ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರೋದು ಖಚಿತ: ಕುಮಾರಸ್ವಾಮಿ

ಬೆಂಗಳೂರು: ಯಾರು ಯಾವುದೇ ಸಮೀಕ್ಷೆ ನಡೆಸಿದರೂ ಮುಂದಿನ ವಿಧಾನಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಆಡಳಿತ ನಡೆಸುವುದು ಜೆಡಿಎಸ್ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ನಡೆಸಿದ ಖಾಸಗಿ ಸಂಸ್ಥೆಯ ವರದಿ ಪ್ರಕಾರ ಈ ಮಾತನ್ನು ಹೇಳುತ್ತಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲೇ ಮೊದಲ ಸ್ಥಾನಕ್ಕೆ ಬರಲಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಹುಮತಕ್ಕೆ ಅಗತ್ಯವಿರುವ 113 ಸ್ಥಾನಗಳನ್ನು ಪಡೆಯಲು ಶ್ರಮಿಸಲಾಗುತ್ತಿದ್ದು, ಬಿಜೆಪಿಗಿಂತ ಕನಿಷ್ಠ 10-15 ಸ್ಥಾನಗಳು ಜೆಡಿಎಸ್ ಗೆ ಹೆಚ್ಚುವರಿಯಾಗಿ ದೊರೆಯಲಿವೆ ಎಂಬುದಾಗಿ ಹೇಳಿದರು.

ಸಿ4 ಸಂಸ್ಥೆಯ ಸಮೀಕ್ಷೆ ಕಾಂಗ್ರೆಸ್ಗೆ ತಾತ್ಕಾಲಿಕವಾಗಿ ಆನಂದ ಅಷ್ಟೆ. ತಾವು ಕ್ಷೇತ್ರವಾರು ಸಮೀಕ್ಷೆ ನಡೆಸಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗುಪ್ತಚರ ಇಲಾಖೆಗಳ ಚುನಾವಣಾ ಪೂರ್ವ ವರದಿಯ ಮಾಹಿತಿಯೂ ನಮ್ಮಲ್ಲಿರುವುದಾಗಿ ಹೇಳಿದರು. ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ ಸಿ4 ಸಂಸ್ಥೆಯ ಮಾಲೀಕರು ಕೆಂಪಯ್ಯನವರು ಗೃಹ ಇಲಾಖೆಯ ಸಚಿವರು ಎಂದು ವೆಬ್ ಸೈಟ್ ನಲ್ಲಿ ಪ್ರಕಟಿಸಿಕೊಂಡಿದ್ದಾರೆ. ಕಾಂಗ್ರೆಸ್ ನ ಸಚಿವರೊಂದಿಗಿರುವ ಪೋಟೋವನ್ನು ಹಾಕಿದ್ದಾರೆ. ಇಂತಹ ಸಂಸ್ಥೆಯಿಂದ ಇನ್ನೆಂಥ ಸಮೀಕ್ಷೆ ಬರಹುದು ಎಂದು ವ್ಯಂಗ್ಯವಾಡಿದರು.

ಗಾಜಿನ ಮನೆಯಲ್ಲಿ ಕೂತು ವಿರೋಧ ಪಕ್ಷಗಳನ್ನು ಕೆರಳಿಸಬೇಡಿ. ಹೆಚ್ಚುವರಿ ಮುಖ್ಯಕಾರ್ಯದರ್ಶಿ ಆಗಿದ್ದ ಉಮೇಶ್ ಅವರು ನೀಡಿದ್ದ ವರದಿ ಪ್ರಕಾರ ಎಷ್ಟು ಜನ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದೀರಿ? ಭ್ರಷ್ಟಾಚಾರ, ಪ್ರಾಮಾಣಿಕತೆ ಬಗ್ಗೆ ಮಾತನಾಡುವ ನೀವು ಮರಳು ದಂಧೆ, ಮಟ್ಕಾ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

Desk

Recent Posts

ಮೊಬೈಲ್‌ ಬಳಕೆ ಕಡಿಮೆ ಮಾಡು ಎಂದಿದಕ್ಕೆ ಅಣ್ಣನನ್ನೇ ಕೊಂದ ತಂಗಿ

ಮೊಬೈಲ್‌ ಬಳಕೆ ಕಡಿಮೆ ಮಾಡು ಎಂದು ತಿಳಿಹೇಳಿದಕ್ಕೆ ತಂಗಿಯೊಬ್ಬಳು ಅಣ್ಣನನ್ನು ಹತ್ಯೆ ಮಾಡಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. 14 ವರ್ಷದ…

7 mins ago

ಇಂದು ಸಂಜೆ ಅಯೋಧ್ಯೆಗೆ ಮೋದಿ ಭೇಟಿ; ರಾಮಲಲ್ಲಾನ ದರ್ಶನ, ರೋಡ್ ಶೋ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ರಾಮಲಲ್ಲಾನ ದರ್ಶನ ಪಡೆದು ಬಳಿಕ ರೋಡ್​ ಶೋ…

12 mins ago

ದಾಖಲೆಗಳ ಸರದಾರ ಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆ

ಐಪಿಎಲ್​ನ 52ನೇ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಹೊಸ ಮೈಲುಗಲ್ಲು ದಾಟಿದ್ದಾರೆ. ಈ ಮೂಲಕ ಈ ಸಾಧನೆ…

26 mins ago

ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ ಕಾರು ಭೀಕರ ಅಪಘಾತ : ಆಸ್ಪತ್ರಗೆ ದಾಖಲು

ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿಯ ಕಾರು ಅಪಘಾತಕ್ಕೊಳಗಾಗಿದೆ. ಅಪಘಾತದಲ್ಲಿ ಶಿವಕುಮಾರ ಸ್ವಾಮೀಜಿಗೆ ಗಾಯಗಳಾಗಿದ್ದು, ಆ್ಯಂಬುಲೆನ್ಸ್ ಮೂಲಕ ಸ್ವಾಮೀಜಿಯನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

32 mins ago

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಗಂಡು ಹುಲಿ ಕಳೇಬರ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಹೆಡಿಯಾಲ ಉಪ ವಿಭಾಗದ ಹೆಬ್ಬಳ್ಳ ಗಸ್ತಿನ ಚಾಮಲಾಪುರ ಅರಣ್ಯ ಪ್ರದೇಶದಲ್ಲಿ ಹುಲಿಯೊಂದರ ಮೃತದೇಹಪತ್ತೆಯಾಗಿದ್ದು 11…

53 mins ago

ಅತ್ಯಾಚಾರ ಆರೋಪ; ಎಸ್‌ಐಟಿ ವಿಚಾರಣೆಗೆ ಸಹಕರಿಸದ ಹೆಚ್​ಡಿ ರೇವಣ್ಣ

ಅತ್ಯಾಚಾರ ಆರೋಪ ಮತ್ತು ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಮತ್ತು ಹಾಲಿ ಶಾಸಕ ಹೆಚ್​ಡಿ ರೇವಣ್ಣರನ್ನು ಕಳೆದ ದಿನ ಎಸ್​ಐಟಿ…

1 hour ago