ಬೆಂಗಳೂರು: ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿವಿಯಿಂದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ

ಬೆಂಗಳೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಿಂದ 2022-23ನೆ ಸಾಲಿನ ಬಿ.ಪಿ.ಎ, ಎಂ.ಪಿ.ಎ, ಸರ್ಟಿಫಿಕೇಟ್ ಕೋರ್ಸ್, ಡಿಪ್ಲೋಮಾ, ಪಿ.ಜಿ.ಡಿಪ್ಲೋಮಾ ಹಾಗೂ ಡಿ.ಲಿಟ್ ಕೋರ್ಸ್‍ಗಳಿಗೆ ಪ್ರವೇಶಾತಿಗಳು ಪ್ರಾರಂಭವಾಗಿದೆ.

ಬಿ.ಪಿ.ಎ ಹಾನರ್ಸ್ ನಾಲ್ಕು ವರ್ಷಗಳ ಕೋರ್ಸ್‍ನ್ನು ಹೊಸ ಶಿಕ್ಷಣ ನೀತಿ ಮಾದರಿಯದಾಗಿದ್ದು, ನಾಟಕ, ಭರತನಾಟ್ಯ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಕನಾಟಕ ಶಾಸ್ತ್ರೀಯ ಸಂಗೀತ, ತಬಲಾ, ಮೃದಂಗ, ವೀಣಾ, ಪಿಟೀಲು, ಭಾಷಾ ಪತ್ರಿಕೆಗೆ ಪ್ರವೇಶ ಪಡೆಯಲು ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಎಂ.ಪಿ.ಎ ಕೋರ್ಸ್ – ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ನಾಟಕ, ತಬಲ, ಮೃದಂಗ, ವೀಣೆ ಪ್ರವೇಶ ಪಡೆಯಲು ಯಾವುದೇ ವಿಷಯದಲ್ಲಿ ಪದವಿ ಹೊಂದಿಒರಬೇಕುಮತ್ತು ತತ್ಸಮಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಮತ್ತು ವಿಶ್ವವಿದ್ಯಾಲಯದ ಮೌಖಿಕ ಪರೀಕ್ಷೆಯಲ್ಲಿ ಅರ್ಹತೆ ಹೊಂದಿರಬೇಕು. ಡಿ.ಲಿಟ್ ಪ್ರವೇಶಕ್ಕೆ ಸಂಗೀತ, ನೃತ್ಯ, ನಾಟಕ ಹಾಗೂ ಪ್ರದರ್ಶನ ಕಲೆಗಳಲ್ಲಿ ಅಧ್ಯಯನ ನಡೆಸಿ ಉನ್ನತ ಮಟ್ಟದ ಪರಿಣಿತಿ ಹೊಂದಿರಬೇಕು.

ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್- ಭಕ್ತಿ ಸಂಗೀತ, ಸುಗಮ ಸಂಗೀತ, ಜನಪದ ಸಂಗೀತ, ರಂಗ ಸಂಗೀತ, ಭರತನಾಟ್ಯ, ನಾಟಕ, ಹಾರ್ಮೊನಿಯಂ, ತಬಲ, ಯೋಗ, ಹಿಂದೂಸ್ತಾನಿ ಸಂಗೀತ, ಕನಾಟಕ ಸಂಗೀತ, ಯಕ್ಷಗಾನ, ಗಮಕ, ಸಿತಾರ, ಒಡಿಸ್ಸಿ ಕೋರ್ಸ್‍ಗಳನ್ನು ಪ್ರತಿ ದಿನ ಸಂಜೆ 5.30 ಗಂಟೆಯಿಂದ 8.30 ಗಂಟೆಯವರೆಗೆ ಆರಂಭಿಸಲಾಗುವುದು. ಒಂದು ವರ್ಷದ ಡಿಪ್ಲೋಮಾ ಕೋರ್ಸ್ – ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ನಾಟಕ, ತಬಲ, ಮೃದಂಗ, ವೀಣೆ ಮತ್ತು ಯೋಗ ಪ್ರವೇಶಕ್ಕೆ ಪಿ.ಯು.ಸಿಯಲ್ಲಿ ತೇರ್ಗಡೆಹೊಂದಿರಬೇಕು.

ಒಂದು ವರ್ಷದ ಪಿ.ಜಿ. ಡಿಪ್ಲೋಮಾ ಕೋರ್ಸ್ – ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ನಾಟಕ, ತಬಲ, ಮೃದಂಗ, ವೀಣೆ ಮತ್ತು ಯೋಗ ಪ್ರವೇಶಕ್ಕೆ ಯಾವುದೇ ಪದವಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಈ ಎಲ್ಲಾ ಕೋರ್ಸ್‍ಗಳ ಪ್ರವೇಶಕ್ಕೆ ರೂ. 200/- ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿರುತ್ತದೆ.

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಲ್ಲಿ ಬರುವ ಎಲ್ಲಾ ಸ್ನಾತಕೋತ್ತರ, ಡಿಪ್ಲೋಮಾ, ಸರ್ಟಿಫಿಕೇಟ್, ಡಿ.ಲಿಟ್ ಕಾರ್ಯಕ್ರಮಗಳ ಪ್ರವೇಶಾತಿಯನ್ನು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ಮನಿರ್ವಾಹಕ ವ್ಯವಸ್ಥೆ ಪೊರ್ಟಲ್ ಮೂಲಕ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಳನ್ನುhttps://www.musicuniversity.ac.in ನಿಂದ ಪಡೆದುಕೊಳ್ಳಬಹುದು. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಇ-ಮೇಲ್ ವಿಳಾಸ musicuniversity.ac.in ಅಥವಾ registrar@ musicuniversity.ac.in ಮೂಲಕ ಅಥವಾ ದೂರವಾಣಿ ಸಂ. 0821-2402141, ಮೊಬೈಲ್ ದೂರವಾಣಿ ಸಂಖ್ಯೆ 9880761877ನ್ನು ಸಂಪರ್ಕಿಸ ಬಹುದಾಗಿದೆ.

Sneha Gowda

Recent Posts

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಸೈಬರ್ ವಂಚನೆ: ಓರ್ವ ವಶಕ್ಕೆ

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಕೂತು ಸೈಬರ್ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ…

10 mins ago

ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಮೋದಿಗೆ ಚಾಲೆಂಜ್‌ ಹಾಕಿದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…

21 mins ago

ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ

ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ,…

41 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

1 hour ago

ಆರ್​ಸಿಬಿ ಮುಂದಿನ ಪಂದ್ಯವನ್ನು ಯಾವ ತಂಡದ ಜೊತೆ ಆಡಲಿದೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಸೋಲಿಸಿ ರಾಯಲ್ಲಾಗಿಯೇ ಪ್ಲೇಆಫ್​ಗೆ ಪ್ರವೇಶಿಸಿದೆ. ಇನ್ನು ಆರ್​ಸಿಬಿ…

1 hour ago

ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.

2 hours ago