ಮಾಜಿ ಸಿಎಂ ಯಡಿಯೂರಪ್ಪ ಹುಟ್ಟುಹಬ್ಬದ ದಿನ ಬಿಜೆಪಿ  ಪಕ್ಷ ಕಾರ್ಯಕರ್ತರಿಗೆ ಭರ್ಜರಿ ಗಿಫ್ಟ್

ಬೆಂಗಳೂರು (ಫೆ.27) : ಹುಟ್ಟುಹಬ್ಬದ ದಿನ ಮಾಜಿ ಸಿಎಂ ಯಡಿಯೂರಪ್ಪ ಹೆಸರಲ್ಲಿ ಬಿಜೆಪಿ  ಪಕ್ಷ ಕಾರ್ಯಕರ್ತರಿಗೆ ಭರ್ಜರಿ ಗಿಫ್ಟ್ ​ ನೀಡಿದೆ. ಬಿಜೆಪಿಗಾಗಿ ದುಡಿದ ರೈತ  ಕಾರ್ಯಕರ್ತರಿಗೆ ಉಚಿತವಾಗಿ ಟ್ರ್ಯಾಕ್ಟರ್ ನೀಡಿದ್ರು.

ಇವತ್ತು ಬಿಜೆಪಿ ನಾಯಕ ಬಿ.ಎಸ್​ ಯಡಿಯೂರಪ್ಪ ಅವರ ಹುಟ್ಟುಹಬ್ಬ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿರೋ ಯಡಿಯೂರಪ್ಪ ಅವರಿಗೆ ಪಕ್ಷದ ವರಿಷ್ಠರಿಂದ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ. ಇದರ ಜೊತೆಗೆ ಬಿಜೆಪಿ ಪಕ್ಷ 15 ಟ್ರ್ಯಾಕ್ಟರ್​ಗಳನ್ನು ರೈತ ಕಾರ್ಯಕರ್ತರಿಗೆ ನೀಡಲು ನಿರ್ಧರಿಸಿದ್ರು. ಬಿಎಸ್​ವೈ ಹುಟ್ಟುಹಬ್ಬ ಹಿನ್ನೆಲೆ ಇವತ್ತು ಪಕ್ಷದ ಗಣ್ಯರು ರೈತರಿಗೆ ಟ್ರ್ಯಾಕ್ಟರ್ ವಿತರಿಸಿದ್ದಾರೆ. ಕರ್ನಾಟಕ ಗ್ರಾಮೀಣ ಮೂಲ ಸವಲತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರುದ್ರೇಶ್ ನೇತೃತ್ವದಲ್ಲಿ ಟ್ರ್ಯಾಕ್ಟರ್​ ವಿತರಣಾ ಕಾರ್ಯಕ್ರಮವನ್ನು ಇಂದು ಯಡಿಯೂರಪ್ಪ ಅವರ ಕಾವೇರಿ ನಿವಾಸದಲ್ಲಿ ಆಯೋಜಿಸಲಾಗಿತ್ತು.

ಯಡಿಯೂರಪ್ಪ ಅವರು ಪಕ್ಷವನ್ನು ತಳ ಹಂತದಿಂದ ಕಟ್ಟಿ ಬೆಳೆಸುವ ಜೊತೆಗೆ 4 ಬಾರಿ ಮುಖ್ಯಮಂತ್ರಿಯಾಗಿ ರೈತರ ಜತೆಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ರೈತರ ಜತೆಗೆ ಎಲ್ಲಾ ಜಾತಿ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಜನ್ಮದಿನ ಅಂಗವಾಗಿ ಕಾರ್ಯಕ್ರಮ ಟ್ರ್ಯಾಕ್ಟರ್​ ವಿತರಣಾ ಕಾರ್ಯಕ್ರಮ ಆಯೋಜಿಸಿದ್ದಾಗಿ ರುದ್ರೇಶ್ ಹೇಳಿದ್ರು. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್​ ಬೊಮ್ಮಾಯಿ, ಸಚಿವ ಸಂಪುಟ ಸಹೋದ್ಯೋಗಿಗಳು, ಶಾಸಕರು, ಕಾರ್ಯಕರ್ತರು ಭಾಗಿಯಾಗಿದ್ರು.

ಇನ್ನು ಉಚಿತವಾಗಿ ರೈತ ಕಾರ್ಯಕರ್ತರಿಗೆ ಟ್ರ್ಯಾಕ್ಟರ್ ನೀಡೋ ಕಾರ್ಯಕ್ರಮಕ್ಕೆ ಕೆಆರ್​ಐಡಿಎಲ್ ಅಧ್ಯಕ್ಷ ಚಂದು ಪಾಟೀಲ, ಕೆಎಸ್​ಎಸ್‌ಎಸ್​ಐಡಿದಸಿ ಅಧ್ಯಕ್ಷೆ ಡಾ. ಶೈಲೇಂದ್ರ ಬಿಲ್ದಾಳೆ, ಎಸ್​ಟಿಆರ್​ಆರ್ ಅಧ್ಯಕ್ಷ ಮುನಿರಾಜು, ಬಿಎಂಐಸಿಸಿಸ ಅಧ್ಯಕ್ಷ ಜೈದೇವ್​, ಎಂಎಂಎಲ್ ಅಧ್ಯಕ್ಷ ಮುನಿರಾಜು ಕೈಜೋಡಿಸಿದ್ದಾರೆಂದು ರುದ್ರೇಶ್ ತಿಳಿಸಿದ್ದಾರೆ.

ರ್ನಾಟಕದ ರಾಜಕಾರಣದಲ್ಲಿ ‘ರಾಜಾಹುಲಿ’ ಎಂದೇ ಜನಪ್ರಿಯವಾಗಿರುವ, ಶಿಕಾರಿಪುರ ಎಂದಾಕ್ಷಣ ನೆನಪಾಗುವ ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ ಅವರಿಗೆ ಇಂದು ಹುಟ್ಟು ಹಬ್ಬದ ಸಡಗರ, ಸಂಭ್ರಮ. ಯಡಿಯೂರಪ್ಪ ಅವರು ಇಂದು 80 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪನರಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಬಡವರು, ದಲಿತರು, ರೈತರ ಪರ ಹೋರಾಟ ನಡೆಸಿದ ಹೆಮ್ಮೆ ಬಿಎಸ್ ವೈ ಅವರದ್ದು. ಅಸಾಧಾರಣ ನಾಯಕನಾಗಿ, ರಾಜ್ಯದ ಜನರ, ರೈತ ಬಂಧುಗಳ, ದುರ್ಬಲರ ಆಶೋತ್ತರಗಳಿಗಾಗಿ ದುಡಿದ ನಾಯಕ ಬಿಎಸ್ ವೈ. ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದವರು ಬಿಎಸ್ ವೈ.

Gayathri SG

Recent Posts

ಭಾರತದಲ್ಲಿ ಹಿಂದುಗಳ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ: ಆರ್ಥಿಕ ಸಲಹಾ ಮಂಡಳಿ

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿದ್ದು ಇದೇ ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ…

14 mins ago

ಪಟಾಕಿ ತಯಾರಿಕಾ ಕಾರ್ಖಾನೆ ಸ್ಫೋಟ: 8 ಮಂದಿ ಮೃತ್ಯು

ಕಾರ್ಖಾನೆಯೊಂದರಲ್ಲಿ ಪಟಾಕಿ ಸಿಡಿದು 8 ಜನರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಕಾಶಿಯಲ್ಲಿ ನಡೆದಿದೆ.

31 mins ago

ಹಾಸನ ವಿಡಿಯೋ ಪ್ರಕರಣ: ಸುಳ್ಳು ದೂರಿನ ಒತ್ತಡ

ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿದ್ದಾರೆ. ಶಾಸಕ ರೇವಣ್ಣ ಜೈಲು ಶಿಕ್ಷೆಗೆ ಗುರಿಗಾಗಿದ್ದಾರೆ. ಈ…

45 mins ago

ಮದುವೆ ರದ್ದು, ಕೋಪದಿಂದ ಅಪ್ರಾಪ್ತ ಬಾಲಕಿಯ ರುಂಡ ಕತ್ತರಿಸಿ ಕೊಲೆ ಮಾಡಿದ ಪ್ರೇಮಿ

ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ ಕೊಲೆ ಮಾಡಿದ ಘಟನೆ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ನಡೆದಿದೆ.

1 hour ago

ಅಕ್ಷಯ ತೃತೀಯದಂದು ಲಕ್ಷ್ಮಿ ಮತ್ತು ಕುಬೇರನಿಗೆ ವಿಶೇಷ ಪೂಜೆ

ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ,…

1 hour ago

ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ದರ ಪಟ್ಟಿ ಹೀಗಿದೆ!

ಇಂದು ಅಕ್ಷಯ ತೃತೀಯ ದಿನವಾಗಿದ್ದು, ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸತತ ಏರಿಕೆಯ ಬಳಿಕ ಎರಡು ದಿನ ಸತತ ಬೆಲೆ…

2 hours ago