ಬೆಂಗಳೂರು ನಗರ

ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣ ಅಳವಡಿಕೆ : ಬಿ.ಸಿ.ನಾಗೇಶ್

ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣ ಅಳವಡಿಕೆ ಮಾಡಲಾಗುವುದು. ಇಲ್ಲಿ ಭಗವದ್ಗೀತೆ, ಪಂಚತಂತ್ರ ಕಥೆಗಳು, ಮಹಾಭಾರತ ಎಲ್ಲವೂ ಭಾಗವಾಗಿರಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಬೆಂಗಳೂರು ವಿಧಾನಸೌಧದಲ್ಲಿ ‌ಮಾತನಾಡಿದ ಅವರು, ಯಾವ ವಿಚಾರ ಮಕ್ಕಳ ನೈತಿಕತೆ ಹೆಚ್ಚು ಮಾಡುತ್ತವೆಯೋ ಅದನ್ನು ಅಳವಡಿಸುತ್ತೇವೆ.ಇಲ್ಲಿ ಯಾವುದೇ ಧರ್ಮಕ್ಕೆ ಸೀಮಿತ ಮಾಡಲ್ಲ. ಯಾವ ಉತ್ತಮ ಅಂಶ ನಮ್ಮ ಮಕ್ಕಳಿಗೆ ಒಳ್ಳೆಯದು ಮಾಡುತ್ತದೆಯೋ ಅದು ಯಾವುದೇ ಧರ್ಮದ್ದಾಗಿರಲಿ, ಅವುಗಳನ್ನು ಅಳವಡಿಕೆ ಮಾಡುತ್ತೇವೆ. ಆದರೆ, ಯಾವ ಧರ್ಮದ ಮಕ್ಕಳು ಹೆಚ್ಚಿನ‌ ಸಂಖ್ಯೆಯಲ್ಲಿ ನಮ್ಮ ಶಾಲೆಗಳಿಗೆ ಬರುತ್ತಾರೋ ಆ ಮಕ್ಕಳು ಕೇಳುವಂತಹ ವಿಚಾರಗಳನ್ನು ಅಳವಡಿಸುತ್ತೇವೆ. 90% ಮಕ್ಕಳು ಯಾರು ಇರುತ್ತಾರೋ ಆ ಧರ್ಮದ ಅಂಶಗಳು ಹೆಚ್ಚು ಇರುತ್ತವೆ. ಇದು ಅನಿವಾರ್ಯ ಎಂದರು.

ಪಠ್ಯದಿಂದ ಟಿಪ್ಪು ಮೈಸೂರು ಹುಲಿ ಎಂಬುದನ್ನು ಕೈ ಬಿಟ್ಟಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಟಿಪ್ಪು ಪಾಠವನ್ನು ಪಠ್ಯದಿಂದ ಕೈಬಿಡಿ ಎಂದು ಮನವಿ ಮಾಡಿದ್ದಾರೆ. ಈ ಕುರಿತಾಗಿ ಸಾಕ್ಷಿ ಸಹಿತ ಬೇಡಿಕೆ ಇಟ್ಟಿದ್ದಾರೆ‌ ಎಂದರು. ಟಿಪ್ಪು ಪಾಠವನ್ನು ಕೈಬಿಡಲ್ಲ ಅಂತಾದರೆ ಟಿಪ್ಪುವಿನ ಎಲ್ಲ ಮುಖ ತೋರಿಸಿ.

ಟಿಪ್ಪು ಕನ್ನಡ ವಿರೋಧಿಯಾಗಿದ್ದರು. ಕನ್ನಡ ಭಾಷೆ ಬದಲಾಗಿ ಪರ್ಷಿಯನ್ ಭಾಷೆಯನ್ನು ಆಡಳಿತಕ್ಕೆ ತಂದರು. ಕೊಡಗಿನಲ್ಲಿ ದೌರ್ಜನ್ಯ ಮಾಡಿರುವ ಅಂಶಗಳನ್ನು ಪಠ್ಯದಲ್ಲಿ ಸೇರಿಸುವಂತೆ ಆಗ್ರಹಿಸಿದ್ದಾರೆ. ಆದರೆ, ಟಿಪ್ಪು ವಿಚಾರಗಳನ್ನು ಪಠ್ಯದಿಂದ ಕೈಬಿಟ್ಟಿಲ್ಲ. ಮೈಸೂರು ಹುಲಿ ಎಂಬ ಅಂಶವನ್ನು ಕೈಬಿಟ್ಟಿಲ್ಲ. ಅನಗತ್ಯ ಅಂಶಗಳನ್ನು ಕೈಬಿಡಲಾಗುವುದು. ಯಾವ ಅಂಶವನ್ನು ಕೈಬಿಡಲಾಗುವುದು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದರು.

ಮದರಸಾಗಳಲ್ಲಿ ಶಿಕ್ಷಣ ಇಲಾಖೆಯ ಪಠ್ಯಕ್ರಮ ಅಳವಡಿಕೆಗೆ ಮದರಸಾಗಳಿಂದ ಬೇಡಿಕೆ ಬಂದಿಲ್ಲ. ಆದರೆ, ಪೋಷಕರು ಮದರಸಾ ಶಿಕ್ಷಣದಿಂದ ನಮ್ಮ ಮಕ್ಕಳು ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಆಗುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ಕಷ್ಟ ಆಗುತ್ತಿದೆ. ಪ್ರೊಫೆಷನಲ್ ಕೋರ್ಸ್ ಪಡೆದುಕೊಳ್ಳುವುದು ಕಷ್ಟ. ಬೇರೆ ಮಕ್ಕಳಿಗೆ ‌ಕೊಟ್ಟ ಹಾಗೆ ಶಿಕ್ಷಣ ಕೊಡಿ ಎಂಬ ಮನವಿ ಮಾಡಿದ್ದಾರೆ ಎಂದರು‌.

Sneha Gowda

Recent Posts

‘ಜಂಟಿ ಸರ್ವೆ ಆಗುವ ತನಕ ಹಿರೀಕಾಟಿಯಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸದಿದ್ದರೆ ಉಗ್ರ ಹೋರಾಟ’

ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಿರೀಕಾಟಿ ಗ್ರಾಮದ ಸರ್ವೆ ನಂ. 108 ರಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರಿಗೆ ಸೇರಿದ 2 ಎಕರೆ…

2 mins ago

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸಿಬ್ಬಂದಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ ದರ್ಜೆ ಸಹಾಯಕ ವಿಜಯ್ ಕುಮಾರ್ ಕೆಲಸದ ವಿಚಾರವಾಗಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

9 mins ago

ದುರಸ್ತಿ ಮಾಡಿ ವಾರ ಕಳೆಯುವ ಮೊದಲೇ ಕಿತ್ತು ಬಂದ ರಸ್ತೆ

ಪಟ್ಟಣದ ಬಸವಕಲ್ಯಾಣ-ಭಾಲ್ಕಿ ಮುಖ್ಯ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ವಾರದ ಹಿಂದೆ ರಸ್ತೆ ದುರಸ್ತಿ ಕಾಮಗಾರಿ ಮಾಡಲಾಗಿದ್ದು, ವಾರ ಕಳೆಯುವ…

16 mins ago

ಬಿರುಗಾಳಿ ಸಹಿತ ಮಳೆಗೆ ಕಬ್ಬಿಣದ ಬಸವ ಮಹಾದ್ವಾರ ಕುಸಿತ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…

28 mins ago

ನೂರಕ್ಕೆ ನೂರು ‘ಇಂಡಿಯಾ’ ಮೈತ್ರಿಗೆ ಅಧಿಕಾರ: ಈಶ್ವರ ಖಂಡ್ರೆ

'ದೇಶದಲ್ಲಿ ಈ ಸಲ 'ಇಂಡಿಯಾ' ಒಕ್ಕೂಟ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ…

33 mins ago

ನಾನು ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ ಎಂದ ವಿರಾಟ್​​ ಕೊಹ್ಲಿ

ವಿರಾಟ್​​ ಕೊಹ್ಲಿ ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ. ಅವರು ಹೇಳಿರುವ ಆಡಿಯೋ ಸಮೇತ ದೃಶ್ಯ ವೈರಲ್​ ಆಗಿದೆ. 

47 mins ago