News Karnataka Kannada
Monday, April 22 2024
Cricket
ಬೆಂಗಳೂರು ನಗರ

8,9,10ನೇ ತರಗತಿ ಮಕ್ಕಳಿಗೆ ಡಿಸೆಂಬರ್ ತನಕ ಚಂದನದಲ್ಲಿ ಪಾಠ

Photo Credit :

8,9,10ನೇ ತರಗತಿ ಮಕ್ಕಳಿಗೆ ಡಿಸೆಂಬರ್ ತನಕ ಚಂದನದಲ್ಲಿ ಪಾಠ

ಬೆಂಗಳೂರು: ಕೊರೋನಾಗೆ ಲಸಿಕೆ ಸಿಗುವ ತನಕ ಯಾವುದೇ ಪರಿಹಾರವು ಇಲ್ಲವೆನ್ನುವಂತಹ ಮಟ್ಟದಲ್ಲಿ ಇಂದಿನ ದಿನಗಳಲ್ಲಿ ಕೊರೋನಾವು ಹಬ್ಬುತ್ತಲಿದೆ. ಇದರಿಂದ ಶಿಕ್ಷಣ ಕ್ಷೇತ್ರದ ಮೇಲೆ ಭಾರೀ ಹೊಡೆತ ಬಿದ್ದಿದೆ. ಇದನ್ನು ಮನಗಂಡು ಸರ್ಕಾರವು ಹೊಸ ಯೋಜನೆ ರೂಪಿಸಿದೆ.

ಜುಲೈನಿಂದ ಡಿಸೆಂಬರ್ ತನಕ 8,9,10ನೇ ತರಗತಿ ವಿದ್ಯಾರ್ಥಿಗಳಿಗೆ ನಿಗದಿತ ಸಮಯದಲ್ಲಿ ಚಂದನ ವಾಹಿನಿಯಲ್ಲಿ ಪಾಠ ಮಾಡುವುದಕ್ಕೆ ರಾಜ್ಯ ಸರ್ಕಾರವು ಅನುಮೋದನೆ ನೀಡಿದೆ.

ಯೋಜನೆಗೆ ಸುಮಾರು1.60 ಕೋಟಿ ರೂಪಾಯಿ ವೆಚ್ಚವಾಗುತ್ತಲಿದೆ. ಕಾರ್ಯಕ್ರಮದ ಲಾಭ ಹೆಚ್ಚಿನ ಮಕ್ಕಳಿಗೆ ಸಿಲು ಮತ್ತು ಯೂ ಟ್ಯೂಬ್ ನಲ್ಲಿ ಕೂಡ ಇದರ ವೀಡಿಯೊ ಮಾಡಿ ಹಾಕಲಾಗುತ್ತಿದೆ.

ಟಿವಿ ಇಲ್ಲದೆ ಇರುವ ಮಕ್ಕಳಿಗೆ ಟಿವಿ ಇರುವಂತಹ ಮಕ್ಕಳೊಂದಿಗೆ ಸಂಯೋಜಿಸಲು ಮತ್ತು 20 ಮಕ್ಕಳ ಜವಾಬ್ದಾರಿಯನ್ನು ಒಬ್ಬರು ಶಿಕ್ಷಕರಿಗೆ ನೀಡಲಾಗಿದೆ. ತಿಂಗಳಿಗೊಂದು ಕಿರು ಪರೀಕ್ಷೆ ಕೂಡ ನಡೆಸಲು ಆದೇಶದಲ್ಲಿ ಹೇಳಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು