ಸಂಭ್ರಮದ ಸಂಕ್ರಾಂತಿಯ ಕಳೆ ಹೆಚ್ಚಿಸಿದ ‘ಬೆಂಗಳೂರು ಉತ್ಸವ’

ಬೆಂಗಳೂರು, ಜ.6: ಸಂಕ್ರಾಂತಿ ಎಂದರೆ ಸಂಭ್ರಮ, ಸಡಗರ! ಹಬ್ಬಕ್ಕೆ ಹೊಸಬಟ್ಟೆ ಶಾಪಿಂಗ್ ಮಾಡುವುದು, ಪ್ರೀತಿಪಾತ್ರರಿಗೆ ಏನಾದರೂ ಉಡುಗೊರೆ ನೀಡುವುದು ಇದೆಲ್ಲವೂ ಮನಸ್ಸಿಗೆ ಖುಷಿ ನೀಡುವ ಸಂಗತಿಗಳು. ಶಾಪಿಂಗ್ ಗೆ ಎಲ್ಲಿ ಹೋಗುವುದು, ಏನು ಖರೀದಿ ಮಾಡುವುದು ಎಂಬ ಚಿಂತೆ ಮಾಡುವವರಿಗೆ ಇಲ್ಲಿದೆ ಒಂದು ಖುಷಿಯ ವಿಷಯ!

ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ‘ಬೆಂಗಳೂರು ಉತ್ಸವವನ್ನು’ಅದ್ಧೂರಿಯಾಗಿ ಆಯೋಜಿಸಿದೆ. ಇಂದಿನಿಂದ (ಜನವರಿ 6 ರಿಂದ) ಜನವರಿ 15ರವರೆಗೆ 10 ದಿನಗಳ ಕಾಲ ಇಲ್ಲಿ ಕರಕುಶಲವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ. ಕಣ್ಮನ ಸೆಳೆಯುವ ಈ ಮೇಳವನ್ನು ಅಷ್ಟೇ ಸುಂದರವಾಗಿರುವ ನಟಿ ಹಾಗೂ ರೂಪದರ್ಶಿಯರಾದ ಸಲೋಮಿ ಡಿಸೋಜಾ ಹಾಗೂ ದೀನಾ ಪೂಜಾರಿ ಅವರು ಖುಷಿಯಿಂದ ಚಾಲನೆ ನೀಡಿ ಸಂಭ್ರಮಪಟ್ಟರು. .ಇನ್ನು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ ಮುಖ್ಯ ಅತಿಥಿಯಾಗಿ ಸಭೆಯಲ್ಲಿ ಉಪಸ್ಥಿತರಿದ್ದರು.

ಈ ಮೇಳದ ಕುರಿತು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ ನಟಿ ಸಲೋಮಿ ಡಿಸೋಜಾ “ಇಲ್ಲಿ ಅನೇಕ ರೀತಿಯ ಕರಕುಶಲವಸ್ತುಗಳು, ವಿಭಿನ್ನ ವಿನ್ಯಾಸದ ಕಿವಿಯೋಲೆಗಳು, ಬೆಡ್ ಶೀಟ್ ಗಳು ಹೀಗೆ ಎಲ್ಲವೂ ಒಂದಕ್ಕಿಂತ ಒಂದು ಚೆಂದವಿದೆ. ನಾನು ಕೂಡ ಇಲ್ಲಿಂದ ಸಾಕಷ್ಟು ವಸ್ತುಗಳನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದೇನೆ. ಹತ್ತು ದಿನಗಳ ಕಾಲ ನಡೆಯುವ ಈ ಮೇಳಕ್ಕೆ ನೀವೆಲ್ಲರೂ ಬನ್ನಿ” ಎಂದು ಮನವಿ ಮಾಡಿದರು.

ಇನ್ನೋರ್ವ ನಟಿ ದೀನಾ ಪೂಜಾರಿ ಇಲ್ಲಿನ ವಸ್ತುಗಳನ್ನೆಲ್ಲಾ ಬೆರಗು ಕಣ್ಣಿನಿಂದ ನೋಡುತ್ತಾ ತಮ್ಮ ಸಂತಸ ಹಂಚಿಕೊಂಡಿದ್ದು ಹೀಗೆ “ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ ಈ ‘ಬೆಂಗಳೂರು ಉತ್ಸವ’ದಲ್ಲಿ ಭಾಗಿಯಾಗಿರುವುದು ನನಗೆ ತುಂಬಾ ಖುಷಿ ನೀಡಿದೆ. ಇಲ್ಲಿರುವ ವಸ್ತುಗಳನ್ನು ನೋಡಿದರೆ ಯಾವುದನ್ನು ಕೊಂಡುಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲವಾಗುತ್ತಿದೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಈ ವಸ್ತುಗಳು ತಯಾರಕರಿಂದ ನೇರವಾಗಿ ಗ್ರಾಹಕರಿಗೆ ತಲುಪುತ್ತದೆ. ಹ್ಯಾಂಡ್ ಮೇಡ್ ಆಭರಣಗಳು, ಸೀರೆಗಳು, ಎಲ್ಲವೂ ಚೆಂದವಿದೆ.ಇಲ್ಲಿಗೆ ಭೇಟಿ ನೀಡಿದರೆ ನಿಮ್ಮಿಷ್ಟದ ವಸ್ತುಗಳನ್ನು ಕೊಂಡುಕೊಳ್ಳಬಹುದು” ಎಂದು ತಮ್ಮ ಖುಷಿ ವ್ಯಕ್ತಪಡಿಸಿದರು.

ಇನ್ಯಾಕೆ ತಡ! ಹಬ್ಬದ ಸಿಹಿ ತಯಾರಿಯ ಜೊತೆಗೆ ಶಾಪಿಂಗ್ ಪಟ್ಟಿ ಮಾಡಿಕೊಂಡವರು ಚಿತ್ರಕಲಾ ಪರಿಷತ್ ನಲ್ಲಿ ನಡೆಯಲಿರುವ ಬೆಂಗಳೂರು ಉತ್ಸವಕ್ಕೆ ಭೇಟಿ ನೀಡಿದರೆ ವೈವಿಧ್ಯಮಯ ಉಡುಪು, ಆಭರಣ,ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಬಹುದು. ಇಲ್ಲಿ 100ಕ್ಕೂ ಹೆಚ್ಚು ಮಳಿಗೆಗೆಳು ಇರುವುದರಿಂದ ನಿಮಗೆ ಬೇಕೆನಿಸಿದ ವಸ್ತುಗಳು ಒಂದೇ ಸೂರಿನಡಿ ಸಿಗುವುದು. ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಎಲ್ಲವೂ ಇಲ್ಲಿ ಲಭ್ಯವಿರುವುದರಿಂದ ನಿಮ್ಮ ಮನಸ್ಸಿಗೆ ಈ ಮೇಳ ಮುದ ನೀಡುವುದು!

Gayathri SG

Recent Posts

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆದ್ದು ಬೀಗಿದ ಆರ್​​​ಸಿಬಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್​ ಪಂದ್ಯದಲ್ಲಿ ವಿರಾಟ್…

14 mins ago

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

8 hours ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

8 hours ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

8 hours ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

8 hours ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

8 hours ago