ರಾಜ್ಯದ ಹಾಸ್ಟೆಲ್ ಗಳಲ್ಲಿ ಹೊಸ ಮಾರ್ಗಸೂಚಿ ಜಾರಿ ಮಾಡಲಾಗಿದೆ: ಸಿಎಂ

ಬೆಂಗಳೂರು : ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿನ  ಆತಂಕ ಹಾಗೂ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಹಾಸ್ಟೆಲ್ ಗಳಲ್ಲಿ ಹೊಸ ಮಾರ್ಗಸೂಚಿ ಜಾರಿ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದ ಹಾಸ್ಟೆಲ್ ಗಳಲ್ಲಿ ಹೊಸ ಮಾರ್ಗಸೂಚಿ ಜಾರಿ ಮಾಡಲಾಗುವುದು. ವಿದ್ಯಾರ್ಥಿಗಳು ಒಟ್ಟಿಗೆ ಊಟ ಮಾಡುವಂತಿಲ್ಲ ಎಂಬ ನಿಯಮವನ್ನು ಜಾರಿಗೆ ತರಲಾಗಿದ್ದು, ಹಾಸ್ಟೆಲ್ ವಿದ್ಯಾರ್ಥಿಗಳು ಅಂತರ ಪಾಲಿಸಿಕೊಂಡು ಊಟ ಮಾಡುವುದಕ್ಕೆ ವ್ಯವಸ್ಥೆ ಮಾಡುವಂತೆ ಹಾಸ್ಟೆಲ್ ಗಳಿಗೆ ಸೂಚನೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ಬಗ್ಗೆ ನಿರ್ಧರಿಸಿಲ್ಲ. ಒಂದು ವಾರದ ಬೆಳವಣಿಗೆ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು. ಕ್ರಿಸ್ ಮಸ್ ಹಾಗೂ ಹೊಸವರ್ಷಾಚರಣೆ ಬಗ್ಗೆಯೂ ಒಂದು ವಾರದ ಬೆಳವಣಿಗೆ ಅವಲೋಕಿಸಿ ನಿರ್ಧಾರ ಮಾಡಲಾಗುವುದು ಎಂದು ಹೇಳಿದ್ದಾರೆ.

ಇನ್ನು ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ತಪಾಸಣೆ ಮುಂದುವರೆಯಲಿದೆ, ಒಂದು ವಾರದ ಬೆಳವಣಿಗೆ ಅವಲೋಕಿಸಿ ನೈಟ್ ಕರ್ಪ್ಯೂ, ವಿಕೇಂಡ್ ಕರ್ಪ್ಯೂ, ಕ್ರಿಸ್ ಮಸ್, ಹೊಸ ವರ್ಷಾಚರಣೆ ಬಗ್ಗೆ ನಿರ್ಧಾರ ಮಾಡಲಾಗುವುದು. ಸದ್ಯಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದರು.

Gayathri SG

Recent Posts

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆಯಡಿ 1 ಲಕ್ಷ ರೂ. ಜಮಾ

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಇಬ್ಬರು ಹೆಂತಿಯರು ಇರುವವರಿಗೆ 2 ಲಕ್ಷ ರೂ. ಆರ್ಥಿಕ ನೆರವು…

4 mins ago

ಕಿಂಗ್ಸ್‌-ರಾಯಲ್ಸ್‌ ಕದನದಲ್ಲಿ ಕಲಾಶ್‌ನಿಕಾವೋ: ಕೊಹ್ಲಿ ಕೆಣಕಿ ಉಳಿದವರುಂಟೇ

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರ್‌ ಸಿ ಬಿ ತಂಡ ಪಂಜಾಬ್ ಕಿಂಗ್ಸ್ ಅನ್ನು 60 ರನ್‌ಗಳಿಂದ…

20 mins ago

ಭಾರೀ ಗಾಳಿ ಮಳೆಗೆ ಮನೆಯ ಗೇಟ್ ಬಿದ್ದು ಬಾಲಕಿ ಮೃತ್ಯು

ಮಳೆ ಜತೆಗೆ ರಭಸವಾಗಿ ಬೀಸಿದ ಬಿರುಗಾಳಿಗೆ ಮನೆಯ ಗೇಟ್ ಕಿತ್ತು ಬಂದಿದ್ದು, ಇದೇ ವೇಳೆ ಮನೆಯ ಮುಂದೆ ಆಟವಾಡುತ್ತಿದ್ದ 7…

23 mins ago

ʼಮೇ 18-19 ಹಳ್ಳಿಗಟ್ಟು ಬೋಡ್ ನಮ್ಮೆ: ಮೇ 11 ರಂದು ದೇವ ಕಟ್ಟ್ ಬೀಳುವುದುʼ

ಕೆಸರಿನ ಓಕುಳಿಯ ಹಬ್ಬವೆಂದು ಖ್ಯಾತಿ ಪಡೆದಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್…

46 mins ago

ಪೂಜೆಗೆ ಅರಳಿ ಹೂವು ಬಳಕೆ ನಿಲ್ಲಿಸಲು ಟಿಡಿಬಿ ತೀರ್ಮಾನ

ಕೇರಳದ ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿಯು (ಟಿಡಿಬಿ) ತನ್ನ ಸುಪರ್ದಿಯಲ್ಲಿರುವ ದೇವಾಲಯಗಳಲ್ಲಿ ಪೂಜೆಗೆ ಅರಳಿ ಹೂವು (ಒಲಿಯಾಂಡರ್‌-ಕಣಗಿಲು ಜಾತಿಗೆ ಸೇರಿದ…

1 hour ago

50 ಕೋ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿಮಾಲ್‌: ಬೀಗ ಜಡಿದ ಬಿಬಿಎಂಪಿ

ಸರಿ ಸುಮಾರು 50 ಕೋಟಿಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗೆ ಬಿಬಿಎಂಪಿ ಬೆಳ್ಳಂಬೆಳಗ್ಗೆಯೇ  ಬೀಗ…

1 hour ago