ಸಿಎಂ ಸಿದ್ದರಾಮಯ್ಯ ಡಾ.ಸಿದ್ದರಾಮಯ್ಯ ಆಗ್ತಾರಾ?

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಿಂದ ಕೊಡ ಮಾಡುವ ವಿವಿಯ ಗೌರವ ಡಾಕ್ಟರೇಟ್ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿರುವುದು ಕೇಳಿ ಬಂದಿದೆ.

ಇತ್ತೀಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಸದಸ್ಯರು ಸಿದ್ದರಾಮಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡುವುದರ ಕುರಿತು ಚರ್ಚೆ ನಡೆದಿದೆ. ವಿವಿಯ ಗೌರವ ಡಾಕ್ಟರೇಟ್ ಗಾಗಿ ಈ ಬಾರಿ ಬಂದಿದ್ದ ಸುಮಾರು 30 ಅರ್ಜಿಗಳ ಪೈಕಿ ಅಳೆದು ತೂಗಿ 21 ಹೆಸರುಗಳ ಪಟ್ಟಿಯನ್ನು ವಿವಿ ಸಿದ್ಧಪಡಿಸಿದ್ದು ಅದರಲ್ಲಿ ಒಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದಾರೆ ಎನ್ನಲಾಗಿದೆ.

ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವನೆಯಾಗಿ ಚರ್ಚೆ ನಡೆದರೂ ಸಭೆ ಒಮ್ಮತಕ್ಕೆ ಬಾರದೆ ಅನುಮೋದನೆಗೊಂಡಿರಲಿಲ್ಲ. ಹೀಗಾಗಿ ಈ ವಿಚಾರಕ್ಕೆ ಸಂಬಂಧಿಸಿ ಮಾರ್ಚ್ 8 ಅಥವಾ 9ಕ್ಕೆ ಸಭೆ ನಡೆಸುವುದಾಗಿ ವಿವಿ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದ್ದು ಆ ಸಭೆಯಲ್ಲಿ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.

ಸಿಎಂ ಅವರಿಗೆ ಗೌರವ ಡಾಕ್ಟರೇಟ್ ನೀಡುವ ಕುರಿತು ವಿರೋಧಗಳು ಕಡಿಮೆ ಇದ್ದು, ಅವರ ಹೆಸರು ಸೂಚಿಸಿ ಸಾಕಷ್ಟು ಮಂದಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಮುಂದಿನ ಸಿಂಡಿಕೇಟ್ ಸಭೆಯ ಬಳಿಕವಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಸಿದ್ದರಾಮಯ್ಯ ಆಗುತ್ತಾರಾ ಎಂಬುದು ತಿಳಿಯ ಬೇಕಿದೆ.

Desk

Recent Posts

ಖೂಬಾ ಲಿಂಗಾಯತ ಹೋರಾಟದ ವಿರೋಧಿ : ಓಂಪ್ರಕಾಶ ರೊಟ್ಟೆ

ಕೇಂದ್ರ ಸಚಿವ ಭಗವಂತ ಖೂಬಾ ಅವರು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ವಿರೋಧಿಯಾಗಿದ್ದು, ಲಿಂಗಾಯತ ಧರ್ಮೀಯರು ಲೋಕಸಭೆ ಚುನಾವಣೆಯಲ್ಲಿ ಅವರನ್ನು…

35 seconds ago

ಜೆಡಿಎಸ್‌ ತೆನೆಹೊತ್ತ ಮಹಿಳೆ ಚಿಹ್ನೆ ಬದಲಿಸಲಿ : ಬಾಬುರಾವ್‌ ಪಾಸ್ವಾನ್‌

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮಗ ಎಚ್‌.ಡಿ.ರೇವಣ್ಣ, ಅವರ ಮೊಮ್ಮಗ ಪ್ರಜ್ವಲ್‌ ರೇವಣ್ಣನ ಕರ್ಮಕಾಂಡಗಳಿಂದ ರಾಜ್ಯದ ಮಾನ ಹರಾಜಾಗಿದೆ. ಸಾವಿರಾರು ಮಹಿಳೆಯರ…

15 mins ago

ಮರಾಠ ಸಮಾಜಕ್ಕೆ ಬಿಜೆಪಿ ಕೊಡುಗೆ ದೊಡ್ಡದಿದೆ : ಎಂ.ಜಿ. ಮುಳೆ

ಮರಾಠ ಸಮಾಜಕ್ಕೆ ಬಿಜೆಪಿ ಕೊಡುಗೆ ಬಹಳ ದೊಡ್ಡದಿದೆ' ಎಂದು ಮರಾಠ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ…

25 mins ago

ಬಿಪಿ-ಶುಗರ್ ರೋಗಿಗಳ ಅಡುಗೆಗೆ ಈ ಎಣ್ಣೆ ಉತ್ತಮ

ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಅತ್ಯಗತ್ಯ. ಹೆಚ್ಚಿನ ಭಾರತೀಯ ಆಹಾರ ಉತ್ಪನ್ನಗಳಲ್ಲಿ ತೈಲವು ಪ್ರಮುಖ ಅಂಶವಾಗಿದೆ. ಹೀಗಾಗಿ ಎಷ್ಟೋ ಜನ ಬಳಸುವ…

32 mins ago

ಅಯೋದ್ಯೆಗೆ ಮೋದಿ ಬೇಟಿ : ರಾಮಲಲ್ಲಾನಿಗೆ ಸಾಷ್ಟಾಂಗ ನಮಸ್ಕಾರ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ, ದೇಶಾದ್ಯಂತ ಸಾಲು ರ‍್ಯಾಲಿಗಳ ಭರಾಟೆಯ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ…

56 mins ago

ಇಂದು ಈ ರಾಶಿಯವರಿಗೆ ನಿರೀಕ್ಷೆ ತಕ್ಕ ಫಲ ದೊರಕಲಿದೆ

ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ. ಆಪ್ತ ವ್ಯಕ್ತಿಗಳಿಗೆ ಸಹಾಯ ಮಾಡುವಿರಿ. ಮನೆಯಲ್ಲಿ ಕಲಹಗಳಿಗೆ ಆಸ್ಪದ ಕೊಡಬೇಡಿ. ಆರೋಗ್ಯ ಪರಿಪೂರ್ಣವಾಗಿರಲಿದೆ.…

1 hour ago