News Karnataka Kannada
Tuesday, April 30 2024
ಬೆಂಗಳೂರು ನಗರ

ಮಹಾತ್ಮ ಗಾಂಧೀಜಿ ಪತ್ನಿ ಕೂಡ ತಲೆ ಮೇಲೆ ಸೆರಗು ಹಾಕುತ್ತಿದ್ದರು: ಹೆಚ್‌.ಡಿ.ಕುಮಾರಸ್ವಾಮಿ

Photo Credit :

ಬೆಂಗಳೂರು : ಮಹಾತ್ಮ ಗಾಂಧೀಜಿ ಅವರ ಧರ್ಮಪತ್ನಿ ಕಸ್ತೂರ ಬಾ ಅವರು ಕೂಡ ತಲೆಗೆ ಸೆರಗು ಹಾಕುತ್ತಿದ್ದರು ಎಂದು ಹಿಜಬ್‌ಗೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದ ಎದುರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಫೋಟೋದಲ್ಲೆಲ್ಲ ನೋಡಿದ್ದೇವೆ. ಕಸ್ತೂರ ಬಾ ಅವರು ಕೂಡ ತಲೆಗೆ ಸೆರಗು ಹಾಕುತ್ತಿದ್ದರು. ಎಷ್ಟೋ ಬಾರಿ ಬಿಸಿಲಿನ ತಾಪಕ್ಕೆ ಹಿಂದೂ, ಮುಸ್ಲಿಂ ಹೆಣ್ಣುಮಕ್ಕಳು ಶಾಲೆಗೆ ಹೋಗುವಾಗ ಸಮವಸ್ತ್ರದೊಂದಿಗೆ ತಲೆಗೆ ದುಪ್ಪಟ್ಟ ಥರ ಹಾಕುತ್ತಿದ್ದರು. ಅದಕ್ಕೆ ಸಂಬಂಧಿಸಿದ ಫೋಟೋಗಳು ಕೂಡ ನಮ್ಮ ಬಳಿ ಇವೆ. ಎಲ್ಲಾ ಸಮುದಾಯದ ಹೆಣ್ಣುಮಕ್ಕಳು ಯಾವುದೇ ವಿವಾದವಿಲ್ಲದೇ ಕೈಕೈ ಹಿಡಿದು ಶಾಲೆಗೆ ಹೋಗುತ್ತಿರುವ ಫೋಟೋಗಳು ಕೂಡ ಇವೆ. ಅದನ್ನು ಈಗ ವಿವಾದ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಹೆಣ್ಣು ಮಕ್ಕಳು ಸಮವಸ್ತ್ರದ ಜೊತೆಗೆ ಅನೇಕ ಸಂದರ್ಭಗಳಲ್ಲಿ ತಮಗೆ ಬೇಕಾದಂತೆ ದುಪ್ಪಟ್ಟ ಧರಿಸುತ್ತಾರೆ. ಅದನ್ನು ವಿವಾದ ಮಾಡುವುದನ್ನು ಬಿಟ್ಟು ಸರ್ಕಾರ ಸಮವಸ್ತ್ರಕ್ಕೆ ಪೂರಕವಾಗಿ ದುಪ್ಪಟ್ಟ ಹಾಕಿ ಬರುವುದಕ್ಕೆ ಅವಕಾಶ ಮಾಡಿಕೊಡಲಿ. ತಲೆ ಮೇಲೆ ಸೆರಗಿನ ರೀತಿ ವಸ್ತ್ರವನ್ನು ಹಾಕಿಕೊಂಡು ಬರುವುದಕ್ಕೆ ಅವಕಾಶ ಮಾಡಿಕೊಟ್ಟರೆ ಮುಗಿದೇ ಹೋಯಿತು. ಅದನ್ನು ವಿವಾದ ಮಾಡುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಈ ಎಲ್ಲಾ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಸಿಎಂ, ಹೆಣ್ಣುಮಕ್ಕಳಿಗೆ ಸನ್ಮಾನ ಮಾಡುವಾಗಲೂ ತಲೆಗೆ ಬಟ್ಟೆ ಹಾಕಿಕೊಂಡಿದ್ದರು. ಕೆಲವರು ಸೊಂಟಕ್ಕೆ ದುಪ್ಪಟ್ಟು ಕಟ್ಟುತ್ತಾರೆ. ಆಟ ಆಡುವಾಗಲೂ ಬೇರೆ ವಿಧಾನದಲ್ಲಿ ದುಪ್ಪಟ್ಟ ಹಾಕುತ್ತಾರೆ. ಮಕ್ಕಳು ಆ ದುಪ್ಪಟ್ಟವನ್ನು ಯಾವ ರೀತಿಯ ಬೇಕಾದರೂ ಹಾಕಬಹುದು. ರಾಜಕೀಯಕ್ಕಾಗಿ ಅದನ್ನು ಬಳಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ.

ರಾಜಕೀಯ ಉದ್ದೇಶದಿಂದ ಮುಂಚೂಣಿಗೆ ಬಂದ ಈ ಎಲ್ಲ ಅನಪೇಕ್ಷಿತ ವಿವಾದಗಳಿಂದ ಮಕ್ಕಳಿಗೆ ಅನ್ಯಾಯ ಆಗಿದೆ. ನಿಜಕ್ಕೂ ಅವರೇ ಬಲಿಪಶುಗಳು. ಇದನ್ನು ಸರಕಾರವಾಗಲಿ ಅಥವಾ ಮಕ್ಕಳು, ಪೋಷಕರು ಲಘುವಾಗಿ ಪರಿಗಣಿಸಬಾರದು ಎಂದು ಮಾಜಿ ಮುಖ್ಯಮಂತ್ರಿಗಳು ಮನವಿ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು