ರಾಜ್ಯದಲ್ಲಿ 8,126 ಮಕ್ಕಳಿಗೆ ಕರೊನಾ ಸೋಂಕು ದೃಢ

ಬೆಂಗಳೂರು : ರಾಜ್ಯದಲ್ಲಿ ಜ.1ರಿಂದ ಈವರೆಗೆ 19 ವರ್ಷದೊಳಗಿನ 8126 ಮಕ್ಕಳಿಗೆ ಕರೊನಾ ಸೋಂಕು ದೃಢಪಟ್ಟಿದೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಅವಧಿಗಿಂತ 3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಳವಾಗಿದೆ. ಕರೊನಾ ಸೋಂಕು ಈವರೆಗೆ ಲಸಿಕೆ ಪಡೆಯದ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಕೆಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ತಿಳಿಸಿದ್ದು, ಸಾಧ್ಯವಾಗದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

ರಾಜ್ಯದಲ್ಲಿ 3ನೇ ಅಲೆಯ ಸೋಂಕು ಉಲ್ಬಣಗೊಳ್ಳುತ್ತಿದ್ದಂತೆ 1 ರಿಂದ 9ನೇ ತರಗತಿಯ ಮಕ್ಕಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ. ಆದರೂ ಮಕ್ಕಳಲ್ಲಿಯೂ ಸೋಂಕು ಏರಿಕೆ ಆಗುತ್ತಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಜ.1ರಂದು ಕೇವಲ 120 ಮಕ್ಕಳಿಗೆ ದೃಢಪಟ್ಟಿದ್ದ ಸೋಂಕು, ಜ.10ರಂದು 1,600 ಮಕ್ಕಳಲ್ಲಿ ಕಂಡುಬಂದಿದೆ.

ಆತಂಕ ಹೆಚ್ಚಿಸಿದ ವಿಶ್ಲೇಷಣಾ ವರದಿ: ರಾಜ್ಯ ಕೋವಿಡ್ ವಾರ್ ರೂಮ್ ವತಿಯಿಂದ ಜ.1ರಿಂದ ಜ.7ವರೆಗೆ ವರದಿಯಾದ ಸೋಂಕಿತರ ಲಕ್ಷಣಗಳು, ಆರೋಗ್ಯ ಸ್ಥಿತಿ, ಆಸ್ಪತ್ರೆಗೆ ದಾಖಲಾಗುವವರು ಮತ್ತು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಅಥವಾ ಐಸಿಯು ಹಾಸಿಗೆಗೆ ದಾಖಲಾಗುವ ರೋಗಿಗಳ ಬಗ್ಗೆ ವಿಶ್ಲೇಷಣಾ ವರದಿ ಸಿದ್ಧಪಡಿಸಿದೆ. ಇದರಲ್ಲಿ ಸೋಂಕು ದೃಢವಾಗುತ್ತಿರುವವರ ಪೈಕಿ ಶೇ.95 ಲಸಿಕೆ ಪಡೆದವರಾಗಿದ್ದು, ಉಳಿದ ಶೇ.5 ಮಂದಿ ಮಾತ್ರ ಲಸಿಕೆ ಪಡೆಯದವರಿದ್ದಾರೆ. ಆದರೆ, ಆಸ್ಪತ್ರೆಗೆ ದಾಖಲಾಗುವ ಮತ್ತು ಗಂಭೀರ ಸ್ಥಿತಿಗೆ ತಲುಪುವವರ ಪೈಕಿ ಲಸಿಕೆ ಪಡೆಯದವರ ಪ್ರಮಾಣ ಅಧಿಕವಾಗಿದೆ. ಈಗ 0-15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುತ್ತಿಲ್ಲವಾದ್ದರಿಂದ ಇವರಿಗೆ ಸೋಂಕಿನ ಆತಂಕ ಎದುರಾಗಿದೆ.

60 ಸಾವಿರ ಸಕ್ರಿಯ ಪ್ರಕರಣ: ರಾಜ್ಯದಲ್ಲಿ ಸೋಮವಾರ 11,698 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕು ದೃಢತೆ ದರ ಶೇ. 7.77 ತಲುಪಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 60,148ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ನಾಲ್ಕು ಅಂಕಿ ತಲುಪಿದ್ದು, 10 ಜಿಲ್ಲೆಗಳಲ್ಲಿ ಮೂರಂಕಿಗೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1,148 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 29.65 ಲಕ್ಷ ಮೀರಿದೆ. ಸೋಂಕಿತರಲ್ಲಿ 4 ಮಂದಿ ಸಾವನ್ನಪ್ಪಿದ್ದು, ಮೃತರ ಒಟ್ಟು ಸಂಖ್ಯೆ 38,374ಕ್ಕೆ ಏರಿಕೆಯಾಗಿದೆ. ಈವರೆಗೂ 30.63 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ. ಬೆಂಗಳೂರು ನಗರದಲ್ಲಿ ಅತೀ ಹೆಚ್ಚು 9,221, ಮಂಡ್ಯ 306, ಮೈಸೂರು 309, ಉಡುಪಿ 219, ದಕ್ಷಿಣ ಕನ್ನಡ 176, ಹಾಸನ 171, ಧಾರವಾಡ 144, ಬೆಂಗಳೂರು ಗ್ರಾಮಾಂತರ 143, ತುಮಕೂರು 139, ಬೆಳಗಾವಿ 129, ಉತ್ತರ ಕನ್ನಡ 100 ಸೋಂಕು ಪ್ರಕರಣಗಳು ವರದಿಯಾಗಿದೆ. ಉಳಿದಂತೆ 18 ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ 50ಕ್ಕಿಂತ ಕಡಿಮೆ ವರದಿಯಾಗಿದೆ. ಹಾವೇರಿಯಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.

ಒಮಿಕ್ರಾನ್ 479ಕ್ಕೆ ಏರಿಕೆ: ರಾಜ್ಯದಲ್ಲಿ ಸೋಮವಾರ 146 ಒಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಮಿಕ್ರಾನ್ ಸೋಂಕಿತರ ಒಟ್ಟು ಸಂಖ್ಯೆ 479ಕ್ಕೆ ಏರಿಕೆಯಾಗಿದೆ.

ಬೆಂಗಳೂರಲ್ಲಿ ಶೇ.90 ಕೇಸ್: ಪ್ರತಿನಿತ್ಯ ರಾಜ್ಯದಲ್ಲಿ ವರದಿಯಾಗುವ ಒಟ್ಟಾರೆ ಕೋವಿಡ್ ಪ್ರಕರಣಗಳ ಪೈಕಿ ರಾಜಧಾನಿಯಲ್ಲಿಯೇ ಶೇ.85 ಪ್ರಕರಣ ವರದಿ ಆಗುತ್ತಿವೆ. ಈ ಪೈಕಿ 19 ವರ್ಷದೊಳಗಿನ ಮಕ್ಕಳಿಗೆ ದೃಢವಾಗುವ ಪ್ರಕರಣಗಳ ಪೈಕಿ ಶೇ.90 ಬೆಂಗಳೂರು ನಗರ ಜಿಲ್ಲೆಯ ಮಕ್ಕಳಾಗಿದ್ದಾರೆ. ಇಡೀ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸೋಂಕಿತ ಮಕ್ಕಳ ಚಿಕಿತ್ಸೆಗೆ ಐಸಿಯು, ಆಕ್ಸಿಜನ್ ಹಾಗೂ ಜನರಲ್ ಬೆಡ್ ಸೇರಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಿದೆ. 3ನೇ ಅಲೆ ಕಾಣಿಸಿಕೊಂಡು ನಿತ್ಯ 500 ರಿಂದ 1,200 ಮಕ್ಕಳಿಗೆ ಸೋಂಕು ಪತ್ತೆ ಆಗುತ್ತಿದ್ದರೂ ಕೋವಿಡ್ ಆರೈಕೆ ಕೇಂದ್ರ ಆರಂಭಿಸದೆ ಬಿಬಿಎಂಪಿ ನಿರ್ಲಕ್ಷ್ಯವಹಿಸಿದೆ.

 

Gayathri SG

Recent Posts

ಟಿ20 ವಿಶ್ವಕಪ್​ಗೆ ಮುನ್ನ ರಿಷಭ್​ ಪಂತ್​​ಗೆ ನಿಷೇಧ, 30 ಲಕ್ಷ ರೂ. ದಂಡ

17ನೇ ಆವೃತ್ತಿಯ ಐಪಿಎಲ್​ನ 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಡುವೆ ಹೈವೋಲ್ಟೇಜ್ ಪಂದ್ಯ…

3 mins ago

ʼರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿ ರೈತರಿಗೆ ನೆರವಾಗಬೇಕುʼ

ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿ ರೈತರಿಗೆ ನೆರವಾಗಬೇಕು ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

5 mins ago

ಪ್ರವಾಹಕ್ಕೆ ತತ್ತರಿಸಿ ಹೋದ ಅಫ್ಗಾನಿಸ್ತಾನ : 200ಕ್ಕೂ ಹೆಚ್ಚು ಜನ ಬಲಿ

ಅಫ್ಘಾನಿಸ್ತಾನದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಈ ಪ್ರವಾಹದಿಂದಾಗಿ ಸುಮಾರು 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಶನಿವಾರ…

25 mins ago

ಫ್ಲೈಯಿಂಗ್ ಎಲೆಕ್ಟ್ರಿಕ್ ಟ್ಯಾಕ್ಸಿ ನಿರ್ಮಿಸಲು ಮುಂದಾದ ಮದ್ರಾಸ್ ಐಐಟಿ-ಶ್ಲಾಘಿಸಿದ ಆನಂದ್ ಮಹೀಂದ್ರಾ

ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಯನ್ನು ಅಭಿವೃದ್ಧಿಪಡಿಸುತ್ತಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‍ನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು…

37 mins ago

ಜಮ್ಮು –ಕಾಶ್ಮೀರ : ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್)…

46 mins ago

ನೂಕುನುಗ್ಗಲಿನಲ್ಲೂ ಪಾದಯಾತ್ರೆ ಹೊರಟ ಭಕ್ತರು : ವಿಡಿಯೋ ವೈರಲ್‌

ಯಮುನೋತ್ರಿ, ಗಂಗೋತ್ರಿ, ಕೇದರ್‌ನಾಥ್‌ ಮತ್ತು ಬದರಿನಾಥ್‌ ಪವಿತ್ರ ಚಾರ್‌ ಧಾಮ್‌ ಯಾತ್ರೆಯ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ಭಕ್ತರು ಜಮಾಯಿಸಿದ ಪರಿಣಾಮ…

1 hour ago