ಬೆಂಗಳೂರು : ಕರ್ನಾಟಕದ ಶೇ.90ರಷ್ಟು ಜನರು ಈಗ ಕೋವಿಡ್-19 ವಿರುದ್ಧದ ಎರಡೂ ಲಸಿಕೆ ಡೋಸ್ ಗಳೊಂದಿಗೆ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ ಎಂದು ಕರ್ನಾಟಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಂಗಳವಾರ ಹೇಳಿದ್ದಾರೆ.
‘ಕರ್ನಾಟಕದ 90% ಜನರು ಈಗ ಎರಡೂ ಡೋಸ್ ಗಳೊಂದಿಗೆ ಸಂಪೂರ್ಣವಾಗಿ ಲಸಿಕೆ ಯನ್ನು ಪಡೆದಿದ್ದಾರೆ! ಬೆಂಗಳೂರು ಗ್ರಾಮಾಂತರ ಮತ್ತು ವಿಜಯಪುರ ಎಂಬ ಎರಡು ಜಿಲ್ಲೆಗಳು ಶೇ.100ರಷ್ಟು ಎರಡನೇ ಡೋಸ್ ವ್ಯಾಪ್ತಿಯನ್ನು ಸಾಧಿಸಿವೆ. ಇದರಲ್ಲಿ ಭಾಗಿಯಾಗಿರುವ ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆಗಳು,’ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.