ಬೆಂಗಳೂರು: ಕಲಬುರಗಿಯ ಲಾವಣ್ಯ ಭರತ ನಾಟ್ಯ ರಂಗ ಪ್ರವೇಶ

ಬೆಂಗಳೂರು: ಕಲಾ ಯೋಗಿ, ವಿದ್ವಾನ್‌ ಪುಲಿಕೇಶಿ ಕಸ್ತೂರಿ ಅವರ ಬಳಿ ಭರತ ನಾಟ್ಯ ಕಲಿತ ಕಲಬುರಗಿಯ ಕುಮಾರಿ ಲಾವಣ್ಯ ಜಮಖಂಡಿ ಅವರ ’ಭರತ ನಾಟ್ಯ ರಂಗ ಪ‍್ರವೇಶ‘ ಬೆಂಗಳೂರಿನಲ್ಲಿ ಭಾನುವಾರ ನಡೆಯಲಿದೆ.

ಲಾವಣ್ಯ ಅವರು ಕಲಬುರಗಿಯ ಕರುಣೇಶ್ವರ ನಗರದ ಹಿರಿಯ ತೆರಿಗೆ ಸಲಹೆಗಾರ (ಸಿಎ) ವಿಷ್ಣುತೀರ್ಥ ಜಮಖಂಡಿ ಹಾಗೂ ಕವಿತಾ ದಂಪತಿಯ ಪುತ್ರಿ. 6ನೇ ವಯಸ್ಸಿನಲ್ಲಿ ಶಮಾ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲಿಯಲು ಆರಂಭಿಸಿದ ಲಾವಣ್ಯ ಅವರು, ಕಳೆದ 14 ವರ್ಷಗಳಿಂದ ವಿದ್ವಾನ್‌ ಪುಲಿಕೇಶಿ ಕಸ್ತೂರಿ ಅವರ ಶಾಂತಲಾ ಅಕಾಡೆಮಿಯಲ್ಲಿ ನಾಟ್ಯ ಕಲಿಯುತ್ತಿದ್ದಾರೆ. ಭರತ ನಾಟ್ಯಂನಲ್ಲಿ ವಿದ್ವತ್‌ ಪರೀಕ್ಷೆ ಪೂರೈಸಿರುವ ಲಾವಣ್ಯ, ಗೀತಾ ವಂಟಿಕೊಪ್ಪ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಗೀತ ಪ್ರಾವಿಣ್ಯತೆ ಪಡೆದಿದ್ದಾರೆ.

ಈಗಾಗಲೇ ಚನ್ನೈನಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ಬೆಂಗಳೂರಿನಲ್ಲಿ ನಡೆದ ಓಪನ್ ಸ್ಟ್ರೀಟ್‌ ಫೆಸ್ಟಿವಲ್‌ನಲ್ಲಿ ಭರತ ನಾಟ್ಯ ಪ್ರದರ್ಶನವನ್ನೂ ಮಾಡಿದ್ದಾರೆ. ಎಂಇಎಸ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪದವಿ ಮುಗಿಸಿರುವ ಅವರು, ಕಂಪನಿ ಕಾರ್ಯದರ್ಶಿ (ಸಿಎ) ಪರೀಕ್ಷೆಯನ್ನು ಈಚೆಗೆ ಬರೆದಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಸಂಜೆ 5 ಗಂಟೆಗೆ ಮಲ್ಲೆಶ್ವರದ ಚೌಡಯ್ಯ ಸ್ಮಾರಕ ಭವನದ ಹಿಂದೆ ಇರುವ ಕೃಷ್ಣದೇವರಾಯ ಕಲಾಮಂದಿರದಲ್ಲಿ ರಂಗ ಪ್ರವೇಶ ನಡೆಯಲಿದೆ.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ, ನಾಡೋಜ ಡಾ.ಮಹೇಶ್‌ ಜೋಷಿ, ಕೈಶಿಕಿ ನಾಟ್ಯವಾಹಿನಿ ನಿರ್ದೇಶಕಿ ಮಾಲಾ ಶಶಿಕಾಂತ್‌, ಸಂಸ್ಕೃತ ವಿದ್ವಾಂಸ ಡಾ. ಗುರುರಾಜಚಾರ್ಯ ನಿ‍ಪ್ಪಾಣಿ, ಶಾಂತಲಾ ಆರ್ಟ್ಸ್‌ ಅಧ್ಯಕ್ಷೆ ಪ್ರೊ.ಎಂ.ಆರ್‌. ಕಮಲಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Gayathri SG

Recent Posts

ದೇಶದ ಸಂಪೂರ್ಣ ಸಂಪತ್ತನ್ನು ಶ್ರೀಮಂತರಿಗೆ ಕೊಟ್ಟಿದ್ದಾರೆ ಮೋದಿ: ಪ್ರಿಯಾಂಕಾ ವಾಗ್ದಾಳಿ

ಇಲ್ಲಿನ ಕಾಂಗ್ರೆಸ್​ ಲೋಕಸಭಾ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ 'ಕೈ' ನಾಯಕ ರಾಹುಲ್ ಗಾಂಧಿ ಪರ ಪ್ರಚಾರ ಮಾಡಲು ಆಗಮಿಸಿದ ಅವರ…

21 mins ago

ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ.  ಗುಟ್ಕಾ, ಎಲೆಅಡಿಕೆ, ತಂಬಾಕು ಅಗೆಯುವುದರಿಂದ, ಬೀಡಿ, ಸಿಗರೇಟ್ ಸೇದುವುದರಿಂದ ಹಲ್ಲುಗಳು ನೈಜ ಹೊಳಪು…

37 mins ago

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವು

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ 62 ವರ್ಷದ ರಿಚರ್ಡ್​ ಸ್ಲಾಯ್​​ಮನ್ ನಿಧನರಾಗಿದ್ದಾರೆ. ಕಳೆದ ಮಾರ್ಚ್​​ನಲ್ಲಿ ಅವರು…

60 mins ago

ಎಸ್‌ಐಟಿಯವರು ಅಪರಾಧಿಗಳನ್ನ ಬಂಧಿಸುತ್ತಿಲ್ಲ: ಬಸವರಾಜ ಬೊಮ್ಮಾಯಿ

ಪ್ರಜ್ವಲ್ ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಎಸ್‌ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. ಅಪರಾಧಿಗಳನ್ನ ಎಸ್‌ಐಟಿಯವರು ಬಂಧಿಸುತ್ತಿಲ್ಲ. ಎಂದು…

1 hour ago

ಅಮ್ಮನ ಮೇಲಿನ ಪ್ರೀತಿಗಾಗಿ ಹೆಸರು ಬದಲಿಸಿಕೊಂಡ ವಿಜಯ್ ಸೂರ್ಯ

ತಾಯಿ ಎಂದರೆ ಮಮತೆಯ ಆಗರ, ತಾಯಿ ಎಂದರೆ ಕರುಣೆಯ ಕಡಲು, ತಾಯಿ ಎಂದರೆ ಪ್ರೀತಿಯ ಸೆಲೆ... ಹೀಗೆ ತಾಯಿಯ ಬಗ್ಗೆ…

1 hour ago

ಮಲ್ಲಿಕಾರ್ಜುನ ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

2 hours ago