ಹೊಸ ವರ್ಷವನ್ನ ಭರ್ಜರಿಯಾಗಿ ಆಚರಿಸಲು ಹೊರ ರಾಜ್ಯಗಳತ್ತ ಪ್ರಯಾಣ

ಹೊಸ ವರ್ಷವನ್ನ ಭರ್ಜರಿಯಾಗಿ ಆಚರಿಸಲು ಪ್ಲ್ಯಾನ್ ಹಾಕಿಕೊಂಡಿದ್ದ ಮಂದಿ ಸರ್ಕಾರದ ಕಠಿಣ ನಿಯಮಗಳಿಂದ ಶಾಕ್ ಗೆ ಒಳಗಾಗಿದ್ದಾರೆ. ಬೆಂಗಳೂರಲ್ಲಂತು ಸೆಲೆಬ್ರೇಷನ್ ಸಾಧ್ಯವಿಲ್ಲ, ಆದ್ರೂ ಹೊಸ ವರ್ಷ ಆಚರಿಸಲೇಬೇಕಲ್ವಾ ಎಂದು ಬೇರೆ ಮಾರ್ಗ ಹುಡುಕ್ತಿದ್ದಾರೆ.

ರಾಜ್ಯ ಬಿಟ್ಟು ಹೊರ ರಾಜ್ಯಗಳತ್ತ ಪ್ರಯಾಣಿಸಲು ಜನರು ಸಜ್ಜಾಗುತ್ತಿದ್ದಾರೆ. ಅದ್ರಲ್ಲು ಬೀಚ್ ಇರುವ ಪ್ರವಾಸಿ ತಾಣಗಳಿಗೆ ಹೆಚ್ಚಾಗಿ ಬಸ್ ಗಳು ಬುಕ್ ಆಗ್ತಿವೆ.

ಖಾಸಗಿ ಬಸ್ ಏಜೆಂಟ್ ಪ್ರಕಾರ, ಗೋವಾ, ಗೋಕರ್ಣ ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಗಳು ಬುಕ್ ಆಗ್ತಿವೆ. ಸಾಮಾನ್ಯವಾಗಿ ಗೋವಾಗೆ ನಿತ್ಯ 5 -10 ಬಸ್ ಗಳು ಹೋಗ್ತಾಯಿವೆ, ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಟ್ರಿಪ್ ಗಳು ಬುಕ್ ಆಗ್ತಿರೋದದ್ರಿಂದ ವರ್ಷದ ಕೊನೆ ದಿನಗಳಲ್ಲಿ 25- 30 ಬಸ್ ಗಳು ಹೋಗಲು ತಯಾರಿ ನಡೆಸಲಾಗ್ತಿದೆ. ಇತ್ತ ಗೋಕರ್ಣಾಗೆ ನಿತ್ಯ 5-6 ಬಸ್ ಗಳು ಬುಕ್ ಆಗ್ತಾಯಿದ್ದವು ಆದರೆ ಈಗ 12-15 ಬಸ್ ಗಳ ಅವಶ್ಯಕತೆ ಇದೆ ಎಂಬ ಮಾಹಿತಿ ಇದೆ.

ಟ್ರಿಪ್ ಗಳ ಬೇಡಿಕೆ ಹೆಚ್ಚಾಗ್ತಿದ್ದಂತೆ ಖಾಸಗಿ ಬಸ್ ಗಳ ಟಿಕೆಟ್ ದರದಲ್ಲು ಹೆಚ್ಚಳವಾಗಿದೆ. ಸಾಮಾನ್ಯ ದಿನಗಳಲ್ಲಿ, ಗೋವಾ ಟಿಕೆಟ್ ದರ 1000-1200 ರೂಪಾಯಿ ಇದೆ. ಆದರೆ ಈಗ ಈ ದರ 2000-2200 ರೂಪಾಯಿಯಷ್ಟು ಹೆಚ್ಚಾಗಿದೆ. ಗೋಕರ್ಣದ ಸಾಮಾನ್ಯ ಟಿಕೆಟ್ ದರ – 800-900 ರೂಪಾಯಿ ಇದೆ, ಸಧ್ಯದ ಟಿಕೆಟ್ ದರ 1500-1700ಕ್ಕೆ ಜಿಗಿದಿದೆ. ಟಿಕೆಟ್ ದರ ಹೆಚ್ಚಾದ್ರೂ ನ್ಯೂ ಇಯರ್ ಸೆಲೆಬ್ರೇಷನ್ ಗೆ ತುದಿಗಾಲಲ್ಲಿ ನಿಂತಿರುವ ಜನರು ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಇನ್ನು ಡಿಸೆಂಬರ್ 30-31 ಕ್ಕೆ ಖಾಸಗಿ ಬಸ್ ಟಿಕೆಟ್ ದರ ಮತ್ತಷ್ಟು ಹೆಚ್ಚಾಗೊ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

Sneha Gowda

Recent Posts

ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಸಂಸ್ಕಾರ ಕಲಿಸಿ : ರವಿ ಶಾಸ್ತ್ರಿ

ಮಕ್ಕಳಿಗೆ ಆಸ್ತಿ ಮಾಡಿ ಇರಿಸುವುದರ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಸಂಸ್ಕಾರವಂತರನ್ನಾಗಿ ಮಾಡಿದರೆ ಅದುವೇ ದೊಡ್ಡ ಆಸ್ತಿ ಎಂದು ಶ್ರೀ ಕೃಷ್ಣ…

16 mins ago

ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಲೋಕಾರ್ಪಣೆ

ಮಾಂಡ್ ಸೊಭಾಣ್ ಪ್ರಕಾಶನದ 22 ನೇ ಪುಸ್ತಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಉಲ್ಲಾಳ ಸೋಮೇಶ್ವರದಲ್ಲಿರುವ…

19 mins ago

ʼಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಕರಾಳ ದಿನಗಳನ್ನ ಎದುರಿಸಬೇಕಾಗುತ್ತದೆʼ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶವು ಕರಾಳ ದಿನಗಳನ್ನು ನೋಡಬೇಕಾಗಬಹುದು ಎಂದು ಶಿವಸೇನಾ…

26 mins ago

ವಕೀಲ ಬಾಬಶೆಟ್ಟಿ ಹತ್ಯೆಗೆ 5 ಲಕ್ಷ ಸುಪಾರಿ: ಪ್ರಮುಖ ಆರೋಪಿ ಬಂಧನ

ಐದು ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು, ವಕೀಲನ ಹತ್ಯೆಗೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಬೀದರ್‌ ಜಿಲ್ಲಾ ಪೊಲೀಸರು…

38 mins ago

ದೇಶಾದ್ಯಂತ 24 ಗಂಟೆ ವಿದ್ಯುತ್‌ ಪೂರೈಕೆ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

2024ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ಹತ್ತು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌…

44 mins ago

ಬೀದರ್‌: ಬಿಸಿ ದೋಸೆಯಂತೆ ಮಾರಾಟವಾಗುತ್ತಿದೆ ಎಸಿ, ಕೂಲರ್‌

ಬಿಸಿಲು ಹಾಗೂ ಅದರ ಝಳದಿಂದ ಜನ ಒಂದೆಡೆ ತೀವ್ರ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದರೆ, ಏರ್‌ ಕಂಡಿಷನರ್‌ (ಎಸಿ), ಏರ್‌ ಕೂಲರ್‌ಗಳ…

58 mins ago