ಬೆಂಗಳೂರು: ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದವರು ಪುಟ್ಟಣ್ಣ ಕಣಗಾಲ್!

ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪುಣ್ಣಟ್ಟ ಕಣಗಾಲ್ ಅವರದು ಎಂದೆಂದೂ ಮರೆಯದ ಹೆಸರು ಅವರು ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮಹೇಶ ಜೋಶಿಯವರು ಬಣ್ಣಿಸಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪುಟ್ಟಣ್ಣ ಕಣಗಾಲ್ (ಟ್ರಸ್ಟ್) ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣ ರಾಜ ಪರಿಷತ್ತಿನ ಮಂದಿರದಲ್ಲಿ ಜಂಟಿಯಾಗಿ ಏರ್ಪಡಿಸಿದ್ದ ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನದ ಸಂಭ್ರಮ ‘ಜನುಮ ಜನುಮದ ಅನುಬಂಧ’ ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಮಾಡಿದ ಅವರು ಗೆಜ್ಜಪೂಜೆ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಚಿತ್ರಮಂದಿರಗಳ ಹೊರಗೆ ಕರವಸ್ತ್ರಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಿದ್ದನ್ನು ಸ್ಮರಿಸಿ ಚಿತ್ರವೊಂದು ಜನ ಸಾಮಾನ್ಯರ ಮೇಲೆ ತನ್ನ ನೈಜತೆಯಿಂದ ಎಂತಹ ಪರಿಣಾಮವನ್ನು ಉಂಟು ಮಾಡ ಬಹುದು ಎನ್ನುವುದಕ್ಕೆ ಪುಟ್ಟಣ್ಣನವರ ಚಿತ್ರಗಳೇ ಸಾಕ್ಷಿ ಎಂದರು.

ಪುಟ್ಟಣ್ಣನವರು ಹುಟ್ಟು ಹಾಕಿದ ಕಲಾವಿದರೆಲ್ಲರೂ ಎತ್ತರಕ್ಕೆ ಬೆಳೆದರು ರಜನೀಕಾಂತ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದರು ಎಂದು ಅವರು ಉಲ್ಲೇಖಿಸಿದರು. ಚಿತ್ರ ನಟ ಶ್ರೀನಾಥ್ ಮಾತನಾಡಿ ಪುಟ್ಟಣ್ಣನವರು ನನಗೆ ಮರುಜನ್ಮ ನೀಡಿದ ಗುರು ಅವರು ಒಂದು ರೀತಿಯಲ್ಲಿ ವಿದ್ಯೆಯ ಪರ್ವತ ಅವರು ಕಲಿಸಿದ್ದರಲ್ಲಿ ಶೇ 40ರಷ್ಟನ್ನು ತಮ್ಮಿಂದ ಮಾಡಲು ಆಗಲಿಲ್ಲ. ಸದಾ ಪರಿಪೂರ್ಣತೆಗೆ ಅವರು ತುಡಿಯುತ್ತಿದ್ದರು ಎಂದರು.

ಚಿತ್ರನಟ ರಾಮಕೃಷ್ಣ ಮಾತನಾಡಿ ಪುಟ್ಟಣ್ಣನವರಿಂದ ಬೆಳೆದವರ ಹೆಸರಿನಲ್ಲಿ ಸ್ಮಾರಕಗಳಿವೆ ಆದರೆ ಅವರ ಹೆಸರಿನಲ್ಲಿಯೇ ಸೂಕ್ತ ಸ್ಮಾರಕವಿಲ್ಲಅದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕ ಬೇಕು ಎಂದು ಅಭಿಪ್ರಾಯ ಪಟ್ಟರು.

ಹಿರಿಯ ಛಾಯಾಗ್ರಾಹಕ ಬಸವರಾಜ್, ಪ್ರಗತಿ ಅಶ್ವತ್ಥ ನಾರಾಯಣ, ಕಲಾವಿದರೆಯರಾದ ಪದ್ಮಾವಾಸಂತಿ, ರೇಖಾರಾವ್, ಚಲನಚಿತ್ರ ನಿರ್ದೇಶಕರ ಸಂಘದಅಧ್ಯಕ್ಷ ನಂಜುಡೇ ಗೌಡ, ಕಾರ್ಯ ನಿರತ ಪತ್ರಕರ್ತರ ಸಂಘದಅಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪುಟ್ಟಣ್ಣ ಕಣಗಾಲ್ ಅವರ ಶ್ರೀಮತಿ ನಾಗಲಕ್ಷ್ಮಿ ಕಣಗಾಲ್ , ಪುಟ್ಟಣ್ಣ ಕಣಗಾಲ್ ಅವರ ಮೂವರು ಪುತ್ರಿಯರು ಸೇರಿದಂತೆ ಅವರ ಕುಟುಂಬ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದು ವಿಶೇಷವಾಗಿತ್ತು.

ಖ್ಯಾತ ಗಾಯಕಿ ಶ್ರೀಮತಿ ಸ್ಮಿತಾ ಕಾರ್ತಿಕ್ ಅವರ ತಂಡದವರು ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಿಂದ ಆಯ್ದ ಗೀತೆಗಳನ್ನು ಸುಮಧುರವಾಗಿ ಹಾಡಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ರಂಜಿಸಿದರು.

Sneha Gowda

Recent Posts

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕು: ಪ್ರಹ್ಲಾದ್ ಜೋಶಿ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ವಿಚಾರ, ಸಂಪೂರ್ಣ ಈ ಕೇಸ್ ನಲ್ಲಿ ಅತ್ಯಂತ ಗೊಂದಲವಿದೆ. ನಮ್ಮ ಪಾರ್ಟಿ ಹಾಗೂ…

8 mins ago

ಬಿರುಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್ ಅರಳಿ ಮರ: ನಾಲ್ಕು ಮನೆಗಳು ಜಖಂ

ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಅರಳಿ ಮರವೊಂದು ಬೇರು ಸಮೇತ ನಾಲ್ಕು ಮನೆಗಳ ಮೇಲೆ ಉರುಳಿ ಬಿದ್ದು ಮನೆಗಳು…

21 mins ago

ಕೇಜ್ರಿವಾಲ್‌ಗೆ ಷರತ್ತು ವಿಧಿಸಿ ಜಾಮೀನು ನೀಡಿದ ಸುಪ್ರೀಂಕೋರ್ಟ್‌

ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಮಧ್ಯಂತ ಜಾಮೀನು ನೀಡಿದ್ದು, ಕೆಲವು ಷರತ್ತುಗಳನ್ನು ಸಹ…

45 mins ago

ಅಶ್ಲೀಲ‌ ವಿಡಿಯೋ ಕೇಸ್: ಮೂಡಿಗೆರೆಯಲ್ಲಿ ಪ್ರಜ್ವಲ್ ಬಂಧನ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.

1 hour ago

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯ ಶವ ಪತ್ತೆ

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ ಶವವಾಗಿ ಪತ್ತೆಯಾಗಿದ್ದಾನೆ.

1 hour ago

ದಾಭೋಲ್ಕರ ಹತ್ಯೆ ಕೇಸ್ ನಲ್ಲಿ ಸನಾತನ ಸಂಸ್ಥೆಯ ನಿರಪರಾಧಿತನ ಸಾಬೀತು; ಸನಾತನ ಸಂಸ್ಥೆ ಸಂತಸ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಇಂದು ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ…

1 hour ago