆ

9. ಬಳ್ಳಾರಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ.ಪಾಟೀಲ್​ ನೇಮಕ

10 ಸೋಷಿಯಲ್ ಮೀಡಿಯಾ ಮುಖ್ಯಸ್ಥರಾಗಿ ಪ್ರಿಯಾಂಕ್ ಖರ್ಗೆ

11. ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಬಿ.ಎಲ್.ಶಂಕರ್​ ಅವರನ್ನು ನೇಮಕ ಮಾಡಲಾಗಿದೆ.

ಭಾರತ್‌ ಜೋಡೊ ಯಾತ್ರೆಗೆ ಸೆಪ್ಟಂಬರ್‌ 7ರಂದು ಚಾಲನೆ ದೊರೆತಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಸುಮಾರು 3,570 ಕಿ.ಮೀ. ದೂರವನ್ನು ಸುಮಾರು 5 ತಿಂಗಳು ಕ್ರಮಿಸಲಿದೆ. ಪಾದಯಾತ್ರೆಯು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹಾದು ಹೋಗಲಿದೆ. ಭಾರತ ಜೋಡೊ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿಯಿಂದ ಯಾತ್ರೆ ಆರಂಣಗೊಂಡಿದ್ದು, ತಿರುವನಂತಪುರ, ಕೊಚ್ಚಿ, ನೀಲಂಬೂರ್ ಮೂಲಕ ಕರ್ನಾಟಕಕ್ಕೆ ಅ. 3ಕ್ಕೆ ಆಗಮಿಸಲಿದೆ.

ರಾಜ್ಯದ ಮೈಸೂರು, ಬಳ್ಳಾರಿ, ರಾಯಚೂರು, ಮಂಡ್ಯ, ತುಮಕೂರು, ಬಳ್ಳಾರಿ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಒಟ್ಟು ರಾಜ್ಯದಲ್ಲಿ ಅ. 19ರವರೆಗೆ ಸಂಚರಿಲಿದೆ. ಪ್ರತಿ ಜಿಲ್ಲೆಯಲ್ಲಿ 75ಕಿ. ಮೀ ಯಾತ್ರೆ ಮಾಡಲಾಗುವುದು. ನಂತರ ವಿಕಾರಾಬಾದ್‌, ನಾಂದೇಡ್‌, ಜಲಗಾಂವ್‌, ಇಂಧೋರ್‌, ಕೋಟಾ, ದೌಸಾ, ಅಳ್ವಾರ್‌, ಬುಲಂದಶಹರ್‌, ದೆಹಲಿ, ಅಂಬಾಲಾ, ಪಠಾಣ್‌ಕೋಟ್‌, ಜಮ್ಮು ಬಳಿಕ ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು