12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ

ಬೆಂಗಳೂರು: ಒಂದೆಡೆ ಕೊರೋನಾ ಹರಡುವಿಕೆ ಹಾಗೂ ಅದರ ಕುರಿತಾದ ಚಿಂತನೆಗಳು ನಡೆಯುತ್ತಿದ್ದರೆ ಇನ್ನೊಂದೆಡೆ ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ಮುಂದುವರೆದಿದೆ. 

 

ಎರಡು ದಿನಗಳ ಹಿಂದೆಯಷ್ಟೇ ಮೈಸೂರಿನ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿತ್ತು. ಇದೀಗ ಮತ್ತೆ 12 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡುತ್ತಿದೆ. 

 

12 ಮಂದಿಯಲ್ಲಿ ಬೆಂಗಳೂರು ಗ್ರಾಮಾಂತರ ಎಸ್‌ಪಿ ರವಿ ಡಿ. ಚೆನ್ನಣ್ಣವರ್, ಉಡುಪಿಯ ಎಸ್‌ಪಿಯಾಗಿದ್ದ R.ಚೇತನ್, ಕಾರ್ತಿಕ್ ರೆಡ್ಡಿ, ರಾಹುಲ್ ಕುಮಾರ್ ಮುಂತಾದವರು ಸೇರಿದ್ದಾರೆ. 

 

ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳ ಪಟ್ಟಿ

1. ಬೆಂಗಳೂರು ಗ್ರಾಮಾಂತರ ಎಎಸ್‌ಪಿಯಾಗಿದ್ದ ರವಿ ಡಿ. ಚೆನ್ನಣ್ಣನವರ್ ಅವರನ್ನ ಸಿಐಡಿ ಎಸ್‌ಪಿಗೆ ವರ್ಗಾವಣೆ ಮಾಡಲಾಗಿದೆ.

2. ಉಡುಪಿ ಎಸ್‌ಪಿಯಾಗಿದ್ದ R.ಚೇತನ್ ಅವರನ್ನ ಮೈಸೂರು ಪೊಲೀಸ್‌ ವರಿಷ್ಠಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

3.ಕಾರ್ತಿಕ್ ರೆಡ್ಡಿ ಕೋಲಾರದಿಂದ ವೈರ್ ಲೆಸ್ ಎಸ್‌ಪಿ ಬೆಂಗಳೂರು.

4. ರಾಹುಲ್ ಕುಮಾರ್ ಸಿಐಡಿಯಿಂದ ತುಮಕೂರು ಎಸ್‌ಪಿಯಾಗಿ ವರ್ಗಾವಣೆ

5. ಹನುಮಂತರಾಯ ದಾವಣಗೆರೆಯಿಂದ ಹಾವೇರಿಗೆ ವರ್ಗ

6. ಎ ಎನ್ ಪ್ರಕಾಶ್ ಗೌಡ, ಎಸ್ ಪಿ ಅಂತರಿಕ ಭದ್ರತಾ ವಿಭಾಗ ಬೆಂಗಳೂರು.

7. ಕೆ ಜಿ ದೇವರಾಜು, ಎಸ್ ಪಿ ಸಿಐಡಿ

8. ಸಿ ಬಿ ರಿಷ್ಯಂತ್, ಎಸ್ ಪಿ ದಾವಣಗೆರೆ.

9. ಡೆಕ್ಕ ಕಿಶೋರ್ ಬಾಬು, ಎಸ್ ಪಿ ಕೋಲಾರ.

10. ಕೊನಾ ವಂಶಿಕೃಷ್ಣ, ಎಸ್ ಪಿ ಬೆಂಗಳೂರು ಗ್ರಾಮಾಂತರ.

11. ಪ್ರದೀಪ್ ಗುಂಟಿ, ಡಿಸಿಪಿ ಮೈಸೂರು ಕಾನೂನು ಸುವ್ಯವಸ್ಥೆ.

12. ಅಡ್ಡೂರು ಶ್ರೀನಿವಾಸುಲು, ಡಿಸಿಪಿ ಕಲಬುರಗಿ, ಕಾನೂನು ಸುವ್ಯವಸ್ಥೆ.

 

Desk

Recent Posts

ಕೇರಳದ ಐವರಲ್ಲಿ ʻವೆಸ್ಟ್‌ ಲೈನ್‌ ಜ್ವರʼ ಪತ್ತೆ

ಕೇರಳದ ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ವೆಸ್ಟ್‌ ನೈಲ್‌ ಫೀವರ್‌ನ ಐದು ಪ್ರಕರಣಗಳು ಪತ್ತೆಯಾಗಿವೆ. ಅವರ ಆರೋಗ್ಯ ಸ್ಥಿತಿ ಸಹಜವಾಗಿದ್ದು, ಮನೆಗಳಲ್ಲೇ ಚಿಕಿತ್ಸೆ…

4 mins ago

ಅಮೆರಿಕದಿಂದ ಬಂದು ಮೊದಲ ಮತ ಚಲಾಯಿಸಿ ಸಂಭ್ರಮಿಸಿದ ವಿದ್ಯಾರ್ಥಿನಿ

ವಿದ್ಯಾರ್ಥಿನಿಯೊಬ್ಬರು ಅಮೆರಿಕದಿಂದ ಹುಬ್ಬಳ್ಳಿಗೆ ಬಂದು ಲೋಕಸಭಾ ಚುನಾವಣೆಗೆ ತನ್ನ ಹಕ್ಕು ಚಲಾಯಿಸಿದ್ದಾರೆ.

10 mins ago

ಮತದಾನದ ಫೋಟೊ ಹಂಚಿಕೊಂಡ ವಿನೋದ ಅಸೋಟಿ ಅಭಿಮಾನಿ

ಇಲ್ಲಿನ ತನ್ವೀರ್ ಟಿ.ಎಂ ಎಂಬ ಯುವಕ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೋಟಿ ಅವರಿಗೆ ಮತ ಹಾಕಿದ್ದನ್ನು…

22 mins ago

ರೇವಣ್ಣ ಕಿಡ್ನಾಪ್ ಮಾಡಿದ ಮಹಿಳೆ ತೋಟದ ಮನೆಯಲ್ಲಿ ಸಿಕ್ಕಿಲ್ಲ: ಸಾರಾ ಮಹೇಶ್

ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡ್ನಾಪ್ ಮಾಡಿದ್ದಾರೆ ಎನ್ನಲಾದ ಮಹಿಳೆ ತೋಟದ ಮನೆಯಲ್ಲಿ ಸಿಕ್ಕಿಲ್ಲ, ಎಂದು ಶಾಸಕ ಸಾರಾ ಮಹೇಶ್…

27 mins ago

ಅಕ್ಕನ ಮನೆಗೆ ಕನ್ನ ಹಾಕಿದ ತಂಗಿ: 182 ಗ್ರಾಂ ಚಿನ್ನಾಭರಣ, 52 ಲಕ್ಷ ನಗದು ಕಳ್ಳತನ

ಸಾಲ ಮಾಡಿಕೊಂಡಿದ್ದ ತಂಗಿ ಹಣಕ್ಕಾಗಿ ಸ್ವಂತ ಅಕ್ಕನ ಮನೆಯಿಂದಲೇ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ…

43 mins ago

ಪ್ರಜ್ವಲ್ ವಿಡಿಯೋ ಕೇಸ್: “ಎಸ್​ಐಟಿ ಎಂದರೆ ಸಿದ್ದು, ಶಿವಕುಮಾರ್ ಟೀಂ”

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬೇಕಿಲ್ಲ. ಅವರಿಗೆ ಕೇವಲ ಪ್ರಚಾರ,…

44 mins ago