ಬೆಂಗಳೂರು: ಮಹಾರಾಷ್ಟ್ರದ ಪ್ರಮುಖ ಕಲಾವಿದರಿಂದ ಕಲಾಕೃತಿಗಳ ಪ್ರದರ್ಶನ

ಬೆಂಗಳೂರು: ಮಹಾರಾಷ್ಟ್ರದ 22 ಪ್ರಮುಖ ಸಮಕಾಲೀನ ಕಲಾವಿದರ ಶ್ರೇಷ್ಠ ಕೃತಿಗಳ ಮೊದಲ ಪ್ರದರ್ಶನಡಿಸೆಂಬರ್ 8ರಿಂದ 13, 2022ರವರೆಗೆ ಕರ್ನಾಟಕಚಿತ್ರಕಲಾ ಪರಿಷತ್, ಗ್ಯಾಲರಿ ನಂ.4ರಲ್ಲಿ ಸಂಜೆ 5.30ರ ನಂತರ ನಡೆಯಲಿದೆ. ಈ ಕಲಾ ಪ್ರದರ್ಶನಕ್ಕೆ ಪ್ರವೇಶಉಚಿತವಾಗಿದೆ ಮತ್ತುಎಲ್ಲರಿಗೂ ಮುಕ್ತವಾಗಿದೆ.

ಈ ಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಪ್ರೊ.ಕೆ.ಎಸ್.ಅಪ್ಪಾಜಯ್ಯ ಅವರು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ,  ಶಶಿಧರ್ ರಾವ್ ಮತ್ತು ಖ್ಯಾತ ಕಲಾವಿದ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಹಾಗೂ ನಂತರ ನಾವು ಎದುರಿಸಿದ ಸವಾಲುಗಳ ಕುರಿತು ನಮಗೆ ಚೆನ್ನಾಗಿ ಅರಿವಿದೆ. ಕಲಾ ಸಮುದಾಯಕ್ಕೆ ಅದು ಅತ್ಯಂತ ಕಠಿಣ ಸಂದರ್ಭವಾಗಿತ್ತು. ನಾವು ಆರ್ಟ್ ಪುಣೆ ಫೌಂಡೇಷನ್‌ ಕೆಲ ವರ್ಷಗಳಿಂದ ಕಲಾ ಸಮುದಾಯಕ್ಕೆ ಸುಸ್ಥಿರ ಮತ್ತು ಬೆಂಬಲದ ವಾತಾವರಣ ಸೃಷ್ಟಿಸಲು ಶ್ರಮಿಸುತ್ತಿದ್ದೇವೆ. ವಿವಿಧ ನಗರಗಳು ಮತ್ತು ವಿವಿಧ ವೇದಿಕೆಗಳಲ್ಲಿ ಕಲಾವಿದರನ್ನು ಪ್ರದರ್ಶಿಸುವುದರಿಂದ ನಮ್ಮ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವುದು ನಮ್ಮಉದ್ದೇಶವಾಗಿದೆ ಮತ್ತು ಈ ಪ್ರದರ್ಶನವುಅದೇಉಪಕ್ರಮದ ಭಾಗವಾಗಿದೆ.

ಈ ಕಲಾ ಪ್ರದರ್ಶನವನ್ನು ಸಂಜೀವ್ ಪವಾರ್(ಆರ್ಟ್ ಪುಣೆ ಫೌಂಡೇಷನ್ ಸಹ-ಸಂಸ್ಥಾಪಕ) ಸಂಘಟಿಸಿದ್ದಾರೆ ಮತ್ತು ಆರ್ಟ್2ಡೇಯ ಪ್ರಿಯಂವದಾ ಪವಾರ್ ರೂಪಿಸಿದ್ದಾರೆ.  ಪ್ರಿಯಂವದಾ ಪವಾರ್‌ಅವರ ಪ್ರಕಾರ ಮಹಾರಾಷ್ಟ್ರವು ಭಾವಚಿತ್ರ ಮತ್ತು ಸ್ಕೂಲ್‌ಆಫ್ ಫಿಗರ್‌ಡ್ರಾಯಿಂಗ್ ಮತ್ತುರಿಯಲಿಸಂನಲ್ಲಿ ಬಹಳ ಶಕ್ತಿಯುತವಾದ ಪರಂಪರೆ ಹೊಂದಿದೆ.
ಈ ಕುರಿತು ಪ್ರಿಯಂವದಾ ಪವಾರ್, “ಅದೇಚಿಂತನೆಯ ಹಿನ್ನೆಲೆಯಲ್ಲಿ ಪ್ರಾತಿನಿಧಿಕ ಶೈಲಿ ಮತ್ತು ಸಮಕಾಲೀನ ಶೈಲಿಯಲ್ಲಿ ರಿಯಲಿಸಂನಲ್ಲಿ ಶ್ರಮಿಸುತ್ತಿರುವಕಲಾವಿದರ ಕಲಾಕೃತಿಗಳ ಪ್ರದರ್ಶನವಾಗಿದೆ. ವಿವಿಧಕಲಾವಿದರನ್ನು ವಿಭಿನ್ನ ಪ್ಲಾಟ್‌ಫಾರಂಗಳಲ್ಲಿ ಪ್ರದರ್ಶಿಸುವುದು ಅವರಿಗೆ ವಿಸ್ತಾರ ಪ್ರೇಕ್ಷಕರನ್ನು ಸೆಳೆಯುತ್ತದೆ. ಆದ್ದರಿಂದಲೇ ಅಂತಹ ಕಲಾ ಪ್ರದರ್ಶನಗಳು ಮುಖ್ಯವಾಗಿವೆ. ಪ್ರದರ್ಶಿಸಲಾದ ಕಲಾಕೃತಿಗಳು ಎಲ್ಲ ಮಾಧ್ಯಮಗಳನ್ನು ಹೊಂದಿದ್ದುಅದರಲ್ಲಿಆಕ್ರಿಲಿಕ್, ತೈಲವರ್ಣಚಿತ್ರ ಮತ್ತು ಜಲವರ್ಣ ಚಿತ್ರಗಳಿವೆ ಮತ್ತು ರೂ.30,000ಗಳಿಂದ ರೂ.3 ಲಕ್ಷ ಮೇಲ್ಪಟ್ಟು ಬೆಲೆಯಲ್ಲಿ ಲಭ್ಯವಿವೆ” ಎಂದರು.

ಪುಣೆಯಲ್ಲದೆ ಬೆಂಗಳೂರು ಮತ್ತು ದೆಹಲಿಗಳಲ್ಲಿಯೂ ಕಲಾ ಪ್ರದರ್ಶನಗಳಿರುತ್ತವೆ. ಬೆಂಗಳೂರು ಪ್ರದರ್ಶನ ಮೊದಲಿಗೆ ಪ್ರಾರಂಭವಾಗಲಿದೆ.

ಭಾಗವಹಿಸುವ ಕಲಾವಿದರು ಆದಿತ್ಯ ಶಿರ್ಕೆ, ಅಮೋಲ್ ಪವಾರ್, ಅನ್ವರ್ ಹುಸೇನ್, ಬುವಾ ಶೆಟೆ, ಚಂದ್ರಮೋಹನ್‌ಕುಲಕರ್ಣಿ, ಡಿ.ಎಸ್.ರಾಣೆ, ಜಐಅಭಃಎಠೀ, ಒಹ್ನ್ಡಗ್ಲಾಸ್, ಮೋಹನ್ ನಾಯಕ್, ನಿಲಿಶಾಫಡ್, ಪ್ರಮೋದ್‌ಕುರ್ಲೇಕರ್, ರಾಮಚಂದ್ರಖರತ್‌ಮಲ್, ಸಚಿನ್‌ಸಾಗರೆ, ಸಚಿನ್ ಸಾವಂತ್, ಸಂಜಯ್‌ದೇಸಾಯಿ, ಸತ್ಯಜೀತ್ ವರೇಕರ್, ಸುಜಾತಾಅಚ್ರೇಕರ್, ಸುರಭಿಗುಲ್ವೇಕರ್, ರಾಹಿಲ್ ಮ್ಹಾತ್ರೆ, ಉಮ್‌ಕಾಂತ್‌ತಾವ್ಡೆ ಮತ್ತು ವರ್ಷಖರತ್‌ಮಲ್‌ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ.

Gayathri SG

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

1 hour ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

2 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

2 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

2 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

3 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

3 hours ago