News Karnataka Kannada
Saturday, April 27 2024
ಬೆಂಗಳೂರು ನಗರ

3 ನೇ ಅಲೆಯಲ್ಲಿ ಕೊವಿಡ್ ಪ್ರಕರಣ ಎರಡೇ ದಿನಕ್ಕೆ ಡಬಲ್ ಆಗುತ್ತಿದೆ; ಡಾ.ಸುಧಾಕರ್

ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವುದರ ಮೂಲಕ ನನ್ನ ವೇದನೆ ಕಡಿಮೆ ಮಾಡಿ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಡಾ. ಕೆ ಸುಧಾಕರ್ ಮನವಿ ಮಾಡಿದ್ದಾರೆ.
Photo Credit :

ಬೆಂಗಳೂರು : ಕೋವಿಡ್ ಮೊದಲನೆ ಅಲೆಯಲ್ಲಿ ಡಬ್ಲಿಂಗ್ ರೇಟ್ 10-12 ದಿನಕ್ಕೆ ಆಗುತ್ತಿತ್ತು, ಎರಡನೇ ಅಲೆಯಲ್ಲಿ 8 ದಿನಕ್ಕೆ ಆದರೆ 3 ನೇ ಅಲೆಯಲ್ಲಿ ಎರಡು ದಿನದಲ್ಲಿ ಡಬಲ್ ಆಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಗುರುವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮಿಕ್ರಾನ್ ಬಂದ ಮೇಲೆ, 3 ನೇ ಅಲೆ ಬಂದ ಮೇಲೆ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳು ಹಾಗು ರಾಜ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು.

ಡಿಸೆಂಬರ್ 3 ನೇ ವಾರದವರೆಗೂ ಕೊವಿಡ್ ಪ್ರಕರಣ.ಕಡಿಮೆ.ಇದ್ದವು. ಪಾಸಿಟಿವಿಟಿ ಜನವರಿ 11 ಕ್ಕೆ 10.03 % ಬಂದಿದೆ. 28 ಡಿಸೆಂಬರ್ 269 ಪ್ರಕರಣಗಳು ಬೆಂಗಳೂರಿನಲ್ಲಿದ್ದವು ಉಳಿದ ಭಾಗದಲ್ಲಿ 87 ಪ್ರಕರಣ ಇದ್ದವು. ಜನವರಿ 5. ಕ್ಕೆ ಬೆಂಗಳೂರಿನಲ್ಲಿ 3006 ಕರ್ನಾಟಕದಲ್ಲಿ 501 ಪ್ರಕರಣ ಆಗಿದೆ. ಜನವರಿ 11 ಕ್ಕೆ ಬೆಂಗಳೂರಿನಲ್ಲಿ 10800 ಆದರೆ ರಾಜ್ಯದ ಇತರ ಭಾಗದಲ್ಲಿ 3673 ಪ್ರಕರಣಗಳು ಪತ್ತೆಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 32.6% ರಷ್ಟು ವೇಗವಾಗಿದೆ. ರಾಜ್ಯದಲ್ಲಿ 36.44 % ರಷ್ಟಾಗಿದೆ ಎಂದರು.

ಡಿಸೆಂಬರ್ 28 ರಿಂದ ಜನವರಿ 11 ರ ವರೆಗೆ ವೇಗವಾಗಿ ಹೆಚ್ಚಳವಾಗಿದೆ. ಸಕ್ರೀಯ ಪ್ರಕರಣಗಳು ಶೇ 75% ರಷ್ಟು ಬೆಂಗಳೂರಿನಲ್ಲಿದೆ. ಬಹಳ ವೇಗವಾಗಿ ಹರಡುವ ರೋಗ ಎಂದು ಡಬ್ಲೂ ಎಚ್ ಒ ಹೇಳಿದೆ. ಇದು ನೆಗಡಿ,ಕೆಮ್ಮು,ಜ್ವರ ಲಕ್ಷಣಗಳು ಆದರೆ ಇದು ಲಸಿಕೆ ಪಡೆಯದವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ ಎಂದರು.

45 ಲಕ್ಷ ಜನರು ಇನ್ನು ಎರಡನೇ.ಡೋಸ್ ತೆಗೆದುಕೊಳ್ಳುವ ಅವಧಿ ಮುಗಿದಿದೆ. ಹೀಗಾಗಿ ಆದಷ್ಟು ಬೇಗ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ 32. ಲಕ್ಷ 15-18 ವರ್ಷದ ಮಕ್ಕಳಲ್ಲಿ ಶೇ 53 ರಷ್ಟು ಮಕ್ಕಳಿಗೆ ನೀಡಲಾಗಿದೆ. ಒಂದು ತಿಂಗಳಲ್ಲಿ ಎರಡನೇ ಡೋಸ್ ಕೊಡಲಾಗುವುದು. 15 ವರ್ಷದ ಒಳಗಿನ ಮಕ್ಕಳಿಗೂ ಸೋಂಕಿನ ಲಕ್ಷಣ ಬರುತ್ತದೆ. ಅವರೂ ಎಚ್ಚರಿಕೆಯಿಂದ ಇರಬೇಕು ಎಂದರು.

2 ನೇ ಡೋಸ್ ಪಡೆದ ಕೊರೊನಾ ವಾರಿಯರ್ಸ್ ಗಳಿಗೆ 3 ನೇ ಡೋಸ್ ಕೊಡಲು ಆರಂಭಿಸಲಾಗಿದೆ. ಸುಮಾರು 65 ಲಕ್ಷ ಡೋಸ್ ಲಸಿಕೆ ಇದೆ. ಹೀಗಾಗಿ ಕೊರೊನಾ ವಾರಿಯರ್ಸ್ ಗಳು ಆದ್ಯತೆ ಮೇಲೆ.ತೆಗೆದುಕೊಳ್ಳಬೇಕು. ರಾಜ್ಯಕ್ಕೆ ಲಸಿಕೆ ಸಮಸ್ಯೆ ಇಲ್ಲ, ವಿಶ್ವದ 37 ದೇಶಗಳಲ್ಲಿ ಇನ್ನೂ ಶೆ 10 ರಷ್ಟು ಲಸಿಕೆ ನೀಡಿಲ್ಲ ಎಂದರು.

ಡಿಸೆಂಬರ್ 1 ರ ಮೊದಲೆ ವಾರ 23% ಜನರು ಆಸ್ಪತ್ರೆಯಲ್ಲಿದ್ದರು,73% ಮನೆಯಲ್ಲಿದ್ದರು. ಜನವರಿ 11 ದಿನದಲ್ಲಿ 6% ಆಸ್ಪತ್ರೆ ಸೇರಿದ್ದಾರೆ. ಹೋಮ್ ಐಸೋಲೇಷನ್ ಜನರು 93% ಇದ್ದಾರೆ.ಪ್ರತಿ ದಿನ 2 ಲಕ್ಷ ಜನರ ತಪಾಸಣೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ 1ಲಕ್ಷ ತಪಾಸಣೆ ಮಾಡಲಾಗುತ್ತಿದೆ ಎಂದರು.

ಐದು ಟಿ ಸೂತ್ರ
ಟೆಸ್ಟಿಂಗ್
265 ಟೆಸ್ಟಿಂಗ್ ಲ್ಯಾಬ್ ಕರ್ನಾಟಕದಲ್ಲಿವೆ. ನಿತ್ಯ 2.5. ಲಕ್ಷ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದ್ದು, ಒಟ್ಟು 5 ಜಿನೋಮಿಕ್ ಸಿಕ್ವೆನ್ಸ್ ಲ್ಯಾಬ್ ತೆರೆಯಲಾಗಿದ್ದು , 2. ಬೆಂಗಳೂರು,1.ಮೈಸೂರು,ಮಂಗಳೂರುಮತ್ತು ಬೆಳಗಾವಿಯಲ್ಲಿ 1. ಹುಬ್ಬಳ್ಳಿ, ಬಳ್ಳಾರಿಯಲ್ಲೂ ತೆರೆಯಲು ತೀರ್ಮಾನ ಮಾಡಲಾಗಿದೆ.

ಯಾವುದೇ ರಾಜ್ಯ ಹಾಗೂ ಹೊರದೇಶದಿಂದ ಬರುವವರು 72 ಗಂಟೆ ಮುಂಚೆ ಟೆಸ್ಟ್ ರಿಪೋರ್ಟ್ ತರುವುದು ಕಡ್ಡಾಯ ಮಾಡಲಾಗಿದೆ. 14410 ಕೊವಿಡ್ ಹೋಮ್ ಐಸೋಲೇಷನ್ ನಲ್ಲಿ ಇರುವವರಿಗೆ ಮಾಹಿತಿ ನೀಡಲು ಟೋಲ್ ನಂಬರ್ ನೀಡಲಾಗಿದೆ.1533 ಸಂಖ್ಯೆ ಬೆಂಗಳೂರಿಗೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ 8 ಝೊನ್ ವಾರ್ ರೂಮ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಂಟೇನ್ಮೆಮೆಂಟ್ ಝೊನ್.ಮಾಡಲಾಗುವುದು. 5 ಪ್ರಕರಣಗಳಿದ್ದರೆ, ಮೈಕ್ರೊ.ಕಂಟೆನ್ ಮೆಂಟ್, 15 ಪ್ರಕರಣ.ಇದ್ದರೆ ಕಂಟೈನ್ ಮೆಂಟ್ ಝೋನ್ ಮಾಡಲಾಗುವುದು ಎಂದರು.

84 ಸಾವಿರ ಮೆಡಿಕಲ್ ಸ್ಟಾಫ್ ಇದ್ದಾರೆ, 4 ಸಾವಿರ ವೈದ್ಯರ ನೇಮಕ.ಮಾಡಿಕೊಂಡಿದ್ದೇವೆ. 3 ನೇ ಅಲೆಗೆ 6386 ಬೆಡ್ 147 ತಾಲುಕು ಆಸ್ಪತ್ರೆಗಳಲ್ಲಿ 2928 ಐಸಿಯು ಬೆಡ್ 127 ತಾಲೂಕು ಆಸ್ಪತ್ರೆಗಳು. 665 ಜಿಲ್ಲಾಸ್ಪತ್ರೆಗಳಲ್ಲಿ ಆಕ್ಸಿನೆಟೆಡ್ ಬೆಡ್ 223 ಐಸಿಯು ಬೆಡ್ ಸಿದ್ಧತೆ ಮಾಡಲಾಗಿದೆ. 266 ಪಿಎಚ್ ಎ ಪ್ಲಾಂಟ್ಸ್ ಅಲಾಟ್ ಆಗಿದ್ದು, 235 ಪ್ರಾರಂಭಿಸಲಾಗಿದೆ. 3460 ವೆಂಟಿಲೇಟರ್ ಇವೆ. 8003 ಅಕ್ಷಿಜನ್ ಕಾನ್ಸಂಟ್ರೇಟರ್ ಇವೆ. ಕೇಂದ್ರ ಸರ್ಕಾರ 831 ಕೋಟಿ ರೂ ನೀಡಿದೆ.ಮಕ್ಕಳಿಗೆ ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ಕೇಂದ್ರದಲ್ಲಿ ಶೇ 70 ರಷ್ಟು ಮಕ್ಕಳ ಕೊವಿಡ್ ಪ್ರಕರಣಕ್ಕೆ ಮೀಸಲಿಡಲಾಗಿದೆ ಎಂದರು.

4.89 ಕೋಟಿ ಮೊದಲ ಡೋಸ್, 2ನೇ ಡೋಸ್ 3.98 ಕೋಟಿ, 3 ನೇ ಡೋಸ್ 1,81,981 ಜನರು ಪಡೆದುಕೊಂಡಿದ್ದಾರೆ.3 ನೇ ಅಲೆಯಲ್ಲಿ ಆಕ್ಷಿಜನ್ ಕೊರತೆಯ ಲಕ್ಷಣ ಇಲ್ಲ. ಸಾವಿನ ಪ್ರಕರಣ 0.003. ಇದೆ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು