ಬೆಂಗಳೂರು ನಗರ

ರಾಜ್ಯ ಸರ್ಕಾರ ಅನಗತ್ಯವಾಗಿ ಹಿಜಾಬ್ ವಿವಾದ ಮಾಡಿ ಭೇಟಿ ಹಠಾವೋ ಮಾಡಲು ಹೊರಟಿದೆ; ಹೆಚ್ಡಿಕೆ

ಬೆಂಗಳೂರು : ಕೇಂದ್ರ ಸರಕಾರದ ಬೇಟಿ ಬಚಾವೋ ಬೇಟಿ ಪಡಾವೋ ಘೋಷಣೆ ಈಗ ಬೇಟಿ ಹಠಾವೋ ಆಗಿ ಬದಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು; ” ಹೆಣ್ಣು ಮಕ್ಕಳ ಉದ್ಧಾರಕ್ಕಾಗಿ ಕೇಂದ್ರ ಸರಕಾರ ಭೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಜಾರಿಗೆ ತಂದಿದೆ.

ಅನಆದರೆ ಈಗ ರಾಜ್ಯ ಸರಕಾರವುಗತ್ಯಗಿ ಹಿಜಾಬ್ ವಿಷಯವನ್ನು ವಿವಾದ ಮಾಡುವ ಮೂಲಕ ಭೇಟಿ ಹಠಾವೋ ಮಾಡಲು ಹೊರಟಿದೆ ” ಎಂದರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಸರಿಯಾಗಿ ಶಾಲೆ ಕಾಲೇಜುಗಳು ನಡೆಯದೇ ವಿಧ್ಯಾರ್ಥಿಗಳು ಮತ್ತು ಪೋಷಕರು ಒದ್ದಾಡುತ್ತಿದ್ದಾರೆ. ಇಂಥ ಕಷ್ಟದ ಸಮಯದಲ್ಲಿ ಹಿಜಾಬ್ ವಿವಾವಾದವನ್ನು ಸೃಷ್ಟಿ ಮಾಡಲಾಗಿದೆ. ಇದು ಅನಗತ್ಯವಾಗಿತ್ತು. ರಾಜ್ಯದ ಸಾಮರಸ್ಯವನ್ನು ಹಾಳು ಮಾಡಲಾಗುತ್ತಿದೆ. ಶಾಂತಿಗೆ ಮತ್ತು ಪ್ರಗತಿಗೆ ಹೆಸರಾದ ರಾಜ್ಯದಲ್ಲಿ ಸಾಮರಸ್ಯ ನೆಲೆಸಬೇಕು ಎನ್ನುವ ಮನಸ್ಸಿದ್ದರೆ ರಾಷ್ಟ್ರೀಯ ಪಕ್ಷಗಳ ನಾಯಕರು ಹಿಜಾಬ್ ಮತ್ತು ಕೇಸರಿ ಶಾಲುಗಳ ವಿಷಯವನ್ನು ಇಲ್ಲಿಗೆ ಬಿಡಲಿ ಎಂದು ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.

ಯಾವುದೇ ಅಸೂಯೆ, ದ್ವೇಷ ಇಲ್ಲ ನಿರ್ಮಲ ಮನಸಿನ ಮಕ್ಕಳಲ್ಲಿ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ವಿಷ ತುಂಬುವುದು ಬೇಡ. ಕಳೆದ ಹದಿನೈದು ದಿನಗಳಿಂದ ಕೇಳಿ ಬರುತ್ತಿರುವ ಈ ವಿಷಯವನ್ನು ಇಲ್ಲಿಗೇ ಬಿಡುವುದು ಉತ್ತಮ. ಮುಖ್ಯಮಂತ್ರಿಗಳು ಇಂಥ ಸೂಕ್ಷ್ಮ ವಿಷಯಗಳನ್ನು ಬೆಳೆಯಲು ಬಿಡದೇ ಸರಿಯಾಗಿ ನಿಭಾಯಿಸಬೇಕು. ಯಾವುದೇ ಕಾರಣಕ್ಕೂ ಸಮಾಜದ ವಾತಾವರಣ ಕಲುಷಿತ ಆಗದ ರೀತಿ ನೋಡಿಕೊಳ್ಳಬೇಕು ಎಂದರು.

ಕರಾವಳಿ ಪ್ರದೇಶದಲ್ಲಿ ಕೆಲ ಕಡೆ ಈ ರೀತಿಯ ಹಿಜಾಬ್ ವ್ಯವಸ್ಥೆ ಇತ್ತು ಅನ್ನುವುದು ಗಮನಕ್ಕೆ ನನ್ನ ಗಮನಕ್ಕೆ ಬಂದಿದೆ. ಸೂಕ್ಷ್ಮವಾದ ಇಂಥ ನಂಬಿಕೆಗಳ ಬಗ್ಗೆ ಯಾರೂ ಕೆರಳಿಸುವ ರೀತಿಯಲ್ಲಿ ವರ್ತಿಸಬಾರದು. ಯಾವ ಶಾಲೆಯಲ್ಲಿ ಹಿಜಾಬ್ ಗೆ ಅನುಮತಿ ಕೊಟ್ಟಿದ್ದಾರೋ ಅವರು ಮುಂದುವರೆಸಿಕೊಂಡು ಹೋಗಲಿ. ಹೊಸದಾಗಿ ಈಗ ಕೆಲವರು ಇಂಥವಕ್ಕೆ ಯಾಕೆ ಅನುಮತಿ ಕೊಟ್ಟರು?ಹಿಂದು-ಮುಸ್ಲಿಮ್ ಅನ್ನುವುದಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ಇಂತ ಸಂಕುಚಿತ ಭಾವನೆ ಬೆಳೆಯಲು ಯಾರೂ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.

ಒಂದೆಡೆ ಕೋವಿಡ್, ನಿರುದ್ಯೋಗ, ಬೆಲೆ ಏರಿಕೆ ಇತ್ಯಾದಿ ಸಮಸ್ಯೆಗಳಿಂದ ಜನರು ನರಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಭಯದ ವಾತಾವರಣ ಉಂಟು ಮಾಡುವುದು ಬೇಡ. ರಾಷ್ಟ್ರೀಯ ಪಕ್ಷಗಳಿಗೆ ಶೋಭೆ ತರುವ ಕೆಲಸ ಇದಲ್ಲ. ಹಿಂದಿನಿಂದ ಶಾಲೆಗಳು ಯಾವ ರೀತಿ ನಡೆಯುತ್ತಿದ್ದವೋ ಹಾಗೆ ನಡೆಯಲಿ. ಇರುವ ಉತ್ತಮ ವ್ಯವಸ್ಥೆಯನ್ನು ಯಾರು ಹಾಳು ಮಾಡುವುದು ಬೇಡ ಎಂದರು.

Gayathri SG

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

7 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

8 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

9 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

9 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

9 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

9 hours ago